ಕುರ್ನಾಡಿನಲ್ಲಿ ಸ್ವಚ್ಛತಾ ಶ್ರಮದಾನ
ಮುಡಿಪು: ಸ್ವಚ್ಛತೆಯೇ ಸೇವೆ ರಾಷ್ಟ್ರೀಯ ಪಾಕ್ಷಿಕ ಅಭಿಯಾನದ ಅಂಗವಾಗಿ ಕುರ್ನಾಡು ಮುಡಿಪು ಪೇಟೆ ರಸ್ತೆ ಸ್ವಚ್ಛತೆ ಶ್ರಮದಾನ ನಡೆಯಿತು.
ಕುರ್ನಾಡು ಗ್ರಾಮ ಪಂಚಾಯತ್, ಜನ ಶಿಕ್ಷಣ ಟ್ಟಸ್ಟ್, ಮುಡಿಪು ಸ.ಪ್ರ. ದರ್ಜೆ ಕಾಲೇಜ್ ರಾಷ್ಟ್ರೀಯ ಸೇವಾ ಯೋಜನೆ ಸಹಯೋಗದಲ್ಲಿ ನಡೆದ ಶ್ರಮದಾನಕ್ಕೆ ಜಿಲ್ಲಾ ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ ವರು ಚಾಲನೆ ನೀಡಿ ರಸ್ತೆ ಬದಿ ತ್ಯಾಜ್ಯ ತೆರವಿನೊಂದಿಗೆ ಸಾರ್ವಜನಿಕ ಸ್ಥಳಗಳಲ್ಲಿ ಕಸ ಬಿಸಾಡುವುದನ್ನು ತಡೆಯುವುದು, ಮನೆ ಮತ್ತು ವಾಣಿಜ್ಯ ಅಂಗಡಿಗಳಲ್ಲಿ ಕಸ ವಿಂಗಡಿಸಿ ಸಂಪನ್ಮೂಲವಾಗಿ ಪರಿವರ್ಥಿಸುವ ಕರ್ಯವನ್ನು ಕಟ್ಟು ನಿಟ್ಟಾಗಿ ನಿರ್ವಹಿಸಿ ಕಸ ಮುಕ್ತ ಗ್ರಾಮ ನಿರ್ಮಾಣಕ್ಕೆ ಬಧ್ಧತಯಿಂದ ಕರ್ಯ ನಿರ್ವಹಿಸುವುದು ಅಗತ್ಯವೆಂದರು.
ಪಿಡಿಒ ಕೇಶವ ಸ್ವಚ್ಛತೆಯೇ ಸೇವೆ ಅಭಿಯಾನದ ಕುರಿತು ಮಾಹಿತಿ ನೀಡಿದರು. ಪಂಣಚಾಯತ್ ಸದಸ್ಯರಾದ ಗೋಪಾಲ ಬಂಗೇರ, ಪ್ರೇಮ ಗಟ್ಟಿ, ರಾಷ್ಟ್ರೀಯ ಸೇವಾ ಯೋಜನೆ ತಂಡದ ವಿದ್ಯರ್ಥಿ ನಾಯಕಿ ತೇಜಸ್ವನಿ ಮತ್ತು ಸ್ವಯಂ ಸೇವಕರ ತಂಡ, ಪಂಚಾಯತ್ ಸಿಬ್ಬಂದಿಗಳು, ಅಶಾ ಕಾರ್ಯ ಕರ್ತೆಯರು, ಪಂಪು ಚಾಲಕರು ರಸ್ತೆ ಬದಿಗಳಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹೆಕ್ಕಿ ವಿಂಗಡಿಸಿ ನಿರ್ವಹಿಸುವ ಶ್ರಮದಾನದಲ್ಲಿ ಭಾಗವಹಿಸಿದ್ದರು.
ಶಿಕ್ಷಣ ಪ್ರೇಮಿ ರಮೇಶ ಶೇಣವ ಶ್ರಮದಾನ ಶಿಬಿರಕ್ಕೆ ಭೇಟಿ ನೀಡಿ ಪ್ರೋತ್ಸಹಿಸಿದರು.