ಪೋಕ್ಸೋ ಆರೋಪಿಯ ಬಿಡುಗಡೆ
ಮಂಗಳೂರು: ಪೋಕ್ಕೋ ಪ್ರಕರಣದಲ್ಲಿ ಅಪ್ರಾಪ್ತ ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬಂಧಿಯಾಗಿದ್ದ ಆರೋಪಿಯನ್ನು ದ.ಕ ಜಿಲ್ಲಾ 2ನೇ ಹೆಚ್ಚುವರಿ ನ್ಯಾಯಾಧೀಶರಾದ ಮನು ಕೆ. ಅವರು ಆರೋಪ ಮುಕ್ತಗೊಳಿಸಿ ಬಿಡುಗಡೆ ಮಾಡಿದ್ದಾರೆ.
ಘಟನೆಯ ವಿವರ:
ಪೋಕ್ಸೋ ಪ್ರಕರಣದ ಆರೋಪಿ ಆಪಾದಿತ ಕಿರಣ್ ಎಂಬಾತನು ಅಪ್ರಾಪ್ತ ವಯಸ್ಸಿನ ನೊಂದ ಬಾಲಕಿಯನ್ನು ‘ಪ್ರೀತಿ ಮಾಡುತ್ತಿದ್ದು, ಮದುವೆಯಾಗುತ್ತೇನೆ’ ಎಂದು ನಂಬಿಸಿ ಬಾಲಕಿಯನ್ನು 2023ರ ಜೂನ್ 13 ರಂದು ಬೆಳಗ್ಗೆ 10 ಗಂಟೆಗೆ ಮಂಗಳೂರು ತಾಲೂಕು ಬಜಪೆ ಗ್ರಾಮದ ಬಜಪೆ ಬಸ್ಸು ನಿಲ್ದಾಣದ ಬಳಿ ಕರೆಸಿ ಬಾಲಕಿಯನ್ನು ಪುಸಲಾಯಿಸಿ ಮಂಗಳೂರು ತಾಲೂಕು ಮೂಡುಪೆರಾರ ಗ್ರಾಮದ ಅರ್ಕೆಪದವು ಎಂಬಲ್ಲಿರುವ ಮನೆಗೆ ಕರೆದುಕೊಂಡು ಹೋಗಿ ನೊಂದ ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ 3 ದಿನ ಅವಳ ಜೊತೆ ಬಲವಂತವಾಗಿ ಲೈಂಗಿಕ ಸಂಭೋಗ ನಡೆಸಿರುತ್ತಾನೆ ಎಂಬಿತ್ಯಾದಿಯಾಗಿ ಆರೋಪಿ ವಿರುದ್ಧ ನೀಡಿದ ದೂರಿನನ್ವಯ ಬಜಪೆ ಪೊಲೀಸರು ಅತ್ಯಾಚಾರ ಮತ್ತು ಪೋಕ್ಸೋ ಪ್ರಕರಣ ದಾಖಲಿಸಿದ್ದು, ಮಂಗಳೂರು ನ್ಯಾಯಾಲಯದಲ್ಲಿ ಆರೋಪಿಯ ವಿರುದ್ಧ ತನಿಕೆ ನಡೆಸಿ ಸಾಕ್ಷಿದಾರರನ್ನು ತನಿಖೆ ಮಾಡಿ ವಾದ ವಿವಾದಗಳನ್ನು ಆಲಿಸಿದ ದ.ಕ ಜಿಲ್ಲಾ 2ನೇ ಹೆಚ್ಚುವರಿ ನ್ಯಾಯಾಧೀಶರಾದ ಮನು ಕೆ. ಅವರು ಆರೋಪಿಯ ವಿರುದ್ಧ ಕೇಸನ್ನು ಸಾಬೀತು ಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ಆರೋಪಿಯನ್ನು ಕೇಸಿನಿಂದ ಮುಕ್ತಗೊಳಿಸಿ ಬಿಡುಗಡೆ ಮಾಡಿರುತ್ತಾರೆ.
ಆರೋಪಿಯ ಪರವಾಗಿ ಮುಖ್ಯ ಕಾನೂನು ನೆರವು ಅಭಿರಕ್ಷಕರಾದ ಜಿ. ವಾಸುದೇವ ಗೌಡ ಅವರು ವಾದಿಸಿದ್ದರು.