ದೇಶದಲ್ಲಿ 5 ಕೋಟಿ ಕೇಸ್ ಬಾಕಿ: ಜಸ್ಟೀಸ್ ಅಬ್ದುಲ್ ನಝೀರ್ ಕಳವಳ

ದೇಶದಲ್ಲಿ 5 ಕೋಟಿ ಕೇಸ್ ಬಾಕಿ: ಜಸ್ಟೀಸ್ ಅಬ್ದುಲ್ ನಝೀರ್ ಕಳವಳ


ಮಂಗಳೂರು: ದೇಶದಲ್ಲಿ ನ್ಯಾಯಾಂಗದ ಮೇಲೆ ಅಪಾರ ಒತ್ತಡವಿದೆ. ಅವರು ಎಲ್ಲ ಕೋರ್ಟ್ ಸೇರಿದಂತೆ 5 ಕೋಟಿ ಪ್ರಕರಣಗಳು ಬಾಕಿ ಇವೆ. ಇವುಗಳ ಇತ್ಯರ್ಥಕ್ಕೆ 10-15  ವರ್ಷಗಳೇ ಬೇಕಾಗಬಹುದು. ಇದರಿಂದಾಗಿ 25 ಕೋಟಿ ಜನರು ತೊಂದರೆ ಎದುರಿಸುವಂತಾಗಿದೆ. ಅವರಿಗೆ ಕೌಟುಂಬಿಕ ಶಾಂತಿ, ಸಮಾಧಾನಗಳೂ ಇಲ್ಲದಾಗಿದೆ ಎಂದು  ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರೂ ಆಗಿರುವ ಆಂಧ್ರಪ್ರದೇಶ ರಾಜ್ಯಪಾಲ, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶ ಅಬ್ದುಲ್ ನಝೀರ್  ಅಬ್ದುಲ್ ನಝೀರ್ ಅಭಿಪ್ರಾಯಪಟ್ಟರು.

ಇವುಗಳಲ್ಲಿ ಶೇ.95ರಷ್ಟು ಪ್ರಕರಣಗಳು ಹಳ್ಳಿ ಪ್ರದೇಶದಿಂದ ಬಂದಿವೆ. ಒಮ್ಮೆ ಕೇಸು ದಾಖಲಾದರೆ ಸುಲಭದಲ್ಲಿ ಇತ್ಯರ್ಥಗೊಳ್ಳುವುದಿಲ್ಲ. ಅದಕ್ಕೆ ಸಾಕಷ್ಟು ಸಮಯ ಬೇಕಾಗುತ್ತದೆ. ನ್ಯಾಯದಾನ ವಿಳಂಬವಾಗಬಾರದು. ಶೇ.95ರಷ್ಟು ಕ್ರಿಮಿನಲ್ ಕೇಸ್‌ಗಳಲ್ಲಿ ಶಿಕ್ಷೆಯಾಗದೆ ಖುಲಾಸೆಗೊಳ್ಳುತ್ತವೆ. ಅನ್ಯಾಯವಾಗಿ ತಪ್ಪಿತಸ್ಥರಲ್ಲದವರು ಕೂಡ  ಕೇಸಿನ ಕಾರಣಕ್ಕೆ ಜೈಲಿನಲ್ಲಿ ಕಳೆಯಬೇಕಾಗಿರುವುದೂ ಇದೆ. ಇದಕ್ಕೆ ಡಿಜಿಟಲೀಕರಣ, ಕೃತಕಬುದ್ಧಮತ್ತೆಯಿಂದ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ. ಎಲ್ಲವೂ ಮಾನವ ನ ಬುದ್ಧಿಮತ್ತೆಯಿಂದಷ್ಟೇ ಇತ್ಯರ್ಥಪಡಿಸಬೇಕಷ್ಟೆ. ಹಿಂದಿನ ಕಾಲದಲ್ಲಿ ಹಿರಿಯರು ಏನಾದರೂ ವಿವಾದ ತಲೆದೋರಿದರೆ, ‘ನಿನ್ನ ಮನೆಗೆ ಸಿವಿಲ್ ವ್ಯಾಜ್ಯ ಬೀಳಲಿ’ ಎಂದು  ಶಾಪ ಹಾಕುತ್ತಿದ್ದರು ಎಂದು ಜಸ್ಟೀಸ್ ಅಬ್ದುಲ್ ನಝೀರ್ ಮೆಲುಕು ಹಾಕಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article