
Ujire: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ 25,000 ರೂ. ಸಹಾಯಧನ ವಿತರಣೆ
Thursday, July 4, 2024
ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ) ಬೆಳ್ತಂಗಡಿ ತಾಲೂಕು ಉಜಿರೆ ವಲಯದ ಶ್ರೀ ನಾಗವೇಣಿ ಸ್ವ-ಸಹಾಯ ಸಂಘದ ಸದಸ್ಯೆ ಸುನೀತಾ ಅವರು ರಕ್ತ ವಾತ ಸಂಬಂದಿ ಕಾಯಿಲೆಯಿಂದ ಬಳಲುತಿದ್ದು ಸದ್ರಿ ಕಾಯಿಲೆ ಚಿಕಿತ್ಸೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಮಂಜೂರು ಮಾಡಿದ. ರೂ 25,000 ಮೊತ್ತದ ಆರ್ಥಿಕ ನೆರವಿನ ಮಂಜೂರಾತಿ ಪತ್ರ ಹಾಗೂ ಚೆಕ್ಕನ್ನು ಉಜಿರೆ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯರು ವಿತರಿಸಿದರು.
ಈ ಸಂದರ್ಭದಲ್ಲಿ ಉಜಿರೆ-ಬೆಳಾಲು ಘಟಕದ ಸ್ವಯಂ ಸೇವಕರಾದ ಸುಧೀರ್, ರವೀಂದ್ರ, ಸಂದೇಶ್, ರಾಘವೇಂದ್ರ, ಮೇಲ್ವಿಚಾರಕಿ ವನಿತ ಹಾಗೂ ಸೇವಾ ಪ್ರತಿನಿಧಿ ಸೌಮ್ಯ ಉಪಸ್ಥಿತರಿದ್ದರು.