ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಪೂಜೆ ಸಲ್ಲಿಸಿದ ಶಾಸಕ ಕಾಮತ್

ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಪೂಜೆ ಸಲ್ಲಿಸಿದ ಶಾಸಕ ಕಾಮತ್


ಮಂಗಳೂರು: ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಪರಿವರ್ತನೆಯ ಹರಿಕಾರ, ಬ್ರಹ್ಮಶ್ರೀ ನಾರಾಯಣ ಗುರು ಜಯಂತಿಯ ಅಂಗವಾಗಿ ಶಾಸಕ ವೇದವ್ಯಾಸ ಕಾಮತ್ ಅವರು ಪೂಜ್ಯ ಗುರುಗಳ ಹೆಜ್ಜೆ ಗುರುತು ಹೊಂದಿರುವ ಪ್ರಸಿದ್ಧ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಭರತ ಖಂಡವು ಕಂಡ ಮಹಾನ್ ದಾರ್ಶನಿಕರಾದ ಬ್ರಹ್ಮಶ್ರೀ ನಾರಾಯಣ ಗುರುಗಳು ಈ ಜಗದ ಅಜ್ಞಾನದ ಕತ್ತಲೆಯನ್ನು ತೊಡೆದು ಸುಜ್ಞಾನದೆಡೆಗೆ ಒಯ್ಯುವಂತಹ ಅವಿಚ್ಚಿನ್ನ ಶಕ್ತಿ. ತುಳಿದು ಬದುಕುವವರೇ ಇದ್ದಂತಹ ಕಾಲದಲ್ಲಿ ಶೋಷಿತರ, ದಮನಿತರ, ಹಿಂದುಳಿದ ವರ್ಗಗಳ ಜನತೆಯ ಪರವಾಗಿ ಹೆಬ್ಬಂಡೆಯಂತೆ ನಿಂತವರು ಪೂಜ್ಯರು. ಅಣು ಅಣುವಿನಲ್ಲೂ ಪರಮಾತ್ಮನನ್ನು ಕಾಣುವ ಚಿಂತನೆಯನ್ನು ಪ್ರತಿಯೊಬ್ಬರಲ್ಲೂ ಉದ್ದೀಪನಗೊಳಿಸಲೆಂದೇ ಜನ್ಮ ತಾಳಿ ಬಂದವರೇನೋ ಎಂಬಂತೆ ಬದುಕಿನ ಕೊನೆಯ ಘಳಿಗೆಯವರೆಗೂ ಲೋಕೋದ್ದಾರಕ್ಕಾಗಿ ಶ್ರಮಿಸಿದ ಪೂಜ್ಯ ನಾರಾಯಣ ಗುರುಗಳು ನಡೆದಾಡಿದ ಈ ಪುಣ್ಯ ಭೂಮಿಯಲ್ಲಿ ಇರುವುದೇ ನಮ್ಮೆಲ್ಲರ ಭಾಗ್ಯವೆಂದು ಶಾಸಕರು ಹೇಳಿದರು.



Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article