ಕೆತ್ತಿಕಲ್ ಗುಡ್ಡ ಕುಸಿತ: 12 ಕುಟುಂಬ ಸ್ಥಳಾಂತರ

ಕೆತ್ತಿಕಲ್ ಗುಡ್ಡ ಕುಸಿತ: 12 ಕುಟುಂಬ ಸ್ಥಳಾಂತರ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯು ನೀಡಿದ ಸೂಚನೆಯ ಮೇರೆಗೆ ಸಂಪೂರ್ಣ ಕುಸಿತದ ಭೀತಿ ಎದುರಿಸುತ್ತಿರುವ ತಿರುವೈಲು ಗ್ರಾಮದ ಕೆತ್ತಿಕ್ಕಲ್ ಗುಡ್ಡದ ಮೇಲಿನ ಅಮೃತನಗರದಲ್ಲಿ ವಾಸವಾಗಿದ್ದ 12 ಕುಟುಂಬಗಳು ಸ್ಥಳಾಂತರಗೊಂಡಿವೆ. ಕೆಲವರು ಬಾಡಿಗೆ ಮತ್ತು ಇನ್ನು ಕೆಲವರು ಸಂಬಂಧಿಕರ ಮನೆಗೆ ತೆರಳಿದ್ದು, ಭವಿಷ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಗುರುಪುರ ಮಠದಗುಡ್ಡೆ ಕುಸಿದಾಗ 11 ಕುಟುಂಬಗಳಿಗೆ ಮನೆ ಬಾಡಿಗೆ, ನಿವೇಶನ ಒದಗಿಸುವುದಾಗಿ ಜಿಲ್ಲಾಡಳಿತ ಭರವಸೆ ನೀಡಿತ್ತು. ಆದರೆ ನಾಲ್ಕೂವರೆ ವರ್ಷವಾದರೂ ಕೂಡ ಮಠದಗುಡ್ಡೆ ಸೈಟ್ ಸಂತ್ರಸ್ತರಿಗೆ ಬಾಡಿಗೆಯೂ ಸಿಕ್ಕಿಲ್ಲ, ನಿವೇಶನವೂ ಇಲ್ಲ ಎಂಬಂತಾಗಿದೆ. ನಮಗೂ ಅಂತಹ ಪರಿಸ್ಥಿತಿ ಬರಬಹುದು ಎಂಬ ಆತಂಕವನ್ನು ಕೆತ್ತಿಕಲ್ನಿಂದ ಎತ್ತಂಗಡಿಗೊಳಗಾದ ಕುಟುಂಬದ ಸದಸ್ಯರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. 

ತಿರುವೈಲು ಶಾಲೆಯಲ್ಲಿ ತೆರೆಯಲಾಗಿರುವ ಕಾಳಜಿ ಕೇಂದ್ರಕ್ಕೆ ತೆರಳಬೇಕು ಎಂದು ಮನಪಾದ ನೊಟೀಸ್‌ನಲ್ಲಿ ಸೂಚಿಸಿದ ಬೆನ್ನಿಗೆ ‘ಹಿರಿಯ ಅಧಿಕಾರಿಗಳ ಆದೇಶವಿದೆ’ ಎಂದಿರುವ ಸಿಬ್ಬಂದಿಯು ಯಾವುದೇ ಸೂಚನೆ ನೀಡದೆ ಆ. 6ರಂದು ಅಮೃತ ನಗರದ 12 ಮನೆಗಳ ವಿದ್ಯುತ್ ಮತ್ತು ನೀರಿನ ಸಂಪರ್ಕ ಕಡಿದು ಹಾಕಿದ್ದಾರೆ ಎಂದು ದೂರಲಾಗಿದೆ. 

ಆ.೩ರಂದು ಸ್ಥಳಕ್ಕೆ ಭೇಟಿ ನೀಡಿದ್ದ ಅಧಿಕಾರಿಯೊಬ್ಬರು ‘ಹಗಲು ಹೊತ್ತು ಮನೆಯಲ್ಲಿರಬಹುದು, ರಾತ್ರಿ ಮಾತ್ರ ಮನೆ ಖಾಲಿ ಮಾಡಬೇಕುೞ ಎಂದಿದ್ದರು. ಆದರೆ ಈಗ ನೀರು ಮತ್ತು ವಿದ್ಯುತ್ ಸಂಪರ್ಕ ಕಡಿದು ಹಾಕಿದ ಬಳಿಕ ಮನೆಯಲ್ಲಿ ಹೇಗೆ ನಿಲ್ಲಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ನಮ್ಮನ್ನು ಇಲ್ಲಿಂದ ಶಾಶ್ವತವಾಗಿ ಮನೆ ಬಿಡಲು ನಡೆಸಿದ ತಂತ್ರಗಾರಿಕೆ ಇದಾಗಿದೆ ಎಂದು ಆರೋಪಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article