ಅಮೀಬಾ ಸೋಂಕಿಗೆ ಯುವಕ ಬಲಿ

ಅಮೀಬಾ ಸೋಂಕಿಗೆ ಯುವಕ ಬಲಿ

ಕಾಸರಗೋಡು: ಅಮೀಬಾ ಸೋಂಕು (ಅಮೀಬಿಕ್ ಮೆನಿಂಗೊ ಎನ್ಸೆಫಾಲಿಟಿಸ್)ನಿಂದ ಕಾಸರಗೋಡಿನ ಯುವಕನೊಬ್ಬ  ಮೃತಪಟ್ಟ ಘಟನೆ ನಡೆದಿದೆ.

ಚಟ್ಟಂಚಾಲ್ ಉಕ್ರಂಪಾಡಿಯ ಮಣಿಕಂಠ (36) ಮೃತಪಟ್ಟವರು. ಜ್ವರದ ಹಿನ್ನೆಲೆಯಲ್ಲಿ ಕಣ್ಣೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 

ಮುಂಬೈಯಲ್ಲಿ ಕೆಲಸ ಮಾಡುತ್ತಿದ್ದ ಮಣಿಕಂಠ ಅನಾರೋಗ್ಯದ ಹಿನ್ನೆಲೆಯಲ್ಲಿ ಊರಿಗೆ ಬಂದಿದ್ದರು. ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ 

ಜ್ವರ ಕಡಿಮೆಯಾಗದ ಕಾರಣ ಕಣ್ಣೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ನಡೆಸಿದ ತಪಾಸಣೆಯಿಂದ ಅಮಿಬಿಕ್ ಸೋಂಕು ದೃಢಪಟ್ಟಿತ್ತು. 

ಮುಂಬೈಯಿಂದ ಸೋಂಕು ತಗಲಿರಬಹುದು ಎಂದು ಶಂಕಿಸಲಾಗಿದೆ. ಇದರಿಂದ ಜಿಲ್ಲೆಯಲ್ಲಿ ಯಾವುದೇ ಆತಂಕ ಪಡಬೇಕಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. ಈ ಜ್ವರದ ಬಗ್ಗೆ ಮುನ್ನಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆ ಸೂಚಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article