ಸಂಪೂರ್ಣ ತನಿಖೆಯ ವರದಿ ಬರುವ ತನಕ ಬೇರೆ ಯಾವುದೇ ಕೆಲಸ ಮಾಡುವಂತಿಲ್ಲ: ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್
Thursday, August 29, 2024
ಮಂಗಳೂರು: ಕೆತ್ತಿಕಲ್ಲು ಪ್ರದೇಶಕ್ಕೆ ಸಧ್ಯದ ಮಟ್ಟಿಗೆ ನೀರು ಹರಿದುಹೋಗಲು ಪರ್ಯಾಯ ವ್ಯವಸ್ಥೆ ಹಾಗೂ ಗುಡ್ಡದ ಬದಿಗೆ ಕಾಂಕ್ರಿಟ್‌ನಿಂದ ಮುಚ್ಚಲಾಗಿದ್ದು, ಸಂಪೂರ್ಣ ತನಿಖೆಯ ವರದಿ ಬರುವ ತನಕ ಬೇರೆ ಯಾವುದೇ ಕೆಲಸ ಮಾಡುವಂತಿಲ್ಲ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ತಿಳಿಸಿದರು.
ಅವರು ಇಂದು ತಮ್ಮ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, ಕೆತ್ತಿಕಲ್ಲು ಪ್ರದೇಶದ ಹತ್ತಿರದಲ್ಲಿಯೇ ನದಿ ಇದ್ದು, ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚುತ್ತಿದ್ದಂತೆಯೇ, ಭೂಮಿಯಲ್ಲಿನ ಅಂತರ್‌ಜಲವೂ ಹೆಚ್ಚುತ್ತದೆ ಇದರಿಂದ ಸಮಸ್ಯೆ ಆಗುತ್ತದೆ ಆದುದರಿಂದ ಅಲ್ಲಿಯ ಅಧ್ಯಯನದ ಅವಶ್ಯಕತೆ ಇದೆ. ಆಧ್ಯಯನದ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಈಗಾಗಲೇ ಪೊಲೀಸ್ ಇಲಾಖೆಯಿಂದ ಶೇ.80-90 ರಷ್ಟು ವರದಿಯನ್ನು ಸಿದ್ದಪಡಿಸಿದ್ದು, ನಾಳೆ-ನಾಡಿದ್ದರಲ್ಲಿ ನನಗೆ ಸಿಗಲಿದೆ ಬಳಿಕ ಏನು ಮಾಡಬೇಕೆಂದು ತಿರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಈ ಪ್ರದೇಶದ 9 ಮನೆಗಳನ್ನು ಸ್ಥಲಾಂತರ ಮಾಡಿದ್ದು, ಅವರುಗಳಿಗೆ ಕಾರ್ಪೊರೇಷನ್‌ನಿಂದ ತಲಾ 20 ಸಾವಿರ ರೂ. ನೀಡಲಾಗಿದೆ. ಎಂದ ಅವರು ಜಿಲ್ಲಾಡಳಿತಕ್ಕೆ ಸ್ಥಳಾಂತರ ವಿಚಾರದಲ್ಲಿ ಒಂದು ರಿಟ್ ಅರ್ಜಿ ಬಂದಿದ್ದು, ಅಲ್ಲಿ ಅಪಾಯವಿರುವುದರಿಂದ ಸ್ಥಳಾಂತರ ಮಾಡಲಾಗಿದೆ ಎಂದು ಉತ್ತರ ನೀಡಿದ್ದೇವೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.