ಸರ್ದಾರ್ ವಲ್ಲಭಬಾಯಿಯನ್ನು ಗಾಂಧಿ ನಿರ್ಲಕ್ಷಿದ್ದಾರೆಂಬುದು ಅಪಪ್ರಚಾರ: ತುಷಾರ್ ಗಾಂಧೀ
Saturday, September 21, 2024
ಮಂಗಳೂರು: ಗಾಂಧೀಜಿಯವರು ಸರ್ದಾರ್ ವಲ್ಲಭಬಾಯಿ ಪಟೇಲ್‌ಗೆ ಸಿಗಬೇಕಾಗಿದ್ದ ಪ್ರಥಮ ಪ್ರಧಾನಿಯ ಸ್ಥಾನವನ್ನು ನೆಹರೂ ಅವ ರಿಗೆ ನೀಡುವ ಮೂಲಕ ತಪ್ಪಿಸಿದ್ದರು ಎನ್ನುವುದು ಅಪಪ್ರಚಾರವಷ್ಟೆ. ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆಯುವ ಸಂದರ್ಭ ಕಾಂಗ್ರೆಸ್‌ನ ಅಧ್ಯಕ್ಷ ಸ್ಥಾನಕ್ಕೆ ಸರ್ದಾರ್ ವಲ್ಲಭಬಾಯಿ ಪಟೇಲರ ಹೆಸರನ್ನು ಪಕ್ಷದ ಬಹುತೇಕರು ಸೂಚಿಸಿದ್ದರು.
ಆದರೆ 1994ರಿಂದಲೇ ಸರ್ದಾರ್ ವಲ್ಲಭಬಾಯಿವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ್ದ ಗಾಂಧೀಜಿ ಅವರಿಗೆ ತಮ್ಮ ಆಶ್ರಮದಲ್ಲಿ ಪ್ರಾಕೃತಿಕ ಚಿಕಿತ್ಸೆಯ ಬಗ್ಗೆಯೂ ಸಲಹೆ ನೀಡಿದ್ದರು. ಆದರೆ ಆ ಸಂದರ್ಭದಲ್ಲಿ ಕಾಂಗ್ರೆಸ್‌ಗೆ ಓರ್ವ ಯುವ ದೂರದೃಷ್ಟಿ ನಾಯಕನ ಅಗತ್ಯವಿತ್ತು. ಆ ಆಯ್ಕೆ ನೆಹರೂ ಆಗಿತ್ತು. ಬ್ರಿಟಿಷರು ಆಡಳಿತ ಹಸ್ತಾಂತರ ಮಾಡುವ ವೇಳೆ ಸರಕಾರದ ಬೇಡಿಕೆ ಇಟ್ಟಾಗ ಪಕ್ಷದ ಅಧ್ಯಕ್ಷನಿಗೇ ಮನ್ನಣೆ ನೀಡಲಾಯಿತು. ಇದು ವಾಸ್ತವ. ಆದರೆ ಇತಿಹಾಸವನ್ನು ತಿರುಚಿ ಸುಳ್ಳು ಹರಡುವುದು ಸಾಮಾನ್ಯವಾಗಿರುವ ಕಾರಣ ಇಂತಹ ಅಪಪ್ರಚಾರಗಳು ಮುನ್ನಲೆಗೆ ಬಂದಿವೆ ಎಂದು ಪ್ರೊ. ಉದಯ ಇರ್ವತ್ತೂರು ಅವರ ಪ್ರಶ್ನೆಯೊಂದಕ್ಕೆ ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನದ ವತಿಯಿಂದ ಟಾಗೋರ್ ಪಾರ್ಕ್‌ನಲ್ಲಿ ಶುಕ್ರವಾರ ಸಮಕಾಲೀನ ಭಾರತದಲ್ಲಿ ಗಾಂಧಿ ಚಿಂತನೆಗಳ ಬಗ್ಗೆ ಚರ್ಚೆ, ಸಂವಾದ ಕಾರ್ಯಕ್ರಮದದಲ್ಲಿ ಮಹಾತ್ಮ ಗಾಂಧೀಜಿಯವರ ಮರಿಮಗ ಮತ್ತು ಸಾಮಾಜಿಕ ಚಿಂತಕ ತುಷಾರ್ ಗಾಂಧೀ ಪ್ರತಿಕ್ರಿಯಿಸಿದರು.