ಜಗಪ್ರಸಿದ್ಧ ತಿರುಪತಿ ಪ್ರಸಾದ ಲಡ್ಡುವಿನಲ್ಲಿ ದನದ ಕೊಬ್ಬು, ಮೀನಿನೆಣ್ಣೆ: ವಿಶ್ವ ಹಿಂದೂ ಪರಿಷದ್ ಖಂಡನೆ, ಸಿಬಿಐ ತನಿಖೆಗೆ ಆಗ್ರಹ

ಜಗಪ್ರಸಿದ್ಧ ತಿರುಪತಿ ಪ್ರಸಾದ ಲಡ್ಡುವಿನಲ್ಲಿ ದನದ ಕೊಬ್ಬು, ಮೀನಿನೆಣ್ಣೆ: ವಿಶ್ವ ಹಿಂದೂ ಪರಿಷದ್ ಖಂಡನೆ, ಸಿಬಿಐ ತನಿಖೆಗೆ ಆಗ್ರಹ

ಮಂಗಳೂರು: ಜಗಪ್ರಸಿದ್ಧ ತಿರುಪತಿ ವೇಕಟೇಶ್ವರ ದೇವರ ಪರಮಪ್ರಸಾದ ಲಡ್ಡುವಿನಲ್ಲಿ ದನದ ಕೊಬ್ಬು, ಮೀನಿನೆಣ್ಣೆ ಇರುವ ಅಘಾತಕಾರಿ ಅಂಶ ಬಯಲಾಗಿದ್ದು, ವಿಶ್ವ ಹಿಂದೂ ಪರಿಷತ್ ಮಂಗಳೂರು ಬಲವಾಗಿ ಖಂಡಿಸುತ್ತದೆ.

ತಿರುಪತಿ ವೇಕಟೇಶ್ವರ ದೇವರ ಪ್ರಸಾದ ಲಡ್ಡುವಿನಲ್ಲಿ ಮೀನು ಎಣ್ಣೆ, ದನದ ಕೊಬ್ಬು ಇರುವ ವಿಷಯ ಕೋಟ್ಯಂತರ ಹಿಂದೂಗಳ ಭಾವನೆಗೆ ಧಾರ್ಮಿಕ ಧಕ್ಕೆ ತಂದಿದೆ, ಈ ಪ್ರಕರಣವನ್ನು ಸಿಬಿಐ ಮೂಲಕ ತನಿಖೆ ನಡೆಸಿ, ಈ ಕೃತ್ಯ ನಡೆಸಿದವರಿಗೆ ಕಠಿಣ ಶಿಕ್ಷೆ ಕೊಡಿಸಬೇಕೆಂದು ಅಗ್ರಹ. ವಿಶ್ವದಾದ್ಯಂತ ತಿರುಪತಿ ವೆಂಕಟರಮಣನ ದೇವರ ಮೇಲೆ ಅತೀವ ಭಕ್ತಿ ಭಾವ ಇದ್ದು ಅಲ್ಲಿಯ ಲಡ್ಡು ಪ್ರಸಾದವನ್ನು ಬಾಲಾಜಿ ದೇವರ ಭಕ್ತರು ಅತ್ಯಂತ ಪವಿತ್ರ್ಯದಿಂದ ಸ್ವೀಕಾರ ಮಾಡುತ್ತಾರೆ. ಈ ಲಡ್ಡು ಪ್ರಸಾದವನ್ನು ದನದ ಕೊಬ್ಬು ಮತ್ತು ಮೀನಿನೆಣ್ಣೆ ಉಪಯೋಗಿಸಿ ತಯಾರಿಸಿದ್ದು, ಸಮಸ್ತ ಶ್ರೀ ದೇವರ ಭಕ್ತರಿಗೆ ಅತೀವ ನೋವು ತಂದಿದೆ. ಇದನ್ನು ವಿಶ್ವ ಹಿಂದೂ ಪರಿಷದ್ ತೀವ್ರವಾಗಿ ಖಂಡಿಸುತ್ತದೆ.

ಇದಕ್ಕೆ ಕಾರಣಕರ್ತರಾಗಿದ್ದವರನ್ನು ಅಲ್ಲದೆ ಇದರಲ್ಲಿ ಭಾಗಿಯಾಗಿದ್ದವರನ್ನು ತಕ್ಷಣ ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಒಳಪಡಿಸುವಂತೆ, ಈ ಪ್ರಕರಣವನ್ನು ಸಿಬಿಐ ಮೂಲಕ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಿಶ್ವ ಹಿಂದೂ ಪರಿಷದ್ ಅಗ್ರಹಿಸುತ್ತದೆ ಎಂದು ಜಿಲ್ಲಾಧ್ಯಕ್ಷ ಎಚ್.ಕೆ. ಪುರುಷೋತ್ತಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article