ಕೇಸುಗಳನ್ನು ದಾಖಲಿಸಿ ಹಿಂದೂಗಳ ದಮನ: ಡಾ. ಪ್ರಭಾಕರ ಭಟ್ ಆಕ್ರೋಶ

ಕೇಸುಗಳನ್ನು ದಾಖಲಿಸಿ ಹಿಂದೂಗಳ ದಮನ: ಡಾ. ಪ್ರಭಾಕರ ಭಟ್ ಆಕ್ರೋಶ


ಬಂಟ್ವಾಳ: ಕರ್ನಾಟಕದಲ್ಲಿ ಇತ್ತೀಚಿಗಿನ ದಿನಗಳಲ್ಲಿ ಹಿಂದೂ ಸಮಾಜದ ಮೇಲೆ ನಿರಂತರವಾಗಿ ದಾಳಿ ನಡೆಯುತ್ತಿದ್ದು, ವಿನಾಃ ಕಾರಣ ಹಿಂದೂಗಳ ಮೇಲೆ ಕೇಸುಗಳನ್ನು ದಾಖಲಿಸುವ ಮೂಲಕ ದಮನಿಸುವ ಕೆಲಸ ನಡೆಯುತ್ತಿದೆ. ಇದರ ವಿರುದ್ಧ ಸೆಟೆದು ನಿಲ್ಲುವ ಅನಿವಾರ್ಯತೆ ಇದೆ ಎಂದು ಆರ್‌ಎಸ್‌ಎಸ್ ಪ್ರಮುಖ ಡಾ. ಪ್ರಭಾಕರ ಭಟ್ ಕಲ್ಲಡ್ಕ ಆಕ್ರೋಶ ವ್ಯಕ್ತಪಡಿಸಿದರು.

ಕೊಡ್ಮಣ್ ಶ್ರೀ ಶಾರದಾ ಪೂಜಾಸೇವಾ ವೇದಿಕೆ ಆಶ್ರಯದಲ್ಲಿ ನಡೆದ 36ನೇ ವರ್ಷದ ಶ್ರೀ ಶಾರದಾ ಪೂಜಾ ಮಹೋತ್ಸವದ ಪ್ರಯುಕ್ತ ನಡೆದ ಧಾರ್ಮಿಕ ಸಭಾಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಕ್ತಿ ಆರಾಧನೆಯಿಂದ ಜಗತ್ತಿನ ಉದ್ದಾರ ಸಾಧ್ಯ ಎಂದರು.

ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ವಿಶ್ವ ಹಿಂದು ಪರಿಷತ್ ಮಂಗಳೂರು ವಿಭಾಗ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ ಕೊಡಮಣ್ಣ ವಹಿಸಿದ್ದರು.

ಬೆಸೆಂಟ್ ಕಾಲೇಜು ಉಪನ್ಯಾಸಕರಾದ ರವಿಪ್ರಭಾ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರೌಢ ಶಾಲೆಯ ಸಹಶಿಕ್ಷಕಿ ಭಾರತಿ, ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕರಾದ ಪ್ರೇಮಾ, ಮೇರಮಜಲು ಪಂಚಾಯತ್ ಅಧ್ಯಕ್ಷ ಸತೀಶ್ ನಾಯ್ಕ್, ಉತ್ಸವ ಸಮಿತಿಯ ಅಧ್ಯಕ್ಷ ಪದ್ಮನಾಭ ಶೆಟ್ಟಿ ಕೊಟ್ಟಿಂಜ, ಕಾರ್ಯದರ್ಶಿ ವಿನೋದ್ ಕುಮಾರ್ ಕೊಡ್ಮಣ್ ಉಪಸ್ಥಿತರಿದ್ದರು.

ಇದೇ ವೇಳೆ ಪ್ರಾಥಮಿಕ ಶಾಲೆಯನಿಕಟ ಪೂರ್ವ ಮುಖ್ಯಶಿಕ್ಷಕಿಯಾದ ಭವಾನಿ ಶಂಕರಿ ಅವರ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.

ಶಿಕ್ಷಣದಲ್ಲಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಗೋಪಾಲಗೋವಿಂದ ತೋಟ ಸ್ವಾಗತಿಸಿದರು. ಅರುಣ್ ಕೊಟ್ಟಿಂಜ ಶೆಟ್ಟಿ ವಂದಿಸಿ, ಸಂತೋಷ್ ಶೆಟ್ಟಿ ಕೊಡ್ಮಾಣ್ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article