ಮಂಗಳೂರಿನಲ್ಲಿ ತಡರಾತ್ರಿ ನಡೆದ ಅಪಘಾತಕ್ಕೆ ಯುವಕರಿಬ್ಬರು ಬಲಿ
Friday, September 6, 2024
ಮಂಗಳೂರು: ತಡರಾತ್ರಿ ನಗರದ ಯೆಯ್ಯಾಡಿ ಹರಿಪದವು ಎಂಬಲ್ಲಿ ತಡರಾತ್ರಿ ನಡೆದ ಅಪಘಾತದಲ್ಲಿ ಯುವಕರಿಬ್ಬರು ಮೃತಪಟ್ಟ ಘಟನೆ ನಡೆದಿದೆ.
ಉಪ್ಪಿನಂಗಡಿಯ ಚೇತನ್(24) ಮತ್ತು ಕೋಡಿಕಲ್‌ನ ಕಾಶೀನಾಥ್(17) ಮೃತಪಟ್ಟವರು.
ಯುವಕರಿಬ್ಬರು ಶಕ್ತಿನಗರದ ಚಾಲುಕ್ಯ ಬಾರ್‌ನ ಸಿಬ್ಬಂದಿ. ಇಬ್ಬರೂ ಕೆಲಸ ಮುಗಿಸಿ ತಡರಾತ್ರಿ ಮನೆಕಡೆ ಬೈಕ್‌ನಲ್ಲಿ ಬರುತ್ತಿದ್ದರು. ಬೈಕ್ ಯೆಯ್ಯಾಡಿಯ ಹರಿಪದವಿಗೆ ಬರುತ್ತಿದ್ದಂತೆ ಲಾರಿಯೊಂದಕ್ಕೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದಾಗ ನಿಯಂತ್ರಣ ಕಳೆದುಕೊಂಡು ಬೈಕ್‌ನಿಂದ ರಸ್ತೆಗೆ ಎಸೆಯಲ್ಪಟ್ಟಿದ್ದಾರೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ಇಬ್ಬರೂ ಬಿದ್ದು ಮೃತಪಟ್ಟಿದ್ದಾರೆ.