ಸಂತೆಕಟ್ಟೆ ಶ್ರೀ ಮಾಸ್ತಿ ಅಮ್ಮ ದೇವಸ್ಥಾನಕ್ಕೆ ಶ್ರೀ ಸಾಯಿ ಈಶ್ವರ್ ಗುರೂಜಿ ಭೇಟಿ!
Thursday, September 26, 2024
ಉಡುಪಿ: ಇಲ್ಲಿನ ಶಂಕರಪುರದ ಶ್ರೀ ದ್ವಾರಕಾಮಾಯಿ ಸಾಯಿಬಾಬ ಮಂದಿರ(ಮಠ)ದ ಪೀಠಾಧೀಶ್ವರರಾದ ಶ್ರೀ ಸಾಯಿ ಈಶ್ವರ್ ಗುರೂಜಿಯವರ ಮಹಾ ಸಂಕಲ್ಪದಂತೆ 108 ದಿನ 108 ಕ್ಷೇತ್ರ ಪ್ರದಕ್ಷಿಣೆಯ 105ನೇ ದಿನದ ಪ್ರದಕ್ಷಿಣೆಗೆ ತಾ.26 ರಂದು ಸಂತೆಕಟ್ಟೆಯ ರಾ.ಹೆ.66 ಅಂಬಾಗಿಲು ಸಮೀಪದ ಪುತ್ತೂರು ಶ್ರೀ ಮಾಸ್ತಿ ಅಮ್ಮ ದೇವಸ್ಥಾನದ ಅರ್ಚಕ ದೇವರಾಜ್ ಭಟ್ ಅವರಿಗೆ ಧರ್ಮ, ರಾಷ್ಟ್ರ, ಯೋಧರು ಹಾಗೂ ಅವರ ಕುಟುಂಬದ ರಕ್ಷಣೆ, ಗೋರಕ್ಷಣೆ, ಸನಾತನ ಧರ್ಮ ರಕ್ಷಣೆ ಮತ್ತು ಹಿಂದೂಗಳು ಮತಾಂತರವಾಗುವುದನ್ನು ತಡೆಯುವ ನಿಟ್ಟಿನಲ್ಲಿ ಶ್ರೀ ದೇವಳದಲ್ಲಿ ನಿತ್ಯ ಪೂಜೆಯ ಬಳಿಕ ವಿಶೇಷ ಪ್ರಾರ್ಥನೆ ಮಾಡುವಂತೆ ಮನವಿ ಸಲ್ಲಿಸಿ,"ಬಿಲ್ವಪತ್ರೆಯ ಗಿಡವನ್ನು" ನೀಡಿ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಶ್ರೀ ಮಠದ ಟ್ರಸ್ಟಿ ಗೀತಾಂಜಲಿ ಎಮ್. ಸುವರ್ಣ, ಶಶಾಂಕ್, ಪೂಜಾ ಜನಾರ್ಧನ್ ಶೇಟ್, ಜ್ಯೋತಿ ಗಾಂವಸ್ಕರ್, ತುಳಸಿ, ಮಮತಾ, ನಮೃತಾ ಗಾಂವಸ್ಕರ್, ಗಣಪತಿ ನಾಯಕ್, ಹಾಗೂ ಶ್ರೀ ಮಾಸ್ತಿ ಅಮ್ಮ ದೇವಸ್ಥಾನದ ಗಾಂವಸ್ಕರ್ ಕುಟುಂಬಸ್ಥರು ಉಪಸ್ಥಿತರಿದ್ದರು.




