ಬಿಜೆಪಿ 2.5 ಲಕ್ಷ ಸದಸ್ಯರ ನೋಂದಣಿ: ಸತೀಶ್ ಕುಂಪಲ
ಮಂಗಳೂರು: ದ. ಕ. ಜಿಲ್ಲೆಯಲ್ಲಿ ಬಿಜೆಪಿ ಕಳೆದ ಬಾರಿ ೨.೫ ಲಕ್ಷ ಸದಸ್ಯರ ನೋಂದಣಿ ಮಾಡಿದ್ದು, ಈ ವರ್ಷ ನಾಲ್ಕು ಲಕ್ಷ ಸದಸ್ಯರ ನೋಂದಣಿ ಗುರಿ ಹೊಂದಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೇಳಿದರು.
ರಾಷ್ಟ್ರಮಟ್ಟದ ಸದಸ್ಯತ್ವ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಚಾಲನೆ ನೀಡಿದ್ದಾರೆ. ಜಿಲ್ಲೆಯಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಮಂಡಲಗಳಲ್ಲಿ ಶಾಸಕರು ಚಾಲನೆ ನೀಡುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಬುಧವಾರ ಅವರು ತಿಳಿಸಿದರು.
ಪಕ್ಷಕ್ಕೆ ಸೇರ್ಪಡೆಯಾಗುವವರು ಟೋಲ್ ಫ್ರೀ 8800002024 ಸಂಖ್ಯೆಗೆ ಮಿಸ್ ಕಾಲ್ ಕೊಟ್ಟರೆ, ಲಿಂಕ್ ಬರುತ್ತದೆ. ಅದರ ಮೂಲಕ ಹೆಸರು, ವಿವರ ಕೊಟ್ಟು ಸದಸ್ಯರಾಗಬಹುದು. ಸೆ.17 ರಂದು ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನ ಅಂಗವಾಗಿ ಸೆ.11 ರಿಂದ 17ರ ತನಕ ಮಹಾ ಅಭಿಯಾನ ನಡೆಯಲಿದೆ. ಪ್ರತಿ ಬೂಟ್‌ನಲ್ಲಿ 250 ಸದಸ್ಯರ ನೋಂದಣಿ ಗುರಿ ಇದೆ. ಈಗಾಗಲೇ ಸದಸ್ಯರಾದವರು, 18 ವರ್ಷ ಮೇಲ್ಪಟ್ಟವರು ಬಿಜೆಪಿ ಕಚೇರಿಯಲ್ಲೂ ನೋಂದಣಿ ಮಾಡಿಸಬಹುದು ಎಂದು ಅವರು ಹೇಳಿದರು.
ಇತ್ತೀಚೆಗೆ ಜಿಲ್ಲೆಯ 10 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಎಂಟು ಕಡೆ ಬಿಜೆಪಿ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ ನಡೆದಿದೆ. ಬಂಟ್ವಾಳ ಮತ್ತು ಉಳ್ಳಾಲದಲ್ಲಿ ಎಸ್‌ಡಿಪಿಐ ಜತೆ ಹೊಂದಾಣಿಕೆ ಮಾಡಿಕೊಂಡು ಕಾಂಗ್ರೆಸ್ ಅಕಾರ ಪಡೆದಿದೆ ಎಂದರು.
ಪ್ರೇಮಾನಂದ ಶೆಟ್ಟಿ, ರವೀಂದ್ರ ಶೆಟ್ಟಿ ಉಳಿದೊಟ್ಟು, ಕಸ್ತೂರಿ ಪಂಜ, ಪೂಜಾ ಪೈ, ದೇವದಾಸ ಶೆಟ್ಟಿ, ನಿತೀಶ್ ಶಾಂತಿವನ, ವಿಕಾಸ್ ಪುತ್ತೂರು, ಡಾ,ಮಂಜುಳಾ ರಾವ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.