ಇರುವೈಲಿನಲ್ಲಿ ಪೂಜಿಸಲ್ಪಟ್ಟ 13ನೇ ವರ್ಷದ ಗಣೇಶ
Sunday, September 8, 2024
ಮೂಡುಬಿದಿರೆ: ಫ್ರೆಂಡ್ಸ್ ಕ್ಲಬ್ (ರಿ) ಇರುವೈಲು ಇವರ 13ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮವು ಇರುವೈಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಪ್ರಧಾನ ಅರ್ಚಕ ಐ ರಾಘವೇಂದ್ರ ಆಸ್ರಣ್ಣ ಅವರ ನೇತತ್ವದಲ್ಲಿ ಪೂಜಾ ವಿಧಿ ವಿಧಾನಗಳೊಂದಿಗೆ ನಡೆಯಿತು.
ಕಾರ್ಯಕ್ರಮಕ್ಕೆ ಮಾಜಿ ಸಚಿವ ಅಭಯಚಂದ್ರ ಜೈನ್, ಕಾಂಗ್ರೆಸ್ ಮುಖಂಡ ಮಿಥುನ್ ರೈ, ಪೊಲೀಸ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ, ವಿವೇಕ್ ಆಳ್ವ , ರುಕ್ಮಯ್ಯ ಪೂಜಾರಿ, ರೀಟಾ ಕುಟಿನ್ಹಾ, ಚಂದ್ರಹಾಸ ಸನಿಲ್ ಮತ್ತಿತರರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.