ಭ್ರಷ್ಟಾಚಾರ ಮತ್ತು ಭೃಷ್ಟಾಚಾರಿಗಳ ರಕ್ಷಣೆ ಕಾಂಗ್ರೆಸ್‌ನ ಧ್ಯೇಯ: ಸತೀಶ್ ಕುಂಪಲ

ಭ್ರಷ್ಟಾಚಾರ ಮತ್ತು ಭೃಷ್ಟಾಚಾರಿಗಳ ರಕ್ಷಣೆ ಕಾಂಗ್ರೆಸ್‌ನ ಧ್ಯೇಯ: ಸತೀಶ್ ಕುಂಪಲ


ಮಂಗಳೂರು: ಮುಖ್ಯಮಂತ್ರಿ ಸಿ.ಎಂ. ಸಿದ್ದರಾಮಯ್ಯ ರವರ ಸಮಾಜವಾದಿ ಮುಖವಾಡ ಮೂಡಾದಲ್ಲಿ ಮಾಡಿರುವ ಭೃಷ್ಟಾಚಾರದಿಂದ ಕಳಚಿ ಬಿದ್ದಿದೆ. ರಾಜ್ಯಪಾಲರು ತಮಗೆ ಬಂದಿರುವ ದೂರಿನ ಬಗ್ಗೆ ಸಂವಿಧಾನದಲ್ಲಿರುವ ಸೂಕ್ತ ವಿಧಿಯ ಅನ್ವಯ ತನಿಖೆಗೆ ಅನುಮತಿಯನ್ನು ನೀಡಿರುವುದನ್ನು ವಿರೋಧಿಸುವ ಬರದಲ್ಲಿ ಕಾಂಗ್ರೇಸಿಗರು ಸಂವಿಧಾನದ ಆಶಯಗಳನ್ನು ಅಣಕಿಸುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಸಂವಿಧಾನ ರಕ್ಷಕರು ಎಂದು ಬೊಬ್ಬಿಯಿರಿಯುತ್ತಿದ್ದ ಕಾಂಗ್ರೇಸ್ ಇಂದು ಸಾಂವಿಧಾನಿಕ ಸ್ಥಾನವಾಗಿರುವ  ರಾಜ್ಯಪಾಲರ ಮೇಲೆರಗಿ ಬಂದಿದ್ದು ಹಾಗೂ ಪ್ರತಿಭಟನೆ ನೆಪದಲ್ಲಿ ಕಾಂಗ್ರೇಸ್ ನ ಗೂಂಡಾ ಕಾರ್ಯಕರ್ತರು ಖಾಸಗಿ ಬಸ್ಸುಗಳ ಮೇಲೆ ಕಲ್ಲು ತೂರಾಟ ಹಾಗೂ ಹಲ್ಲೆಯನ್ನು ನಡೆಸುವ ಮುಖೇನ ವಿಧ್ವಂಸಕ ಕಾರ್ಯವನ್ನು ಮಾಡಿ ಕಾನೂನನ್ನು ಕೈಗೆತ್ತಿ ಕೊಂಡಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಭೃಷ್ಟಾಚಾರ ಮತ್ತು ಭೃಷ್ಟಾಚಾರಿಗಳ ರಕ್ಷಣೆ ಕಾಂಗ್ರೆಸ್ ನ ಪ್ರಮುಖ ದೋರಣೆ ಮತ್ತು ಧ್ಯೇಯವಾಗಿದೆ ಎಂದು ಬಿ.ಜೆ.ಪಿ. ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಕಾಂಗ್ರೇಸ್ ಗೆ ಜನರು 136 ಸೀಟುಗಳನ್ನು ಕೊಟ್ಟಿದ್ದಾರೆ, ಅದಕ್ಕೆ ಪ್ರತಿಯಾಗಿ ಜನಪರವಾಗಿ ಕೆಲಸ ಮಾಡಿ ಶಾಂತಿ ಸುವ್ಯವಸ್ಥೆ ಕಾಪಾಡುವ ಬದ್ದತೆಯಲ್ಲಿ ಸರಕಾರ ನಡೆಸುವುದನ್ನು ಬಿಟ್ಟು, ಅಧಿಕಾರ ದುರುಪಯೋಗ ಮಾಡಿಕೊಂಡು  ಪ್ರತಿಭಟನೆಗೆ ಇಳಿದಿದ್ದು ಹಾಗೂ ಈ ಮೂಲಕ ಇವರೇ ಮಾಡಿಕೊಂಡಿರುವ ಬ್ರಹ್ಮಾಂಡ ಭೃಷ್ಟಾಚಾರವಾಗಿರುವ ಮೈಸೂರಿನ ಮೂಡಾದಿಂದ ಶೋಷಿತರ ಭೂಮಿಯನ್ನು ಸಿ.ಎಂ. ಸಿದ್ದರಾಮಯ್ಯನವರು  ಲಪಟಾಯಿಸಿರುವ ಪ್ರಕರಣ ಮತ್ತು ವಾಲ್ಮೀಕಿ ನಿಗಮದಲ್ಲಿ ಶೋಷಿತರ ಉದ್ದಾರಕ್ಕಾಗಿ ಬಳಸಬೇಕಾಗಿದ್ದ ಹಣವನ್ನು ಬೇಕಾಬಿಟ್ಟಿಯಾಗಿ ತಮ್ಮ ಸ್ವಜನರ ವೈಯುಕ್ತಿಕ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದಂತೆ ಅನೇಕ ರೀತಿಯಲ್ಲಿ ಭೃಷ್ಟಾಚಾರದಲ್ಲಿ ಮುಳುಗಿರುವ ಕಾಂಗ್ರೇಸ್ ಸರಕಾರ ಭೃಷ್ಟರ ರಕ್ಷಣೆಗೆ ನಿಂತು ಪ್ರತಿಭಟನೆ ನೆಪದಲ್ಲಿ ವಿಧ್ವಂಸಕ ಕಾರ್ಯಕ್ಕೆ ಕೈ ಹಾಕಿದ್ದು ಇವರ ಧೂರ್ತತೆಗೆ ಮತ್ತು ಜನವಿರೋಧಿ ನೀತಿಗೆ ಹಿಡಿದ ಕೈಗನ್ನಡಿಯಾಗಿದೆ.   

ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಸದಸ್ಯರಾಗಿರುವ ಐವನ್ ಡಿಸೊಜಾ ರವರು  "ಬಾಂಗ್ಲಾದಲ್ಲಿ ಆಗಿರುವಂತೆ ರಾಜಭವನದ ಮೇಲೆ ದಾಳಿಯಾಗಲಿದೆ ಎನ್ನುವ ರೀತಿಯಲ್ಲಿ ಮಾತನಾಡಿದ್ದಾರೆ. ಇದು ಗೂಂಡ ಪ್ರವೃತ್ತಿಯ ಮಾತಿನಂತಿದೆ. ಜನರನ್ನು ಪ್ರಚೋದಿಸುವ ಇಂತಹ ಮಾತುಗಳು ಖಂಡನೀಯ. ಬಾಂಗ್ಲಾದೇಶ ದಲ್ಲಿ ಸಂತ್ರಸ್ತರಾಗಿರು ಹಿಂದುಗಳ ಬಗ್ಗೆ  ತುಟಿ ಬಿಚ್ಚದ ಇವರು ಸಾರ್ವಜನಿಕ ಆಸ್ಥಿ ಕಬಳಿಸಿರುವ ಲೂಟಿಕೋರರ ಪರವಾಗಿ ಬೀದಿಗಿಳಿದಿರುವುದು ಅಕ್ಷಮ್ಯ ಅಪರಾಧ ವಾಗಿದೆ. ಪೋಲಿಸ್ ಇಲಾಖೆ ಈ ವಿಚಾರದಲ್ಲಿ ಸ್ವಯಂ ದೂರು ದಾಖಲಿಸಬೇಕೆಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article