ಆರೋಗ್ಯವಂತ ಜೀವನಕ್ಕೆ ಪೌಷ್ಟಿಕ ಆಹಾರ ಅಗತ್ಯ: ಶರಣ್ಯ ಯು.

ಆರೋಗ್ಯವಂತ ಜೀವನಕ್ಕೆ ಪೌಷ್ಟಿಕ ಆಹಾರ ಅಗತ್ಯ: ಶರಣ್ಯ ಯು.



ಮಂಗಳೂರು: ಮನುಷ್ಯನ ಆರೋಗ್ಯವು ಸದೃಢವಾಗಿ ಆರೋಗ್ಯವಂತರಾಗಲು ಪೌಷ್ಟಿಕ ಆಹಾರದ ಅಗತ್ಯವಿದೆ ಎಂದು ಕೆಎಂಸಿ ಆಸ್ಪತ್ರೆಯ ಕ್ಲಿನಿಕಲ್ ಆಹಾರ ತಜ್ಞೆ ಶರಣ್ಯ ಯು. ಹೇಳಿದರು.

ಅವರು ಇಂದು ಮಂಗಳೂರಿನ ರಥಬೀದಿಯ ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಯುವ ರೆಡ್ ಕ್ರಾಸ್ ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಆಹಾರ ಪೋಷಣಾ ಮಾಸ ಕಾರ್ಯಕ್ರ‌ಮ‌ದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಯವ್ವನ ವ್ಯವಸ್ಥೆಯಾದ 10 ರಿಂದ 19 ವರ್ಷದ ವರೆಗೆ ಶರೀರದ ಬೆಳವಣಿಗೆಗೆ ಅಗತ್ಯವಾಗಿ ಆಹಾರವನ್ನು ಸೇವಿಸಬೇಕು. ನಮ್ಮ ಒತ್ತಡದ ನಡುವೆಯೂ ಆಹಾರ ಸೇವನೆಯಲ್ಲಿ ಕ್ಯಾಲ್ಸಿಯಂ ಆಹಾರ ಪದರ್ಥಗಳನ್ನು ಸೇವಿಸುವುದರಿಂದ ದೇಹ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಕಬ್ಬಿಣ ಅಂಶಗಳನ್ನು ಸೇವಿಸುವುದರಿಂದ ಹೆಣ್ಣು ಮಕ್ಕಳ ಆಯೋಗ್ಯ ಬೆಳವಣಿಗೆಗೆ ಸಹಕಾರಿಯಾಗಲಿದ್ದು, ಹೆಣ್ಣು ಮಕ್ಕಳು ಸೊಪ್ಪು, ಮಾಂಸ, ಮೀನುಗಳನ್ನು ಸೇವಿಸಬೇಕು ಎಂದರು.

ಪ್ರತಿಯೊಬ್ಬರ ಆರೋಗ್ಯಕ್ಕೆ 'ಬಿ' ಮತ್ತು 'ಡಿ' ವಿಟಮಿನ್ ಆರೋಗ್ಯಕ್ಕೆ ಉತ್ತಮ ಅದರೊಂದಿಗೆ ಬೆಳಗ್ಗಿನ ಸೂರ್ಯನ ಕಿರಣಗಳ ಅಗತ್ಯ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಭಾರ ಪ್ರಾಂಶುಪಾಲ ಡಾ. ನವೀನ್ ಎನ್. ಮಾತನಾಡಿ, ಆಹಾರ ಪ್ರತಿಯೊಬ್ಬರಿಗೂ ಬೇಕು. ನಮ್ಮ ದೇಹದ ಮೆದುಳು, ಚರ್ಮ, ಮೂಳೆ, ನರ, ದೇಹದ ಪ್ರತಿಯೊಂದು ಬೆಳವಣಿಗೆಗೆ ಪೌಷ್ಟಿಕ ಆಹಾರ ಅಗತ್ಯ. ಹಿಂದೆಯೇ ನಮ್ಮ ಆಯುರ್ವೇದ ಪದ್ದತಿಯಲ್ಲಿಯೇ ನಮ್ಮ ಆಹಾರ ಪದ್ದತಿಯನ್ನು ಪ್ರಕಟಿಸಿದ್ದು, ಇತ್ತೀಚಿನ ದಿನಗಳಲ್ಲಿ ನಾವು ಪಾಶ್ಚಾತ್ಯ ಆಹಾರಗಳಿಗೆ ಮಾರು ಹೋಗಿದ್ದು, ನಮ್ಮಲ್ಲಿನ ಋತುಮಾನದ ಆಹಾರ ಪದ್ದತಿಗೆ ವಿರುದ್ಧವಾಗಿದ್ದು, ಆರೋಗ್ಯದಲ್ಲಿ ಸಮಸ್ಯೆ ಎದುರಿಸುವಂತಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕೆಎಂಸಿ ಆಸ್ಪತ್ರೆಯ ಆಡಳಿತ ಅಧಿಕಾರಿ ದೃವ್ ಕುಲಾಯಿ ಐಕ್ಯೂಎಸಿ ಸಹ ಸಂಯೋಜಕಿ ಡಾ. ಜೋತಿಪ್ರಿಯಾ, ರೆಡ್ ಕ್ರಾಸ್ ಕಾರ್ಯಕ್ರಮ ಅಅಧಿಕಾರಿಗಳಾದ ಡಾ. ಅಶೋಕ್ ಸಿ.ಹೆಚ್., ನಯನ ಕುಮಾರಿ, ಜೋತಿ ಪಿ. ಉಪಸ್ಥಿತರಿದ್ದರು.

ರೆಡ್ ಕ್ರಾಸ್ ಸ್ವಯಂ ಸೇವಕರುಗಳಾದ ಪ್ರಜ್ಞ ಸ್ವಾಗತಿಸಿದರು. ತ್ರಿಶಾ ನಿರೂಪಿಸಿ, ಆಕಾಂಶ ವಂದಿಸಿದರು.


















Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article