ಶ್ರೀಕ್ಷೇತ್ರ ಬಂಟಕಲ್ಲು: ಅ.3 ರಿಂದ 13ರವರೆಗೆ ಶರನ್ನವರಾತ್ರಿ ಮಹೋತ್ಸವ
ಶಿರ್ವ: ಶ್ರೀ ಕ್ಷೇತ್ರ ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ದೇವೀ ಸನ್ನಿಧಿಯಲ್ಲಿ ವರ್ಷಂಪ್ರತಿ ಜರುಗುವ ಶರನ್ನವರಾತ್ರಿ ಮಹೋತ್ಸವ ಅ.3 ರಿಂದ ಅ.13 ರವರೆಗೆ ಪರ್ಯಂತ ವಿವಿಧ ಧಾರ್ಮಿಕ ಅನುಷ್ಠಾನಗಳೊಂದಿಗೆ ಸಂಪನ್ನಗೊಳ್ಳಲಿದೆ.
ಅ.3 ರಂದು ಸಂಜೆ 4 ಗಂಟೆಗೆ ಒಂಭತ್ತು ದಿನಗಳ ಪರ್ಯಂತ ಜರುಗುವ ಸಾಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದೆ. ನಂತರ ಯಕ್ಷಕಲಾ ಸಂಗಮ ನರಸಿಂಗೆ ಮಣಿಪಾಲ ಇವರಿಂದ ‘ಶಿವಪಂಚಾಕ್ಷರಿ ಮಹಿಮೆ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ಅ.4 ರಂದು ಬಂಟಕಲ್ಲು ಶ್ರೀದುರ್ಗಾ ಯಕ್ಷ ಬಳಗ ಇವರಿಂದ ‘ಕೊಲ್ಲೂರು ಕ್ಷೇತ್ರ ಮಹಾತ್ಮೆ-ಮೀನಾಕ್ಷಿ ಕಲ್ಯಾಣ’ ಅ.5 ರಂದು ಬಂಟಕಲ್ಲು ಶ್ರೀದುರ್ಗಾ ಮಹಿಳಾ ವೃಂದದವರಿಂದ ‘ಸಾಂಸ್ಕೃತಿಕ ವೈವಿಧ್ಯ’ ಅ.6 ರಂದು ಖ್ಯಾತ ಯಕ್ಷ ಕಲಾವಿದರ ಕೂಡುವಿಕೆಯಿಂದ ‘ರಾಮಾಂಜನೇಯ’, ಅ.7 ರಂದು ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ಹಿ.ಪ್ರಾ. ಶಾಲಾ ವಿದ್ಯಾರ್ಥಿಗಳು ಹಾಗೂ ಅಂಗನವಾಡಿ ಪುಟಾಣಿಗಳಿಂದ ‘ಸಾಂಸ್ಕೃತಿಕ ಕಾರ್ಯಕ್ರಮ’ ಅ.8 ರಂದು ಖ್ಯಾತ ಯಕ್ಷ ಕಲಾವಿದರ ಕೂಡುವಿಕೆಯಿಂದ ‘ಚಂದ್ರಹಾಸ ಚರಿತ್ರೆ’, ಅ.9 ರಂದು ಖ್ಯಾತ ಯಕ್ಷ ಕಲಾವಿದರ ಕೂಡುವಿಕೆಯಿಂದ ‘ದಕ್ಷಯಜ್ಞ’ ನಡೆಯಲಿದೆ.
ಅ.10 ರಂದು 92 ಹೇರೂರು-ಬಂಟಕಲ್ಲು ಶ್ರೀಗುರುರಾಘವೇಂದ್ರ ಮಹಿಳಾ ಭಜನಾ ಮಂಡಳಿಯವರಿಂದ ‘ಸಾಂಸ್ಕೃತಿಕ ಕಾರ್ಯಕ್ರಮ’, ಅ.11 ರಂದು ಪಡುಬೆಳ್ಮಣ್ ಶ್ರೀಮಹಾಲಿಂಗೇಶ್ವರ ಮಹಾಗಣಪತಿ ಭಜನಾ ಮಂಡಳಿ ಮತ್ತು ಬಂಟಕಲ್ಲು ಶ್ರೀ ದುರ್ಗಾ ಕುಣಿತ ಭಜನಾ ಮಂಡಳಿಯವರಿಂದ ‘ಕುಣಿತ ಭಜನಾ ಕಾರ್ಯಕ್ರಮ’, ಅ.12 ರಂದು ಅಪರಾಹ್ನ 2 ಗಂಟೆಗೆ ಸವಿತಾ ಮರಲೀಧರ್ ನೇತೃತ್ವದ ‘ನೃತ್ಯಕಲಾ ಮಂದಿರ’ ಮಣಿಪಾಲ ಮತ್ತು ಅದಿತಿ ಮೆಹಂದಲೆ ನೇತೃತ್ವದ ‘ಸೃಷ್ಠಿ ನೃತ್ಯಕಲಾ ಕುಟೀರ’ ಉಡುಪಿ ಇವರಿಂದ ಭರತನಾಟ್ಯ-ವೈವಿಧ್ಯಮಯ ಕಾರ್ಯಕ್ರಮ ಜರುಗಲಿದೆ ಎಂದು ಶ್ರೀಕ್ಷೇತ್ರದ ಪ್ರಕಟಣೆ ತಿಳಿಸಿದೆ.