ಮಸೀದಿಯೊಂದರಲ್ಲಿ ಅಶ್ಲೀಲ ‘ಲೈವ್‌ಚಾಟ್’ ವೈರಲ್
ಪುತ್ತೂರು: ಪುತ್ತೂರು ಶಾಸಕರ ಆಪ್ತ ಎಂಬಂತೆ ಬಿಂಬಿಸಿಕೊಳ್ಳುತ್ತಿರುವ ವ್ಯಕ್ತಿಯೊಬ್ಬನ ಲೈವ್ ಸೆಕ್ಸ್ ಚಾಟ್ ವಿಡಿಯೋ ತುಣುಕೊಂದು ಪುತ್ತೂರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಪುತ್ತೂರಿನ ಮಸೀದಿಯೊಂದರಲ್ಲಿ ಈ ವಡಿಯೋ ಚಾಟ್ ನಡೆದಿದೆ ಎನ್ನಲಾಗಿದ್ದು, ಇದರಲ್ಲಿ ತೊಡಗಿಕೊಂಡಿರುವುದು ಜೆಡಿಎಸ್ ಮತ್ತು ಕಾಂಗ್ರೇಸ್ ಪಕ್ಷದಲ್ಲಿ ಕಾರ್ಯಕರ್ತನಾಗಿದ್ದ ಅದ್ದು ಎಂಬ ವ್ಯಕ್ತಿಯದ್ದು ಎನ್ನಲಾಗುತ್ತಿದೆ.
ಮಸೀದಿ ಮುಸ್ಲಿಂರಿಗೆ ಪವಿತ್ರವಾದ ತಾಣವಾಗಿದ್ದು, ಇದೇ ಸ್ಥಳದಲ್ಲಿ ವೀಡಿಯೋ ಮೂಲಕ ಈತ ನಡೆಸಿರುವ ಲೈವ್ ಚಾಟ್ ಸಮುದಾಯದ ಆಕ್ರೋಶಕ್ಕೂ ಕಾರಣವಾಗಿದೆ. ಸಾಮಾಜಿಕ ಜಾಲತಾಣದ ಮೂಲಕ ಅಪಮಾನಕಾರಿ ಬರಹ ಬರೆಯುತ್ತಿದ್ದ ಈತನ ಹಲವು ಎಪಿಸೋಡ್‌ಗಳನ್ನು ಮಾಡಿದ್ದ. ಕೆಲವು ಎಪಿಸೋಡ್‌ಗಳಲ್ಲಿ ಉಪದೇಶಗಳನ್ನು ನೀಡಿದ್ದ. ಆದರೆ ಇದೀಗ ಈ ಉಪದೇಶ-ಎಪಿಸೋಡ್‌ಗಳ ವೀರ ತಾನೇ ‘ಎಪಿಸೋಡ್’ ಆಗಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕಾನೂನು ಹೋರಾಟ:
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ಅಶ್ಲೀಲ ವರ್ತನೆಯ ವಿಡಿಯೋ ನನ್ನದಲ್ಲ. ಯಾರದ್ದೋ ತಲೆ, ಯಾರದ್ದೋ ದೇಹ ಅಂಟಿಸಿ ನನ್ನ ಮಾನ ಹರಾಜು ಮಾಡಲು ಕುಹಕಿಗಳು ಯತ್ನಿಸುತ್ತಿದ್ದಾರೆ. ಇದು ಸ್ವಯಂಘೋಷಿತ ನಾಯಕನೊಬ್ಬನ ಕಿತಾಪತಿ. ಈ ಬಗ್ಗೆ ನಾನು ಕಾನೂನು ಮೂಲಕ ಹೋರಾಟ ನಡೆಸುತ್ತೇನೆ ಎಂದು ಅದ್ದು ಪಡೀಲ್ ಹೇಳಿಕೆ ನೀಡಿದ್ದಾರೆ.