Putturu: ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ 250 ಮನೆ-ಶಾಸಕ ಅಶೋಕ್ ರೈ ಮನವಿಗೆ ಸ್ಪಂದಿಸಿದ ವಸತಿ ಸಚಿವರು

Putturu: ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ 250 ಮನೆ-ಶಾಸಕ ಅಶೋಕ್ ರೈ ಮನವಿಗೆ ಸ್ಪಂದಿಸಿದ ವಸತಿ ಸಚಿವರು


ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೆತ್ರ ವ್ಯಾಪ್ತಿಗೆ ಒಟ್ಟು 250 ಮನೆ ಮಂಜೂರಾಗಿದೆ. ಮನೆ ಮಂಜೂರು ಮಾಡುವಂತೆ ಪುತ್ತೂರು ಶಾಸಕರಾದ ಅಶೋಕ್ ರ‍್ಯಯವರು ವಸತಿ ಸಚಿವ ಜಮೀರ್ ಅಹ್ಮದ್ ಅವರಿಗೆ ಮನವಿ ಮಾಡಿದ್ದರು. ಮನವಿಯನ್ನು ಪುರಸ್ಕರಿಸಿದ ಸಚಿವರು ಏಕಕಾಲಕ್ಕೆ 250 ಮನೆ ಮಂಜೂರು ಮಾಡಿ ಆದೇಶ ಹೊರಡಿಸಿದ್ದಾರೆ.

ಕಳೆದ ಮೂರು ವರ್ಷಗಳಿಂದ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಸರಕಾರದಿಂದ ಯಾವುದೇ ಮನೆ ಮಂಜೂರು ಆಗಿರಲಿಲ್ಲ. ಮನೆ ನಿರ್ಮಾಣಕ್ಕೆ ಗ್ರಾಪಂಗಳ ಮೂಲಕ ಸಲ್ಲಿಸಿದ ಅರ್ಜಿಗಳು ಹಾಗೇ ಇದೆ. ಮನೆ ನಿರ್ಮಾಣಕ್ಕೆ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಸಾವಿರಾರು ಅರ್ಜಿ ಬಾಕಿ ಇದೆ. ಕಳೆದ ಸರ್ಕಾರದ ಅವಧಿಯಲ್ಲಿ ಒಂದೇ ಒಂದು ಮನೆ ಮಂಜೂರಾಗಿರಲಿಲ್ಲ. ಮನೆಗಾಗಿ ಬಡವರು ಅರ್ಜಿ ಹಾಕಿ ಕಳೆದ ಮೂರು ವರ್ಷಗಳಿಂದ ಕಾಯುತ್ತಿದ್ದು ಮನೆ ಮಂಜೂರು ಮಾಡುವಂತೆ ಸಚಿವರಿಗೆ ಶಾಸಕರು ಮನವಿ ಮಾಡಿದ್ದರು.

ಒಟ್ಟು 250 ಮನೆ ಮಂಜೂರಾಗಿದ್ದು ಪ್ರತೀ ಗ್ರಾಪಂಗಳಿಂದ ಬಂದಿರುವ ಅರ್ಜಿಗಳನ್ನು ವಿಲೇವಾರಿ ಮಾಡಿ ಮನೆ ಹಂಚಿಕೆ ಕಾರ್ಯ ನಡೆಯಲಿದೆ.

ಅರ್ಜಿದಾರರಿಗೆ 190 ಬಸವ ವಸತಿ ಹಾಗೂ 60 ಅಂಬೇಡ್ಕರ್ ವಸತಿ ಮಂಜೂರುಗೊಂಡಿದೆ. 

ಕಡುಬಡವರಿಗೆ ವಸತಿ: 

ಮನೆಕಟ್ಟಲು ಅಸಕ್ತರಾದ ಸಾವಿರಾರು ಬಡವರು ಗ್ರಾಪಂ ಗೆ ಸಲ್ಲಿಸಿದ ಅರ್ಜಿಗಳು ಗ್ರಾಪಂ ಕಚೇರಿಯಲ್ಲೇ ಕಳೆದ ಮೂರು ವರ್ಷಗಳಿಂದ ಕೊಳೆಯುತ್ತಿದೆ. ಮನೆ ಇಲ್ಲದವರಿಗೆ ಮನೆ ಕೊಡಬೇಕು ಎಂದು ಸರ್ಕಾರದ ಗಮನಕ್ಕೆ ತಂದಿದ್ದೆ, ವಸತಿ ಸಚಿವರಿಗೆ ಮನವಿ ಮಾಡಿದ್ದೆ. ಇದೀಗ ಮೊದಲ ಹಂತದಲ್ಲಿ 250 ಮನೆ ಮಂಜೂರಾಗಿದೆ. ಮುಂದಿನ ಹಂತಗಳಲ್ಲಿ ಇನ್ನಷ್ಟು ಮನೆಗಳು ಮಂಜೂರಾಗಲಿದೆ. ಪ್ರತೀ ಗ್ರಾಪಂ ನಲ್ಲಿರುವ ಅರ್ಜಿಗಳನ್ನು ವಿಲೇವಾರಿ ಮಾಡುವ ಮೂಲಕ ಮನೆ ಇಲ್ಲದ ಕಡುಬಡವರಿಗೆ ಮನೆ ಹಂಚುವ ಕಾರ್ಯ ನಡೆಯಲಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article