
Ujire: ಭಿತ್ತಿಪತ್ರಗಳು ಸೃಜನಶೀಲತೆಗೆ ವೇದಿಕೆಯಾಗಲಿ: ಸಂದೇಶ್
Saturday, July 6, 2024
ಉಜಿರೆ: ವಿದ್ಯಾರ್ಥಿಗಳಿಗೆ ಭಿತ್ತಿಪತ್ರಿಕೆ ಎನ್ನುವುದು ಅವರ ಓದುವ, ಬರೆಯುವ, ಮಾಹಿತಿಗಳನ್ನು ಆಕರ್ಷಕವಾಗಿ ಕುತೂಹಲಕಾರಿಯಾಗಿ ತಿಳಿಸುವ ಒಂದು ಸೃಜನಾತ್ಮಕ ವೇದಿಕೆ ಎಂದು ಶ್ರೀ ಧ.ಮಂ. ಶಿಕ್ಷಣ ಸಂಸ್ಥೆಗಳು(ರಿ), ಉಜಿರೆ ಇಲ್ಲಿನ ಕಂಟೆಂಟ್ ರೈಟರ್ ಸಂದೇಶ್ ತಿಳಿಸಿದರು.
ಅವರು ಶ್ರೀ ಧ.ಮಂ. ಪದವಿಪೂರ್ವ ಕಾಲೇಜು, ಉಜಿರೆಯಲ್ಲಿ ‘ಭಿತ್ತಿ ಪತ್ರಿಕೆ ಅನಾವರಣ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಪ್ರಮೋದ್ ಕುಮಾರ್ ಬಿ ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಪ್ರಾಂಶುಪಾಲ ಡಾ. ರಾಜೇಶ್ ಬಿ, ಕಾರ್ಯಕಾರಿ ಸಮಿತಿಯ ಮುಖ್ಯಸ್ಥೆ ಬೇಬಿ ಎನ್, ಹಾಗೂ ಸದಸ್ಯರಾದ ಸವಿತಾ ಎಸ್, ಮನೋಹರ್ ಶೆಟ್ಟಿ, ಸ್ಮಿತಾ ಬೇಡೇಕರ್, ಮಹಾವೀರ ಜೈನ್, ಸುಪ್ರೀತಾ ಪಡಿವಾಳ್ ಹಾಗೂ ಪ್ರಾಧ್ಯಾಪಕ ವೃಂದ ಉಪಸ್ಥಿತರಿದ್ದರು.
ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯರಾದ ಅನುಶ್ರೀ ಕಾರ್ಯಕ್ರಮ ನಿರೂಪಿಸಿ, ಆತ್ಮಿ ಸ್ವಾಗತಿಸಿದರು. ರಚನಾ ಅತಿಥಿ ಪರಿಚಯಿಸಿ, ಶ್ರಮ ವಂದಿಸಿದರು.