ಅ.2ರಿಂದ 5‌ ರವರೆಗೆ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಯುವಜನೋತ್ಸವ `ಅಡ್ರಿನಾಲಿನ್'

ಅ.2ರಿಂದ 5‌ ರವರೆಗೆ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಯುವಜನೋತ್ಸವ `ಅಡ್ರಿನಾಲಿನ್'

ಮಂಗಳೂರು: ನಗರದ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಯುವಜನೋತ್ಸವ `ಅಡ್ರಿನಾಲಿನ್' ಅಕ್ಟೋಬರ್ 2 ರಿಂದ 5 ತನಕ ಕಾಲೇಜು ಮೈದಾನದಲ್ಲಿ ನಡೆಯಲಿದ್ದು, ವೈದ್ಯಕೀಯ, ಇಂಜಿನಿಯರಿಂಗ್, ಕಾನೂನು ಹಾಗೂ ಇತರ ಪದವಿ ಕೋರ್ಸ್ ವಿದ್ಯಾರ್ಥಿಗಳಿಗೆ ಮುಕ್ತ ಅವಕಾಶ ಒದಗಿಸಲಾಗಿದೆ ಎಂದು ಕಾಲೇಜಿನ ಡೀನ್ ಡಾ.ಆಂಟೊನಿ ಸಿಲ್ವನ್ ಹೇಳಿದರು.  
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಹಿತ್ಯ, ಸಾಂಸ್ಕೃತಿಕ, ಕ್ರೀಡೆ, ಕಲೆ ಮುಂತಾದ ಸುಮಾರು 40 ವಿಭಾಗಗಳಲ್ಲಿ ಆಕರ್ಷಕ ಸ್ಪರ್ಧೆಗಳು ನಡೆಯಲಿದ್ದು, ಐದು ಲಕ್ಷ ರೂ ಬಹುಮಾನವಿದೆ. ಈಗಾಗಲೇ 50 ಕ್ಕೂ ಅಧಿಕ ಕಾಲೇಜುಗಳು ಸ್ಪರ್ಧೆಗೆ ಹೆಸರು ನೋಂದಣಿ ಮಾಡಿಕೊಂಡಿವೆ ಎಂದರು.
ಮಾಸ್ಟರ್ ಚೆಫ್ ಇಂಡಿಯಾ ವಿಜೇತ ಮೊಹ್ದ್ ಅಶಿಕ್ ಅವರಿಂದ ಅಡುಗೆ ಕಾರ್ಯಾಗಾರ, ಪ್ರೀತಮ್ ಅವರಿಂದ ಸೆಲ್ ಡಿಫೆನ್ಸ್ ಕಾರ್ಯಾಗಾರ ನಡೆಯಲಿದೆ. ಕರಣ್ (ಡಿಜಿಟಲ್ ಆರ್ಟ್), ರ‍್ಯಾನ್ ಡಿಸೋಜ (ಫೋಟೋಗ್ರಫಿ), ಸುಮಂತ್ (ನೃತ್ಯ), ಪ್ರಜ್ಞಾ ಶೆಟ್ಟಿ (ಮೇಕಪ್), ಹಿಲ್ಡಾ ಫೆರ್ನಾಂಡಿಸ್ (ಸಾರೀ ಡ್ರಾಪಿಂಗ್) ಬೀನಾ ಆಂಟೊನಿ (ಬೋಟಲ್ ಆರ್ಟ್) ವಿವಿಧ ಕಾರ್ಯಾಗಾರಗಳನ್ನು ನಡೆಸಿಕೊಡುವರು ಎಂದು ಅವರು ವಿವರಿಸಿದರು.
ಖ್ಯಾತ ಗಾಯಕ ರಘು ದೀಕ್ಷಿತ್ `ಫೋಕ್- ರಾಕ್' ವಿಭಿನ್ನ ರೀತಿಯ ಸಂಗೀತ ಕಾರ್ಯಕ್ರಮ ಅಕ್ಟೋಬರ್ 4 ರಂದು ಸಂಜೆ 6 ಕ್ಕೆ ನಡೆಯಲಿದೆ ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಲಹೆಗಾರ ಡಾ.ಲೆನೊನ್ ಡಿಸೋಜ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿ ವಂಶಿಕಾ, ಡಾ.ವಿಲ್ಬರ್ ಕುಟಿನ್ಹಾ, ಗಗನದೀಪ್, ಪ್ರಿನ್‌ಸ್ಟನ್ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article