ಸೆ.13 ರಂದು ಬದ್ರಿಯಾ ಜುಮಾ ಮಸೀದಿಯ ನವೀಕೃತ ಕಟ್ಟಡ ಉದ್ಘಾಟನೆ

ಸೆ.13 ರಂದು ಬದ್ರಿಯಾ ಜುಮಾ ಮಸೀದಿಯ ನವೀಕೃತ ಕಟ್ಟಡ ಉದ್ಘಾಟನೆ

ಮಂಗಳೂರು: 1973ನೇ ಇಸವಿಯಲ್ಲಿ ಸ್ಥಾಪಣೆಗೊಂಡ ಬಜಾಲ್ ನಂತೂರು ಬದ್ರಿಯಾ ಜುಮಾ ಮಸೀದಿ ಇದರ ನವೀಕೃತ ಕಟ್ಟಡ ಉದ್ಘಾಟನಾ ಸಮಾರಂಭ ಸೆ.13 ರಂದು ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ.

ಕುಂಬೋಳ್ ಅಸ್ಸಯ್ಯದ್ ಕೆ.ಎಸ್. ಆಟಕೋಯ ತಂಙಳ್ ಅವರು ಮಸೀದಿ ಉದ್ಘಾಟಿಸಿ ಜುಮುಅ ನೇತೃತ್ವ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಧಾನಸಭಾ ಸಭಾಧ್ಯಕ್ಷ ಯು.ಟಿ. ಖಾದರ್, ಯನೆಪೋಯ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಕೆ.ಇ. ಅಬ್ದುಲ್ಲಾ ಕುಂಞಿ ಭಾಗವಹಿಸಲಿದ್ದಾರೆ. ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಹಾಗೂ ಮಹಾನಗರ ಪಾಲಿಕೆಯ ಸದಸ್ಯರು ಅಬ್ದುಲ್ ರವೂಫ್ ಅವರು ಸಮಾರಂಭದ ಅದ್ಯಕ್ಷತೆ ವಹಿಸಲಿರುವರು.

ಮನಪಾ ಸದಸ್ಯ ಅಶ್ರಫ್ ಬಜಾಲ್, ಜಮಾತ್ ಖತೀಬಾರಾದ ಅಲ್ ಹಾಜಿ ಪಿಎ ಅಬ್ದುಲ್ ನಾಸಿರ್ ಸಹದಿ ಅವರು ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಮಸೀದಿ ಆಡಳಿತ ಸಮಿತಿ ಪ್ರಕಟಣೆ ತಿಳಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article