ಅಧಿಕೃತ ಸರ್ವೆಗೆ ಸ್ಪೀಕರ್ ಜಿಲ್ಲಾಧಿಕಾರಿಗಳಿಗೆ ಸೂಚನೆ
Saturday, September 28, 2024
ಮಂಗಳೂರು: ಪಾವೂರು ಗ್ರಾಮದ ಉಳಿಯ ದ್ವೀಪದಲ್ಲಿ ಅಕ್ರಮ ಮರಳುಗಾರಿಕೆಯ ನಡೆಯುತ್ತಿದೆ ಎಂದು ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ದ್ವೀಪದ ಜಮೀನಿನ ವಿಸ್ತೀರ್ಣದ ವಾಸ್ತವ ಅರಿಯಲು ಅಧಿಕೃತ ಸರ್ವೆ ನಡೆಸಲು ಸ್ಪೀಕರ್ ಯು.ಟಿ. ಖಾದರ್ ದ.ಕ. ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.
ಈ ಬಗ್ಗೆ Satellite images ಅನ್ನು Google Engine Portal ಮೂಲಕ ತೆಗೆಯಬೇಕು ಮತ್ತು ಅಧಿಕೃತ ಸರ್ವೆಯರ್ ಮೂಲಕ ಸರ್ವೆ ನಡೆಸಬೇಕು. ಕಂದಾಯ ಇಲಾಖೆಯ ಅಧಿಕೃತ ದಾಖಲೆಯ ಪ್ರಕಾರ ಈ ಹಿಂದೆ ದ್ವೀಪದ ಮೂಲ ವಿಸ್ತೀರ್ಣ ಎಷ್ಟಿತ್ತು ಮತ್ತು ಈಗ ಎಷ್ಟಿದೆ? ವಿಸ್ತೀರ್ಣದಲ್ಲಿ ಕೊರತೆ ಕಂಡು ಬಂದಿದ್ದರೆ ಅದಕ್ಕೆ ಕಾರಣ ಏನು? ಎಂಬುದರ ಬಗ್ಗೆ ಸರ್ವೆ ನಡೆಸಿ ವರದಿ ನೀಡುವಂತೆ ನಿರ್ದೇಶನ ನೀಡಿದ್ದಾರೆ.