ಬಾಳೆಪುಣಿ ಚಕ್‌ಪೋಸ್ಟ್‌ನಲ್ಲಿ ಸ್ವಚ್ಛತಾ ಶ್ರಮದಾನ
Saturday, September 21, 2024
ಮುಡಿಪು: ಮುಡಿಪು ಚಕ್‌ಪೋಸ್ಟ್ ಇರಾ ರಸ್ತೆ ಸ್ವಚ್ಛತೆಗಾಗಿ ನಡೆದ ಶ್ರಮದಾನದಲ್ಲಿ ರಸ್ತೆ ಬದಿ ಮತ್ತು ಚರಂಡಿಗಳಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯಗಳನ್ನು ಹೆಕ್ಕಿ, ವಿಂಗಡಿಸಿ ಸ್ವಚ್ಛ ಸಂಕೀರ್ಣದ ಮೂಲಕ ಸಮರ್ಪಕವಾಗಿ ನಿರ್ವಹಿಸಲಾಯಿತು.
ಜನ ಶಿಕ್ಷಣ ಟ್ಟಸ್ಟ್, ಬಾಳಪುಣಿ ಗ್ರಾಮ ಪಂ., ಅಪ್ನಾ ದೇಶ್ ಸಹಯೋಗದಲ್ಲಿ ನಡೆದ ಈ ಶ್ರಮದಾನದಲ್ಲಿ ಸ್ಮೈಲ್ ಸ್ಕಿಲ್ ಸ್ಕೂಲ್ ವಿದ್ಯಾರ್ಥಿಗಳು, ಸ್ಥಳೀಯ ಸ್ವಚ್ಛತಾ ಸ್ವಯಂ ಸೇವಕರು ಪಂಚಾಯತ್ ಸಿಬಂದಿಗಳು ಬಾಗವಹಿಸಿದ್ದರು.
ಸ್ವಚ್ಛತಾ ಶ್ರಮದಾನದ ಮೂಲಕ ರಸ್ತೆ ತ್ಯಾಜ್ಯವನ್ನು ತೆರವುಗೊಳಿಸುವುದರೊಂದಿಗೆ ಸಾರ್ವಜನಿಕ ಸ್ಥಳಗಳಲ್ಲಿ ಕಸ ಬಿಸಾಡುವುದನ್ನು ತಡೆಯುವುದರೊಂದಿಗೆ ಸ್ವಚ್ಛ ರಸ್ತೆ ಹಸಿರು ರಸ್ತೆ ನಿರ್ಮನಕ್ಕೆ ನಿರಂತರ ಶ್ರಮದಾನಗಳನ್ನು ಹಮ್ಮಿಕೊಳ್ಳುವುದು ಅಗತ್ಯವೆಂದು ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ ತಿಳಿಸಿದರು.
ಸ್ವಚ್ಛತಾ ಸೇನಾನಿಗಳಾದ ಶಮ ಪ್ರಕಾಶ್, ಇಸ್ಮೈಲ್ ಕನಂತೂರು, ಚೇತನ್ ಕುಮಾರ್, ಕಾವೇರಿ, ಪ್ರಜ್ನಾ, ಜನನಿ ಸೆಮಿಮ, ಪಂಚಾಯತ ಸಿಬ್ಬಂದಿ ಸದಾನಂದ ಸಹಕರಿಸಿದರು.