ಆನ್‌ಲೈನ್ ಟ್ರೇಡಿಂಗ್ ವಂಚನೆ: ಆರೋಪಿ ಬಂಧನ
Sunday, September 8, 2024
ಉಡುಪಿ: ಉಪೇಂದ್ರ ಅಂಬಲಪಾಡಿ ಎಂಬವರಿಗೆ ಆನ್‌ಲೈನ್ ಟ್ರೇಡಿಂಗ್ ಮೂಲಕ ವಂಚಿಸಿದ್ದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕೇರಳದಲ್ಲಿ ಪತ್ತೆಮಾಡಿ, ಆತನಿಂದ 80 ಸಾವಿರ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಬಂಧಿತನನ್ನು ಅಜ್ಮಲ್ ಸುಹೈಲ್ ಸಿ (19) ಎಂದು ಗುರುತಿಸಲಾಗಿದೆ.
ಉಪೇಂದ್ರ ಅವರಿಗೆ ಅಪರಿಚಿತ ವ್ಯಕ್ತಿಗಳು ಕರೆ ಮಾಡಿ ಮೋತಿಲಾಲ್ ಒಸ್ವಾಲ್ ಪ್ರೈವೇಟ್ ಲಿಮಿಟೆಡ್ ಮ್ಯಾನೇಜ್‌ಮೆಂಟ್ ಗ್ರೂಪ್‌ಗೆ ವಾಟ್ಸಾಪ್‌ನಲ್ಲಿ ಸೇರಿಸಿ ಮೊಬೈಲ್ ಸಂಖ್ಯೆ 7842874635 ಮತ್ತು 6391854496 ಮೂಲಕ ಕರೆ ಮಾಡಿ 33.10 ಲಕ್ಷ ಹಣ ಠೇವಣಿ ಮಾಡಿಕೊಂಡಿದ್ದರು. ಉಪೇಂದ್ರ ಅವರಿಗೆ ಹೂಡಿಕೆ ಹಣ ಮತ್ತು ಲಾಭಾಂಶ ನೀಡದೇ ಮೋಸ ಮಾಡಿದ್ದರು.
ಈ ಬಗ್ಗೆ ಸೆನ್ ಠಾಣೆಗೆ ದೂರು ನೀಡಿದ್ದು, ಪ್ರಕರಣದಲ್ಲಿ 4 ಮಂದಿ ಆರೋಪಿಗಳನ್ನು ಬಂಧಿಸಿ 13 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ.
ತನಿಖೆ ಮುಂದುವರಿಸಿ ತಲೆಮರೆಸಿಕೊಂಡಿದ್ದ ಆರೋಪಿ ಅಜ್ಮಲ್ ಸುಹೈಲ್ ಸಿ (19) ಎಂಬಾತನನ್ನು ಕೋಝಿಕ್ಕೋಡ್‌ನಲ್ಲಿ ಬಂಧಿಸಿ ಆತನಿಂದ 80 ಸಾವಿರ ರೂ. ಸ್ವಾಧೀನಪಡಿಸಿಕೊಳ್ಳಲಾಗಿದೆ.