ಮೂಡುಮಾರ್ನಾಡು: ಶಾಲಾ ವಿದ್ಯಾರ್ಥಿಗಳಿಗೆ ಸ್ಯಾಂಡಲ್ಸ್ ವಿತರಣೆ
Thursday, August 8, 2024
ಮೂಡುಬಿದಿರೆ: ಸರ್ಕಾರಿ ಪ್ರೌಢಶಾಲೆ ಮೂಡು ಮಾರ್ನಾಡು ಇಲ್ಲಿನ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಶೂ-ಸಾಕ್ಸ್ ಅನುದಾನದಲ್ಲಿ ಸ್ಯಾಂಡಲ್ಸ್ ವಿತರಣಾ ಕಾರ್ಯಕ್ರಮವು ಗುರುವಾರ ಜರಗಿತು.
ಎಸ್ ಡಿಎಂಸಿ ಅಧ್ಯಕ್ಷ ಭಾಸ್ಕರ ಎಸ್. ಕೋಟ್ಯಾನ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಪಡುಮಾರ್ನಾಡು ಪಂಚಾಯತ್ ಅಧ್ಯಕ್ಷ ವಾಸುದೇವ ಭಟ್, ವಾರ್ಡ್ ಮೆಂಬರ್ ಶಕುಂತಲಾ ಶೆಟ್ಟಿ, ಎಸ್ ಡಿ ಎಮ್ ಸಿ ಸದಸ್ಯರಾದ ಸುಗಂಧಿ, ಆಶಾ, ಸುಶೀಲಾ ಉಪಸ್ಥಿತರಿದ್ದರು. ಹೆತ್ತವರು, ಪೋಷಕರು, ವಿದ್ಯಾರ್ಥಿಗಳು ಹಾಜರಿದ್ದರು.
ಮುಖ್ಯ ಶಿಕ್ಷಕಿ ಡಾ. ರಾಜಶ್ರೀ ಬಿ. ಸ್ವಾಗತಿಸಿದರು. ವಿಜ್ಞಾನ ಶಿಕ್ಷಕಿ ಸುಜಾತಕುಮಾರಿ ಶೆಟ್ಟಿ ವಂದಿಸಿದರು. ಸಮಾಜ-ವಿಜ್ಞಾನ ಶಿಕ್ಷಕ ಜಾನ್ ರೊನಾಲ್ಡ್ ಡಿಸೋಜಾ ಕಾರ್ಯಕ್ರಮ ನಿರ್ವಹಿಸಿದರು.