
ಬೀದಿ ನಾಟಕದ ಮೂಲಕ ಎನ್‌ಸಿಸಿ ನೇವಲ್ ಮತ್ತು ಎನ್‌ಸಿಸಿ ಆರ್ಮಿ ವಿಂಗ್‌ನ ಕೆಡೆಟ್‌ಗಳಿಂದ ಸ್ವಚ್ಛತಾ ಜಾಗೃತಿ
Wednesday, October 2, 2024
ಮಂಗಳೂರು: ಗಾಂಧಿ ಜಯಂತಿಯ ಸಂದರ್ಭದಲ್ಲಿ ಮಂಗಳೂರಿನ ಮಿನಿ ವಿಧಾನ ಸೌಧದ ಮುಂಭಾಗದಲ್ಲಿ “ಸ್ವಚ್ಛತಾ ಹೀ ಸೇವಾ” ಎಂಬ ವಿಷಯದ ಮೇಲೆ “ನುಕ್ಕಡ್ ನಾಟಕ್”-ಒಂದು ಬೀದಿ ನಾಟಕದ ಮೂಲಕ ಮಂಗಳೂರಿನ ಎನ್‌ಸಿಸಿ ನೇವಲ್ ಮತ್ತು ಎನ್‌ಸಿಸಿ ಆರ್ಮಿ ವಿಂಗ್‌ನ ಕೆಡೆಟ್‌ಗಳು ಜನರ ಮಧ್ಯೆ ಸ್ವಚ್ಛತೆಯ ಬಗ್ಗೆ ಜಾಗೃತಿಯನ್ನು ಮೂಡಿಸಿದರು.
ಕೆಡೆಟ್‌ಗಳು, Lt.Cdr., ANO NCC ನೇವಲ್ ವಿಂಗ್ ಡಾ. ಯತೀಶ್ ಕುಮಾರ್, ಹಾಗೂ ANO NCC ಆರ್ಮಿ ವಿಂಗ್ ಮೇಜರ್ ಡಾ. ಜಯರಾಜ್ ಎನ್. ಇವರ ಮಾರ್ಗದರ್ಶನದಲ್ಲಿ ಬೀದಿ ನಾಟಕ ಪ್ರದರ್ಶನ ನಡೆಯಿತು.