ಅಖಂಡ ಹಿಂದೂ ಸಮಾಜದ ಶಕ್ತಿ ಪುನಃ ಶ್ಚೇತನ ಗೊಳಿಸುವ ಸಲುವಾಗಿ ಸಮಾವೇಶ ಅಗತ್ಯ: ಶ್ರೀ ಕಾಳಹಸ್ಥೇಂದ್ರ ಸರಸ್ವತಿ ಮಹಾ ಸ್ವಾಮೀಜಿ
ಮಂಗಳೂರು: ಮನುಷ್ಯರ ಅರವತ್ತರ ಸಮಯದಲ್ಲಿ ಹೋಮಹವನ ಮಾಡಿ ಅವರಲ್ಲಿ ಶಕ್ತಿ ಪುನಶ್ಚೇತನಗೊಳಿಸುವ ಹಾಗೆ ಇಂದು ಹಿಂದೂ ಸಮಾಜಕ್ಕೆ ಅರುವತ್ತು ತುಂಬಿದ ಈ ಸಂದರ್ಭದಲ್ಲಿ ಅಖಂಡ ಹಿಂದೂ ಸಮಾಜದ ಶಕ್ತಿ ಪುನಃ ಶ್ಚೇತನ ಗೊಳಿಸುವ ಸಲುವಾಗಿ ಈ ಸಮಾವೇಶ ಎಂದು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತಿಪೀಠ ಶ್ರೀ ಕಾಳಹಸ್ಥೇಂದ್ರ ಸರಸ್ವತಿ ಮಹಾ ಸ್ವಾಮೀಜಿ ಅವರು ನುಡಿದರು.
ಅವರು ವಿಶ್ವ ಹಿಂದೂ ಪರಿಷದ್ ಕಾಪು ತಾಲೂಕು ಷಷ್ಠಿ ಪೂರ್ತಿ ವರ್ಷದ ಪ್ರಯುಕ್ತ ಹಿಂದೂ ಸಮಾವೇಶ ಪಡುಬಿದ್ರಿ ಬಂಟರ ಸಂಘದ ಕೃಷ್ಣ ಸುಧಾಮ ವೇದಿಕೆಯಲ್ಲಿ ಆದಿತ್ಯವಾರ ಆಶೀರ್ವಚನ ಮಾಡಿದರು.
ಶ್ರೀ ಗಳು ಮಾತನಾಡಿ, ನಾವು ಜಾಗ್ರತತಾಗದೇ ಇದ್ದಲ್ಲಿ ನಮ್ಮ ಅಸ್ತಿತ್ವಕ್ಕೆ ಧಕ್ಕೆಯಾಗಲಿದೆ. ನಾವು ಸಾಧ್ಯವಾದಷ್ಟು ಸರ್ವ ಜಾತಿಯ ಆಚರಣೆಗೆ ಗಮನ ಕೊಡಬೇಕು. ತೊಂದರೆಗಳು ಬಂದಲ್ಲಿ ಹಿಂದು ಎಂಬ ಭಾವನೆ ನಮ್ಮಲ್ಲಿ ಬರಬೇಕು. ಏನೇ ವ್ಯಾಪಾರ ವಹಿವಾಟು ನಮ್ಮ ಹಿಂದುಗಳ ಹತ್ತಿರವೇ ಮಾಡಬೇಕು. ಹಿಂದುಗಳ ಭಾವನೆಗಳಿಗೆ ದಕ್ಕೆ ಮಾಡುವವರಿಗೆ, ಹಿಂದುಗಳ ದೇವರುಗಳಿಗೆ ಕಲ್ಲು ಬಿಸಾಡುವವರಿಗೆ ಪ್ರೋತ್ಸಾಹ ಕೊಡಬಾರದು. ನಮ್ಮ ಮಕ್ಕಳಿಗೆ ಹೆಸರುಗಳನ್ನು ಇಡುವಾಗ ದೇವರ ಹೆಸರನ್ನು ಇಡಬೇಕು. ನಮ್ಮ ಹೆಣ್ಣು ಮಕ್ಕಳಿಗೆ ಆರ್ಥಿಕ ಸಬಲತೆ, ಮಕ್ಕಳ ಸಂಸ್ಕೃತಿಗಳ ಬಗ್ಗೆ ಹೆಚ್ಚು ಗಮನ ಕೊಡಬೇಕು. ಅಂತಹ ಶಾಲೆ ಗಳಿಗೆ ಮಕ್ಕಳು ಸೇರಬೇಕು. ಹಿಂದೂಗಳು ಸಮಾಜ ರಕ್ಷಣೆ ಯಕಡೆ ಗಮನ ಕೊಡಬೇಕು ಎಂದರು.
ಹಿಂದುಗಳು ಸುರಕ್ಷಿತವಾಗಿ ಇರಬಾರದು ಎಂದು ಏನೆಲ್ಲಾ ಮಾಡಬೇಕು ಅದೆಲ್ಲ ಪಿತೂರಿ ನಡೆಸುವಾಗ ನಾವು ನಮ್ಮ ರಕ್ಷಣೆ ಕಡೆ ಗಮನ ಕೊಡದಿದ್ದರೆ ಬಾಂಗ್ಲಾದೇಶ ದೇಶದ ಪರಿಸ್ಥಿತಿ ನಮ್ಮಲ್ಲಿ ಬರಲು ವಿಳಂಬವಾಗದು. ನಮ್ಮ ಸಮಾಜದ ಬಗ್ಗೆ ಜಾಗ್ರತಿ ಮೂಡಬೇಕು,ಆಗಮಾತ್ರ ಹಿಂದೂಗಳು ಒಗ್ಗಟ್ಟಾಗುತ್ತಾರೆ. ರಾಮಜನ್ಮ ಭೂಮಿ ಕನಸು ನನಸಾಗಲು ವಿಶ್ವ ಹಿಂದೂ ಪರಿಷತ್ ಮೂಲಕಾರಣ. ಹಿಂದೂ ದೇವಾಲಯಗಳಲ್ಲಿ ಸರ್ಕಾರಢದ ಹಸ್ತಕ್ಷೇಪ ಸರಿಯಲ್ಲ ಎಂದರು.
ಅಧ್ಯಕ್ಷರಾಗಿ ಧಾರ್ಮಿಕ ಚಿಂತಕ ಶಶಿಧರ ಶೆಟ್ಟಿ ಎರ್ಮಾಳು, ದಿಕ್ಸೂಚಿ ಭಾಷಣಕಾರರಾಗಿ ರಘು ಸಕಲೇಶಪುರ, ಅತಿಥಿಗಳಾಗಿ ಗೋಪಾಲ ಪೂಜಾರಿ ಶಿರ್ವ, ಸುಧಾಕರ ಪಾಣಾರ ಮೂಡುಬೆಳ್ಳೆ, ವಿಷ್ಣುಮೂರ್ತಿ ಆಚಾರ್ಯ, ದಿನೇಶ್ ಮೆಂಡನದ, ಜಯಪ್ರಕಾಶ್ ಪ್ರಭು, ರಾಜೇಂದ್ರ ಶೆಣೈ ಮತ್ತಿತರರು ಉಪಸ್ಥಿತರಿದ್ದರು.