ಮದ್ಯವರ್ಜನ ಶಿಬಿರದಿಂದ ಬದುಕಿನ ಕತ್ತಲೆ ದೂರವಾಗಿದೆ: ಹರೀಶ್
Friday, October 4, 2024
ಬೆಳ್ತಂಗಡಿ: ’ಮದ್ಯವರ್ಜನ ಶಿಬಿರದಿಂದಾಗಿ ಅನೇಕರ ಬದುಕಿನ ಕತ್ತಲೆ ದೂರವಾಗಿದೆ. ಗಾಂಧೀಜಿಯವರ ತತ್ವಾದರ್ಶದಂತೆ ನಡೆದುಕೊಳ್ಳುತ್ತಿರುವ ಡಿ. ವೀರೇಂದ್ರ ಹೆಗ್ಗಡೆ ಅವರು ಮದ್ಯಮುಕ್ತ ಸಮಾಜದ ಕಲ್ಪನೆಗೆ ಒತ್ತು ಕೊಟ್ಟಿದ್ದಾರೆ’ ಎಂದು ಆರಿಕೋಡಿ ಚಾಮುಂಡೇಶ್ವರಿ ಕ್ಷೇತ್ರ ಧರ್ಮದರ್ಶಿ ಹರೀಶ್ ಹೇಳಿದರು. ಬುಧವಾರ ಬೆಳ್ತಂಗಡಿ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ಬುಧವಾರ ನಡೆದ ಗಾಂಧಿಸ್ಮೃತಿ ಮತ್ತು ನವಜೀವನ ಸಮಿತಿ ಸದಸ್ಯರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಕೆ.ಎಂ.ಅಬೂಬಕರ್ ಸಿದ್ದಿಕ್ ಮೋಂಟುಗೋಳಿ ಮಾತನಾಡಿದರು. ಬೆಳ್ತಂಗಡಿ ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಫಾ. ಕ್ಲಿಫರ್ಡ್ ಪಿಂಟೊ ಸಂದೇಶ ನೀಡಿದರು.
ವಿಧಾನ ಪರಿಷತ್ ಸದಸ್ಯ ಕೆ.ಪ್ರತಾಪಸಿಂಹ ನಾಯಕ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸ್ಥಾಪಕ ಅಧ್ಯಕ್ಷ ಕೆ.ವಸಂತ ಸಾಲ್ಯಾನ್, ಜಿಲ್ಲಾ ಘಟಕದ ಅಧ್ಯಕ್ಷ ಪದ್ಮನಾಭ ಶೆಟ್ಟಿ, ವಸಂತ ಸಾಲ್ಯಾನ್, ಸೀತಾರಾಮ ಆರ್., ಸದಾನಂದ ಬಂಗೇರ, ಶ್ರೀಧರ್, ಸತೀಶ್ ಶೆಟ್ಟಿ, ನಾಮದೇವ ರಾವ್, ಪುಷ್ಪಾ ಆರ್ ಶೆಟ್ಟಿ, ಮೋಹನ್ ಗೌಡ, ಚಂದ್ರಶೇಖರ, ಪುರುಷೋತ್ತಮ, ವಸಂತ ಸುವರ್ಣ, ರಾಜೇಶ್ ಎಂ.ಕೆ, ರಾಜೇಂದ್ರ ಇಂದ್ರ, ಮೋಹನ್ ಅಂಡಿಂಜೆ, ಪ್ರಫುಲ್ಲಚಂದ್ರ, ಪ್ರಭಾಕರ ಗೌಡ ಪೊಸೊಂದೋಡಿ, ಪದ್ಮನಾಭ ಸಾಲಿಯಾನ್, ನಿತ್ಯಾನಂದ ನಾವರ, ನಾರಾಯಣ ಸಾಲ್ಯಾನ್, ಹರೀಶ್ ಸಾಲ್ಯಾನ್, ನೇಮಿರಾಜ್ ಸೀಮಿತ, ಜಯವಂತ ಪಟಗಾರ ಇದ್ದರು.