ಹೆದ್ದಾರಿಯಲ್ಲಿ ಹೊತ್ತಿ ಉರಿದ BMW ಕಾರು
Saturday, September 28, 2024
ಮಂಗಳೂರು: ಹೆದ್ದಾರಿ ಮಧ್ಯೆ BMW ಕಾರೊಂದು ಹೊತ್ತಿ ಉರಿದ ಘಟನೆ ನಗರದ ಹೊರವಲಯದ ಅಡ್ಯಾರ್ ಸಹ್ಯಾದ್ರಿ ಕಾಲೇಜ್ ಬಳಿ ಇಂದು ಮಧ್ಯಾಹ್ನ ನಡೆದಿದೆ.
ಶಾರ್ಟ್ ಸರ್ಕ್ಯೂಟ್ ನಿಂದ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ಕಾರಿನಲ್ಲಿ ಹೊಗೆ ಕಾಣಿಸಿಕೊಂಡ ಕೂಡಲೇ ಚಾಲಕ ಕಾರಿನಿಂದ ಕೆಳಗಿಳಿದು ಜೀವ ಉಳಿಸಿಕೊಂಡಿದ್ದಾನೆ.
ದೆಹಲಿ ನೋಂದಾಯಿತ ಬಿಎಂಡಬ್ಲ್ಯೂ ಕಾರು ಅರ್ಧಗಂಟೆಯಿಂದ ಹೊತ್ತಿ ಉರಿಯುತ್ತಿದ್ದು, ಸಂಪೂರ್ಣ ಭಸ್ಮವಾಗಿದೆ. ಆದರೆ ಈ ವರೆಗೂ ಸ್ಥಳಕ್ಕೆ ಯಾವುದೇ ಅಗ್ನಿಶಾಮಕ ದಳದವರು ಆಗಮಿಸಿರಲಿಲ್ಲ.