ಮಂಗಳೂರಿನಲ್ಲಿ ಅದ್ದೂರಿಯಾಗಿ ನಡೆಯುತ್ತದೆ ಶಾರದಾ ದೇವಿಯೊಂದಿಗೆ ದಸರಾ

ಮಂಗಳೂರಿನಲ್ಲಿ ಅದ್ದೂರಿಯಾಗಿ ನಡೆಯುತ್ತದೆ ಶಾರದಾ ದೇವಿಯೊಂದಿಗೆ ದಸರಾ


ನವರಾತ್ರಿ ಹಬ್ಬದ ಪ್ರಮುಖ ಚರಣೆಯೆಂದರೆ ಅದುವೇ ದಸರಾ ಹಬ್ಬ. ಮೈಸೂರಿನಲ್ಲಿ ವಿಶ್ವಪ್ರಸಿದ್ಧ ಜಂಬೂಸವಾರಿಯೊಂದಿಗೆ ದಸರಾ ಹಬ್ಬವನ್ನು ಆಚರಿಸಿದರೆ, ಮಂಗಳೂರಿನಲ್ಲಿ ಶಾರದಾ ದೇವಿಯ ವಿಗ್ರಹದೊಂದಿಗೆ ದಸರಾ ಹಬ್ಬವನ್ನು ಆಚರಿಸಲಾಗುತ್ತದೆ.

ದಸರಾ ಎಂದಾಕ್ಷಣ ನಮಗೆ ಮೊದಲು ನೆನಪಿಗೆ ಬರುವುದು ವಿಶ್ವಪ್ರಸಿದ್ಧ ಮೈಸೂರು ದಸರಾ. ಆದರೆ ಕರ್ನಾಟಕದಲ್ಲಿ ದಸರಾ ಆಚರಣೆ ಕೇವಲ ಮೈಸೂರಿಗೆ ಸೀಮಿತವಾಗದೇ, ರಾಜ್ಯಾಧ್ಯಂತ ಆಚರಿಸಲಾಗುತ್ತದೆ. ಮೈಸೂರಿನ ನಂತರ ದಸರಾ ಆಚರಣೆಗೆ ಹೆಸರಾದ ಸ್ಥಳವಿದ್ದರೆ ಅದು ಮಂಗಳೂರು ಮಾತ್ರ.

ಕರ್ನಾಟಕದ ಕರಾವಳಿ ಭಾಗವಿರುವ ಮಂಗಳೂರು ದಸರಾವನ್ನು ತನ್ನದೇ ಆದ ವಿಶಿಷ್ಟ ರೀತಿಯಲ್ಲಿ ಆಚರಿಸುತ್ತದೆ. ಪ್ರತೀ ವರ್ಷದಂತೆ ಈ ಬಾರಿಯೂ ಮಂಗಳೂರು ದಸರಾ ಹಬ್ಬವನ್ನು ಅದ್ದೂರಿಯಿಂದ ಆಚರಿಸಲು ಸಿದ್ಧಗೊಂಡಿದೆ.

ಮಂಗಳೂರು ದಸರಾವು ಮಂಗಳೂರುನಗರದಲ್ಲಿ ಆಚರಿಸಲಾಗುವ ವಿಶಿಷ್ಟ ಆಚರಣೆಯಲ್ಲಿ ಒಂದಾಗಿದೆ. ಪ್ರತೀ ಬಾರಿ ಇಲ್ಲಿ ನವರಾತ್ರಿಹಬ್ಬವನ್ನು ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ 10 ದಿನಗಳ ಕಾಲ ಆಚರಿಸಲಾಗುತ್ತದೆ. ಈ ದೇವಳದಲ್ಲಿ ನವರಾತ್ರಿಯನ್ನು ಹೊರತುಪಡಿಸಿ ಶಿವರಾತ್ರಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ.

ನವರಾತ್ರಿಯ ಅಂಗವಾಗಿ ಮಂಗಳೂರು ನಗರವು, ಮನೆಗಳು, ಅಂಗಡಿಗಳು ಮತ್ತು ಹೋಟೆಲ್‌ಗಳಿಂದ ಅತ್ಯುತ್ತಮವಾಗಿ ಅಲಂಕರಿಸಲ್ಪಟ್ಟಿರುವುದನ್ನು ನೋಡಬಹುದು. ಮಂಗಳೂರಿನ ದಸರಾ ಹಬ್ಬದ ಪ್ರಮುಖ ಆಕರ್ಷಣೆಗಳೆಂದರೆ ಹುಲಿ ನೃತ್ಯ, ಸಿಂಹ ನೃತ್ಯ ಮತ್ತು ಕರಡಿ ನೃತ್ಯ ತುಳುವಿನಲ್ಲಿ ಪಿಲಿ ವೇಷ ಅಥವಾ ಕನ್ನಡದಲ್ಲಿ ಹುಲಿ ವೇಷ ಎಂದು ಕರೆಯಲ್ಪಡುವ ರಾಯಲ್ ಟೈಗರ್ ನೃತ್ಯವು ಕರಾವಳಿ ಕರ್ನಾಟಕದಲ್ಲಿ ಪ್ರಸಿದ್ಧವಾದ ಜಾನಪದ ನೃತ್ಯವಾಗಿದೆ.

ಶಾರದಾ ದೇವಿಯನ್ನು ಗೌರವಿಸುವುದೇ ಹುಲಿವೇಷದ ಮಹತ್ವ. ಮಂಗಳುರಿನಲ್ಲಿ ದಸರಾ ಮೂರ್ತಿಗಳಿಗೆ ತನ್ನದೇ ಆದ ಮಹತ್ವವಿದೆ. ಮಹಾಗಣಪತಿ ಮತ್ತು ನವದುರ್ಗೆಯರ ಜೊತೆಗೆ ಪ್ರತಿಷ್ಠಾಪಿಸಲಾದ ಶಾರದಾ ದೇವಿಯ ವಿವಿಧ ವಿಗ್ರಹಗಳನ್ನು ನಾವಿಲ್ಲಿ ದಸರಾ ಸಂದರ್ಭದಲ್ಲಿ ನೋಡಬಹುದು.

ಮಂಗಳೂರಿನ ಪ್ರಾಥಮಿಕ ದಸರಾ ವಿಗ್ರಹಗಳಲ್ಲಿ ಶಾರದಾ ದೇವಿ, ಮಹಾಗಣಪತಿ, ಆದಿಶಕ್ತ ಮತ್ತು ನವದುರ್ಗೆಯರು (ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಾಯಿನಿ, ಸ್ಕಂದಮಾತಾ, ಕಾತ್ಯಾಯನಿ, ಕಾಳರಾತ್ರಿ, ಮಹಾಗೌರಿ ಮತ್ತು ಸಿದ್ಧಿದಾತ್ರಿ).

ಮಂಗಳೂರು ದಸರಾದ ಮತ್ತೊಂದು ಪ್ರಮುಖ ಆಕರ್ಷಣೆ ಕುದ್ರೋಳಿ ದೇವಸ್ಥಾನದ ಗಂಗಾವತ್ರಾಣ. ದೇವಲಯದ ಟ್ರಸ್ಟ್ ನವರಾತ್ರಿಯ 9 ದಿನಗಳಲ್ಲಿ ಗಂಗಾವತ್ರಾಣವನ್ನು ಆಯೋಜಿಸುತ್ತದೆ.  ಈ ಕಾರಣಕ್ಕೆ 13 ಅಡಿ ಎತ್ತರದ ನಾಲ್ಕು ವರ್ಣರಂಜಿತ ಶಿವನ ವಿಗ್ರಹಗಳು ತನ್ನ ಜಟೆಯಿಂದ 100 ಅಡಿ ಎತ್ತರಕ್ಕೆ ನೀರನ್ನು ಹಾರಿಸುವುದನ್ನು ನೋಡಬಹುದು. 

ಸೌಂದರ್ಯವೆಂದರೆ ನಾಲ್ಕು ಕಡೆಯಿಂದ ನೀರು ತನ್ನ ಶಖರವನ್ನು ತಲುಪುತ್ತಿದ್ದಂತೆ ಅವು ಶಿವಲಿಂಗದ ಆಕಾರವನ್ನು ಪಡೆಯುತ್ತದೆ. ಇದೊಂದು ಭವ್ಯವಾದ ದೃಶ್ಯವಾಗಿದೆ. ಇದು ವಿಜಯದಶಮಿಯ ಸಂಜೆ ಗೋಕರ್ಣನಾಥೇಶ್ವರ ದೇವಸ್ಥಾನದಿಂದ ಪ್ರಾರಂಭವಾಗಿ ಮರುದಿನ ಮುಂಜಾನೆ ದೇವಾಲಯದ ಸಂಕೀರ್ಣದಲ್ಲಿರುವ ಪುಷ್ಕರ್ಣಿ ಕೊಳದಲ್ಲಿ ವಿಗ್ರಹಗಳ ನಿಮಜ್ಜನದೊಂದಿಗೆ ಕೊನೆಗೊಳ್ಳುತ್ತದೆ. 

ಮೆರವಣಿಗೆಯಲ್ಲಿ ನವದುರ್ಗೆಯರು, ಮಹಾಗಣಪತಿ, ಶಾದರಾ ದೇವಿಯ ಮೂರ್ತಿಗಳನ್ನು ವಾದ್ಯಮೇಳಗಳು ಚಂಡೆ, ಜಾಆನಪಾದ ಕುಣಿತಗಳು, ಯಕ್ಷಗಾನ ಪಾತ್ರಧಾರಿಗಳು, ಹುಲಿವೇಷ, ಡೊಳ್ಳು ಕುಣಿತ, ಗೊಂಬೆಗಳ ಮೂಲಕ ಮೆರವಣಿಗೆ ಮಾಡಲಾಗುತ್ತದೆ. ಇದು ಕುದ್ರೋಳಿ, ಮಣ್ಣಗುಡ್ಡ, ಲೇಡಿಹಿಲ್, ಲಾಲ್‌ಬಾಗ್, ಕೆಎಸ್ ರಾವ್ ರಸ್ತೆ, ಹಂಪನಕಟ್ಟೆ, ಕಾರ್‌ಸ್ಟ್ರೀಟ್ ಮತ್ತು ಅಳಕೆಯನ್ನು ಒಳಗೊಂಡ ಮಂಗಳೂರು ನಗರದ ಪ್ರಮುಖ ರಸ್ತೆಗಳ ಮೂಲಕ ಹಾದುಹೋಗುತ್ತದೆ.


-ಶ್ರಾವ್ಯ.

ಪತ್ರಿಕೋದ್ಯಮ ವಿದ್ಯಾರ್ಥಿನಿ,

ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಥಬೀದಿ, ಮಂಗಳೂರು.



Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article