ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ಹಿಂದಿ ದಿನಾಚರಣೆ

ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ಹಿಂದಿ ದಿನಾಚರಣೆ


ಮಂಗಳೂರು: ಭಾಷೆ ಮತ್ತು ಸಾಂಸ್ಕೃತಿಕ ಏಕತೆಯನ್ನು ಉತ್ತೇಜಿಸುವ ಹಿಂದಿ ದಿನಾಚರಣೆಯು ಸೆ.25 ರಂದು ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬೆಸೆಂಟ್ ಪಿಯು ಕಾಲೇಜಿನ ಪ್ರಾಂಶುಪಾಲ ಡಾ. ನಾಯಕ್ ರೂಪಸಿಂಗ್ ಜಿ. ಭಾಗವಹಿಸಿ ಮಾತನಾಡಿ, ಹಿಂದಿ ಭಾಷೆಯ ಮತ್ತು ಸಾಹಿತ್ಯದ ಶ್ರೀಮಂತಿಕೆ ಮತ್ತು ಭಾರತದ ಸಾಂಸ್ಕೃತಿಕ ಭೂದೃಶ್ಯವನ್ನು ರೂಪಿಸುವಲ್ಲಿ ಅದರ ಪಾತ್ರದ ಕುರಿತು ಮಾತನಾಡಿದರು.

ಗೌರವ ಅತಿಥಿ ಡಬ್ಲ್ಯೂಎನ್‌ಇಎಸ್ ಉಪಾಧ್ಯಕ್ಷೆ ಹಾಗೂ ಬೆಸೆಂಟ್ ಮಹಿಳಾ ಕಾಲೇಜಿನ ಸಂಚಾಲಕಿ ಡಾ. ಮಂಜುಳಾ ಕೆ.ಟಿ. ಮಾತನಾಡಿ, ಯುವಜನರಲ್ಲಿ ಹಿಂದಿ ಪ್ರಚಾರದ ಮಹತ್ವವನ್ನು ತಿಳಿಸಿದರು. 

ಪ್ರಾಚಾರ್ಯ ಡಾ. ಪ್ರವೀಣ್ ಕುಮಾರ್ ಕೆ.ಸಿ. ಅವರು ಭಾಷಾ ವೈವಿಧ್ಯತೆಯನ್ನು ಬೆಳೆಸುವಲ್ಲಿ ಶಿಕ್ಷಣ ಸಂಸ್ಥೆಗಳ ಜವಾಬ್ದಾರಿಯನ್ನು ಒತ್ತಿ ಹೇಳಿದರು.

ಸಂಗೀತಾ ಪ್ರಾರ್ಥಸಿದರು. ಅದಿತಿ ಕಾರ್ಯಕ್ರಮದ ನಿರೂಪಿಸಿದರು. ಉಪನ್ಯಾಸಕಿ ಕೀರ್ತನಾ ಶೆಟ್ಟಿ ಸ್ವಾಗತಿಸಿದರು. ಹಿಂದಿ ವಿಭಾಗದ ಮುಖ್ಯಸ್ಥ ಡಾ. ಪರಶುರಾಮ ಗ. ಮಾಳಗೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಆಶಾ ವಂದಿಸಿದರು. 

ಇದೆ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಲಾಯಿತು. ಹಿಂದಿ ವಿಭಾಗದ ಅಧ್ಯಾಪಕ ಚೆನ್ನ ಕೇಶವ ಸಹಕರಿಸಿದರು.

ಕಾರ್ಯಕ್ರಮದಲ್ಲಿ ಅಧ್ಯಾಪಕರಾದ ಡಾ. ಗಿರಿಯಪ್ಪ, ಪ್ರೊ. ರೂಪತಿ ಮತ್ತು ಪ್ರೊ. ರವಿರಾಜ್ ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article