ವಿದ್ಯುತ್ ಶಾಕ್ ತಗುಲಿ ಯುವಕ ಸಾವು

ವಿದ್ಯುತ್ ಶಾಕ್ ತಗುಲಿ ಯುವಕ ಸಾವು


ಮಂಜೇಶ್ವರ: ವಿದ್ಯುತ್ ಶಾಕ್ ತಗುಲಿ ಯುವಕನೋರ್ವ ಮೃತಪಟ್ಟ ಘಟನೆ ಮಂಜೇಶ್ವರ ಗೋವಿಂದ ಪೈ ಕಾಲೇಜ್ ಬಳಿ ನಡೆದಿದೆ. 

ಮೃತಪಟ್ಟ ಯುವಕನನ್ನು ಯಶವಂತ (21) ಎಂದು ಗುರುತಿಸಲಾಗಿದೆ. 

ಉಪ್ಪಳದ ಶಾಲಾ ಬಳಿ ಇರುವ ಭಾರತ್ ಪೆಟ್ರೋಲ್ ಬಂಕ್ ನಲ್ಲಿ ಕಳೆದ 2 ವರ್ಷಗಳಿಂದ ನೌಕರನಾಗಿರುವ ಯಶವಂತ್ ರಿಗೆ ಇಂದು ಸಂಜೆ 5.30 ಗಂಟೆಗೆ ಕೆಲಸಕ್ಕೆ ತೆರಳಲು ಸಜ್ಜಾಗುತ್ತಿದ್ದನು. ಈ ವೇಳೆ ಮನೆ ಟ್ಯಾರೀಸ್ ನಲ್ಲಿ ತೆಂಗಿನ ಮರದ ಗರಿಯನ್ನ ಕಂಡು ಅದನ್ನ ಕಡಿದು ತೆಗೆಯಲು ತೆರಳಿದ್ದ ಯಶವಂತ್ ಮರದ ಪಕ್ಕವೇ ಹರಿಯುತ್ತಿದ್ದ ಯಚ್.ಟಿ ಲೈನ್ ನ ವಿದ್ಯುತ್ ಸ್ಪರ್ಶದಿಂದ ಅಲ್ಲೇ ಕುಸಿದು ಬಿದ್ದಿದ್ದ. 

ಗರಿ ತೆಗೆಯಲು ತೆರಳಿದ ಸಹೋದರನ ಮರಳಿ ಬಾರದ ಹಿನ್ನಲೆಯಲ್ಲಿ ಸಹೋದರಿ ಟ್ಯಾರೀಸ್ ಗೆ ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ. 

ಕೂಡಲೇ ಸ್ಥಳೀಯರಿಗೆ ಮಾಹಿತಿ ನೀಡಿ ಯಶವಂತ್ ರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸುವ ದಾರಿ ಮಧ್ಯೆ ಯಶವಂತ್ ಮೃತಪಟ್ಟಿದ್ದಾರೆ. 

ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಗಲ್ಪಾಡಿಯ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. 

ಮೃತಪಟ್ಟ ಯಶವಂತ್ ತಂದೆ: ನಿವೃತ್ತ ಕೆ.ಎಸ್.ಆರ್.ಟಿ.ಸಿ ಉದ್ಯೋಗಿ ರಾಮಚಂದ್ರ, ತಾಯಿ: ಬಬಿತಾ, ಸಹೋದರ - ಸಹೋದರಿಯರಾದ: ಸುಶ್ಮಿತಾ, ಜಯಸ್ಮಿತಾ, ಸುದೀಶ್ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article