Ujire: ಉಜಿರೆಯ ಶ್ರೀ ಧ.ಮಂ. ಕಾಲೇಜಿನಲ್ಲಿ ಪ್ರೊ. ಎನ್.ಜಿ. ಪಟವರ್ಧನ್ ನುಡಿನಮನ ಕಾರ್ಯಕ್ರಮ

Ujire: ಉಜಿರೆಯ ಶ್ರೀ ಧ.ಮಂ. ಕಾಲೇಜಿನಲ್ಲಿ ಪ್ರೊ. ಎನ್.ಜಿ. ಪಟವರ್ಧನ್ ನುಡಿನಮನ ಕಾರ್ಯಕ್ರಮ


ಉಜಿರೆ: ಉಜಿರೆಯ ಶ್ರೀ ಧ. ಮಂ. ಕಾಲೇಜಿನ ವಿಶ್ರಾಂತ ಕನ್ನಡ ಪ್ರಾಧ್ಯಾಪಕ, ಬೆಳ್ತಂಗಡಿ ತಾಲೂಕಿನ ಹಿರಿಯ ಸಾಹಿತಿ ಪ್ರೊ. ಎನ್.ಜಿ. ಪಟವರ್ಧನ್ ಜು.1ರಂದು ನಿಧನ ಹೊಂದಿದ ಹಿನ್ನೆಲೆಯಲ್ಲಿ ಕಾಲೇಜಿನಲ್ಲಿ ಕನ್ನಡ ವಿಭಾಗ ಮತ್ತು ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಇಂದು (ಜು.2) ಶ್ರದ್ಧಾಂಜಲಿ ಕಾರ್ಯಕ್ರಮ ಆಯೋಜಿಸಲಾಯಿತು.

ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ ಮಾತನಾಡಿ, "ವಿದ್ಯಾರ್ಥಿಗಳು ಹೇಗೆ ಕಾಲೇಜಿನ ಜೀವದ್ರವ್ಯಗಳೋ ಹಾಗೆಯೇ ಪ್ರಾಧ್ಯಾಪಕರು ಕೂಡ ಕಾಲೇಜಿನ ಜೀವದ್ರವ್ಯಗಳು. ಎನ್.ಜಿ. ಪಟವರ್ಧನ್ (ಪ್ರೊ. ನಾರಾಯಣ ಗೋವಿಂದ ಪಟವರ್ಧನ್) ಕೂಡ ಪ್ರಾಧ್ಯಾಪಕರಾಗಿ ಅದರಂತೆಯೇ ನಡೆದುಕೊಂಡವರು” ಎಂದರು. ಮೃತರ ಜೀವನ ಮೌಲ್ಯಗಳನ್ನು ಸ್ಮರಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ, ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ಎಂ.ಪಿ. ಶ್ರೀನಾಥ್ ಮಾತನಾಡಿದರು. ಎನ್.ಜಿ. ಪಟವರ್ಧನ್ ಅವರು 30 ವರ್ಷಗಳ ಕಾಲ ಕನ್ನಡ ವಿಭಾಗದಲ್ಲಿ ಉಪನ್ಯಾಸಕರಾಗಿ, ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ವಿದ್ಯಾರ್ಥಿಗಳಲ್ಲಿ ಸಾಹಿತ್ಯಿಕವಾಗಿ ಹಲವಾರು ಚಿಂತನೆಗಳನ್ನು ಹುಟ್ಟುಹಾಕಿದ್ದಾರೆ ಎಂದು ತಿಳಿಸಿದರು.

ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ, ವಾಣಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಯದುಪತಿ ಗೌಡ ಅವರು ಮಾತನಾಡಿ, “ಎನ್. ಜಿ. ಪಟವರ್ಧನ್ ಅವರು ಮೇರು ವ್ಯಕ್ತಿತ್ವದವರು. ಹಲವಾರು ಕೃತಿಗಳನ್ನು ಬರೆದಿದ್ದಾರೆ. ಹುಟ್ಟು ಸಾವಿನ ಮಧ್ಯೆ ಪಟವರ್ಧನ್ ಅವರ ಸಾಧನೆಯ ನೆನಪೇ ಚಿರನೂತನ" ಎಂದರು. 

ಕನ್ನಡ ವಿಭಾಗ ಮುಖ್ಯಸ್ಥೆ ಡಾ. ಬೋಜಮ್ಮ ಕೆ.ಎನ್., ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ರಾಮಕೃಷ್ಣ ಭಟ್ ಬೆಳಾಲು, ಕನ್ನಡ ವಿಭಾಗದ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article