ಕ್ರೈಸ್ತರ ಯುವಜನೋತ್ಸವ ‘ಡಿವೈಸಿ-2024’

ಕ್ರೈಸ್ತರ ಯುವಜನೋತ್ಸವ ‘ಡಿವೈಸಿ-2024’


ಬೆಳ್ತಂಗಡಿ: ಭಾರತೀಯ ಕಥೋಲಿಕ ಯುವ ಸಂಚಾಲನ (ಐಟಿವೈಎಂ) ಮಂಗಳೂರು ಧರ್ಮಪ್ರಾಂತ್ಯವು ಐಟಿವೈಎಂ ಬೆಳ್ತಂಗಡಿ ವಲಯ ಮತ್ತು ಐಟಿವೈಎಂ ಬೆಳ್ತಂಗಡಿ ಘಟಕದ ಸಹಯೋಗದೊಂದಿಗೆ ಅ.10 ರಿಂದ 13 ರವರೆಗೆ ‘ಡಿವೈಸಿ-2024’ವನ್ನು ಕ್ರಿಸ್ತನ ಮಾರ್ಗದಲ್ಲಿ ನಡೆಯೋಣ ಮತ್ತು ಸೇವೆ ಮಾಡುವ ಸಮಾಜವನ್ನು ನಿರ್ಮಿಸೋಣ ಎಂಬ ಧ್ಯೇಯ ವಾಕ್ಯದೊಂದಿಗೆ ನಡೆಸಲಾಗುತ್ತಿದೆ.

ಡಿವೈಸಿ-2024ರ ಲಾಂಛನದ ಧ್ವಜಾರೋಹಣದೊಂದಿಗೆ ಸಭೀಕರನ್ನು ಉದ್ದೇಶಿಸಿ ಮಾತನಾಡಿ, ಬೆಳ್ತಂಗಡಿ ಹೋಲಿ ರಿಡಿಮರ್ ಶಾಲೆಯ ಪ್ರಾಂಶುಪಾಲ ಫಾ. ಕ್ಲಿಫ್‌ರ್ಡ್ ಅವರು, ಇಂದು 12 ವಲಯದ ಯುವಜನರು ತಂದ ಹೊರೆಕಾಣಿಕೆ ಸಂಕೇತವಾಗಿದೆ ಮಂಗಳೂರು ಧರ್ಮ ಪ್ರಾಂತ್ಯದ ಯುವಜನರ ಏಕತೆ ಮತ್ತು ಐಸಿವೈಮ್ ಸಂಘದ ಪರ ಪ್ರೀತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.

12 ವಲಯದ ಅಧ್ಯಕ್ಷರು ‘ಡಿವೈಸಿ-2024’ ಲಾಂಛನ ಧ್ವಜದ ಅಡಿಯಲ್ಲಿ ವೇದಿಕೆಗೆ ಮೆರವಣಿಗೆ ನಡೆಸಿದರು. 

ಡಿವೈಸಿ-2024 ಸಾಂಕೇತಿಕವಾಗಿ ಉದ್ಘಾಟಿಸಿದ ಮುಖ್ಯ ಅಥಿತಿ ನಿವೃತ್ತ ಜುಡಿಷಿಯಲ್ ನ್ಯಾಯವಾದಿ ವಿಜೇತ ಪಿಂಕಿ ಲೋಬೊ ಮಾತನಾಡಿ, ಯುವಜನರಲ್ಲಿ ತಾಳ್ಮೆ ಮತ್ತು ಸೃಜನಶೀಲತೆ ಬೇಕು ಅದು ಇಂದು ನಾನು ಐಸಿವೈಎಂ ಯುವಜನರಲ್ಲಿ ನೊಡುತ್ತಿದ್ದೇನೆ. ಇಂತಹ ದೊಡ್ಡ ಮಟ್ಟದ ಯುವಜನ ಸಮ್ಮೇಳನಕ್ಕೆ ಹಾಜರಿದ್ದ ಎಲ್ಲಾ ಯುವಜನರಿಗೆ ಹಾಗೂ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಬಿಷಪ್ ಡಾ. ಅಲೋಶಿಯಸ್ ಪಾವ್ಲ್ ಡಿ’ಸೋಜ ವಹಿಸಿ ಮಾತನಾಡಿ, ಯುವಜನರು ದೇಶದ ಭವಿಷ್ಯ. ಇಂದು ಯುವಜನರಲ್ಲಿ ಧ್ಯೇಯ ಉಳ್ಳ ಬದುಕು ಅತೀ ಮುಖ್ಯವಾಗಿದೆ. ಯುವಜನರು ತಮ್ಮ ಭವಿಷ್ಯದ ಕನಸನ್ನು ಕಾಣಬೇಕು. ನಮ್ಮ ನಾಡಲ್ಲೇ ಇದ್ದು ಅಲ್ಲೇ ಸಾಧಿಸಿ ಒಂದು ಹೆಸಾರಾಂತ ವ್ಯಕ್ತಿ ನಮ್ಮ ಸಮುದಾಯದ ವ್ಯಕ್ತಿ ಎಂದು ಹೇಳುವ ರೀತಿ ಮಾಡಬೇಕೆಂದು ಹೇಳಿದರು. 

ಕಾರ್ಯಕ್ರಮಕ್ಕೆ ಬೆಳ್ತಂಗಡಿ ವಲಯ ಮತ್ತು ಬೆಳ್ತಂಗಡಿ ಚರ್ಚ್ ಧರ್ಮಗುರು ಅ.ವಂ.ಫಾ. ವಾಲ್ಟಾರ್ ಡಿಮೆಲ್ಲೊ, ಐಸಿವೈಎಂ ಬೆಳ್ತಂಗಡಿ ವಲಯದ ನಿರ್ದೇಶಕ ವಂ.ಫಾ. ಪ್ರವೀಣ್ ಡಿಸೋಜ, ಬೆಳ್ತಂಗಡಿ ಹೋಲಿ ರಿಡೀಮರ್ ಶಾಲೆಯ ಪ್ರಾಂಶುಪಾಲ ಕ್ಲಿಫರ್ಡ್ ಪಿಂಟೋ, ಬೆಳ್ತಂಗಡಿ ಚರ್ಚ್ ಪಾಲನಾ ಪರಿಷದ್ ಉಪಾಧ್ಯಕ್ಷ ವಾಲ್ಟರ್ ಮೋನಿಸ್, ಬೆಳ್ತಂಗಡಿ ಚರ್ಚ್ ಪಾಲನಾ ಪರಿಷದ್‌ನ ಕಾರ್ಯದರ್ಶಿ ಗಿಲ್ಬರ್ಟ್ ಪಿಂಟೋ, ಐಸಿವೈಎಂ ಮಂಗಳೂರು ಧರ್ಮಪ್ರಾಂತ್ಯದ ನಿರ್ದೇಶಕ ವಂ.ಫಾ. ಅಶ್ವಿನ್ ಕಾರ್ಡೋಜಾ, ಐಸಿವೈಎಂ ಜಂಟಿ ಕಾರ್ಯದರ್ಶಿ ಹಾಗೂ ಬೆಳ್ತಂಗಡಿಯ ವಲಯದ ಪ್ರತಿನಿಧಿಯಾದ ಜೋಯ್ಸ್ಟನ್ ಡಿಸೋಜಾ, ಐಸಿವೈಎಂ ಬೆಳ್ತಂಗಡಿ ವಲಯದ ಅಧ್ಯಕ್ಷ  ಸುಪ್ರೀತ್ ಫೆರ್ನಾಂಡಿಸ್, ಐಸಿವೈಎಂ ಬೆಳ್ತಂಗಡಿ ವಲಯದ ಕಾರ್ಯದರ್ಶಿ ಮೊನಾಲ್ ರಸ್ಕ್ವಿನ್ಹಾ, ಐಸಿವೈಎಂ ಬೆಳ್ತಂಗಡಿ ಘಟಕದ ಅಧ್ಯಕ್ಷೆ ಅನ್ಸೆಲ್ಮಾ ಡಿಸೋಜಾ, ಮತ್ತು ಐಸಿವೈಎಂ ಬೆಳ್ತಂಗಡಿ ಘಟಕದ ಕಾರ್ಯದರ್ಶಿ ಅಜಯ್ ರೋಡ್ರಿಗಸ್, ಹಾಗೂ ಐಸಿವೈಎಮ್ ಮಂಗಳೂರು ಧರ್ಮಪ್ರಾಂತ್ಯದ ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.




Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article