ಶ್ರೀಕ್ಷೇತ್ರ ಕುಂಜಾರುಗಿರಿ: ಶ್ರೀದುರ್ಗಾದೇವೀ ಸನ್ನಿಧಿಯಲ್ಲಿ ಶರನ್ನವರಾತ್ರಿ ಮಹೋತ್ಸವ
Tuesday, September 24, 2024
ಶಿರ್ವ: ಉಡುಪಿ ಶ್ರೀ ಅದಮಾರು ಮಠದ ಆಡಳಿತಕ್ಕೆ ಒಳಪಟ್ಟ, ಇತಿಹಾಸ ಪ್ರಸಿದ್ಧ ಗಿರಿದುರ್ಗೆ ಖ್ಯಾತಿಯ ಕುಂಜಾರಿಗಿರಿ ಶ್ರೀ ದುರ್ಗಾದೇವಿ ಸನ್ನಿಧಿಯಲ್ಲಿ ಶರನ್ನವರಾತ್ರಿ ಮಹೋತ್ಸವ ಅ.3 ರಿಂದ ಅ.12 ರವರೆಗೆ ಮಹಾನವಮಿ ಪರ್ಯಂತ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಳ್ಳಲಿದೆ.
ಪ್ರತೀ ದಿನ ಬೆಳಿಗ್ಗೆ 5 ಗಂಟೆಗೆ ನಿರ್ಮಾಲ್ಯ ವಿಜಸರ್ಜನೆ, 6 ಗಂಟೆಗೆ ಉಷಾಕಾಲದ ಪೂಜೆ, 7 ಗಂಟೆಗೆ ಪಂಚಾಮೃತ ಅಭಿಷೇಕ, 8.30ಕ್ಕೆ ಅಲಂಕಾರ ಪೂಜೆ, 9.30ಕ್ಕೆ ಮಹಾಪೂಜೆ, ಮಧ್ಯಾಹ್ನ 11 ಗಂಟೆಗೆ ಕನ್ನಿಕಾಪೂಜೆ, ರಾತ್ರಿ 6.30ಕ್ಕೆ ರಾತ್ರಿ ಪೂಜೆ, 8 ಗಂಟೆಗೆ ದೀವಟಿಗೆ ಸೇವೆ, ರಾತ್ರಿ 8.30ರಿಂದ ಕಲ್ಪೋಕ್ತ ಪೂಜೆ, ಕನ್ನಿಕಾಪೂಜೆ, ಪ್ರಸಾದ ವಿತರಣೆ, ಅ.12 ರಂದು ಮಹಾನವಮಿಯಂದು ‘ಚಂಡಿಕಾಯಾಗ’ ಮಹಾ ಅನ್ನಸಂತರ್ಪಣೆ ನಡೆಯಲಿದೆ.
ಪ್ರತೀ ದಿನ ಸಂಜೆ 5.30ರಿಂದ 6.15ರ ವರೆಗೆ ಪ್ರವಚನ, ನಂತರ ವಿವಿಧ ಸಾಂಸ್ಕೃತಿಕ, ನೃತ್ಯ ಕಲಾ ತಂಡಗಳಿಂದ ‘ಸಾಂಸ್ಕೃತಿಕ ವೈವಿಧ್ಯ’, ಸಂಗೀತ, ಭರತನಾಟ್ಯ, ಯಕ್ಷಗಾನ, ತಾಳಮದ್ದಲೆ, ಹರಿಕಥೆ ಇತ್ಯಾದಿ ಕಾರ್ಯಕ್ರಮಗಳು ಜರುಗಲಿವೆ ಎಂದು ಶ್ರೀ ಕ್ಷೇತ್ರದ ಪ್ರಕಟಣೆ ತಿಳಿಸಿದೆ.