
ಕಾಂಗ್ರೆಸ್ ವತಿಯಿಂದ ಗಾಂಧಿ ಜಯಂತಿ ಆಚರಣೆ
ಮಂಗಳೂರು: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಜನ್ಮದಿನಾಚರಣೆ ಹಾಗೂ ಗಾಂಧೀಜಿ ಅಧ್ಯಕ್ಷತೆಯ ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕೆ ನೂರು ವರ್ಷಗಳ ಸಂಭ್ರಮದ ಕಾರ್ಯಕ್ರಮದ ಪ್ರಯುಕ್ತ ನಗರದ ಲಾಲ್‌ಭಾಗ್ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡುವುದರೊಂದಿಗೆ ಪಾದಯಾತ್ರೆಯ ಮೂಲಕ ಅಲ್ಲಿಂದ ಮಣ್ಣಗುಡ್ಡೆ ಗಾಂಧಿ ಪಾರ್ಕ್ ವರೆಗೆ ಪಾದಯಾತ್ರೆಯಲ್ಲಿ ಬಂದು ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಜೆ.ಆರ್. ಲೋಬೊ ಮಾತನಾಡಿ, ಗಾಂಧೀಜಿ ಕೇವಲ ಭಾರತಕ್ಕೆ ಮಾತ್ರವಲ್ಲದೆ ವಿಶ್ವಕ್ಕೆ ನಾಯಕರಾಗಿದ್ದರು. ಅವರು ಸತ್ಯ, ಅಹಿಂಸಾ, ಶಾಂತಿಯ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದರು. ಅವರ ಧೈರ್ಯ, ನಾಯಕತ್ವ, ವ್ಯಕ್ತಿತ್ವ ಮತ್ತು ಸರಳತೆ ಜಗತ್ತಿಗೆ ಮಾದರಿ. ಆದ್ದರಿಂದಲೇ ಅವರನ್ನು ರಾಷ್ಟ್ರಪಿತ ಎಂದೇ ಕರೆಯಲಾಯಿತು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ, ಬ್ಲಾಕ್ ಅಧ್ಯಕ್ಷರಾದ ಪ್ರಕಾಶ್ ಸಾಲ್ಯಾನ್, ಅಬ್ದುಲ್ ಸಲಿಂ ಮಾತನಾಡಿದರು.
ಕಾರ್ಪೋರೇಟರ್‌ಗಳಾದ ಶಶಿಧರ್ ಹೆಗ್ಡೆ, ಲ್ಯಾನ್ಸಿ ಲಾಟ್ ಪಿಂಟೋ, ಅಬ್ದುಲ್ ರವೂಫ್, ಭಾಸ್ಕರ್ ಮೊಯಿಲಿ, ಪ್ರವೀಣ್ ಆಳ್ವ, ವಿನಯರಾಜ್, ಚೇತನ್ ಕುಮಾರ್, ಹೇಮಂತ್ ಗರೋಡಿ, ಪಕ್ಷದ ಪ್ರಮುಖರಾದ ವಿಶ್ವಾಸ್ ದಾಸ್, ಕೆ. ಅಶ್ರಫ್, ಶುಭೋದಯ ಆಳ್ವ, ಅಪ್ಪಿ, ಹೊನ್ನಯ್ಯ, ಟಿ.ಕೆ. ಸುಧೀರ್, ಅಶೋಕ್ ಕುಮಾರ್ ಡಿ.ಕೆ., ಜಯರಾಜ್, ವಿಕಾಸ್ ಶೆಟ್ಟಿ, ಯೋಗೇಶ್ ಕುಮಾರ್, ಗೀತಾ ಅತ್ತಾವರ, ಚಂದ್ರಕಲಾ ಜೋಗಿ, ಶಾಂತಲಾ ಗಟ್ಟಿ, ರೂಪಾ ಚೇತನ್, ಸಾರಿಕಾ ಪೂಜಾರಿ, ಚಂದ್ರಕಲಾ ರಾವ್, ರಾಕೇಶ್ ದೇವಾಡಿಗ, ಪದ್ಮನಾಭ ಅಮೀನ್, ವಾಹಾಬ್ ಕುದ್ರೋಳಿ, ಜಿತೇಂದ್ರ ಸುವರ್ಣ, ಹೈದರ್ ಆಲಿ, ಒಸ್ವಾಲ್ಡ್ ಫುರ್ತಾದೋ, ಮಂಜುಳಾ ನಾಯಕ್, ಶೈಲಜಾ, ವಿದ್ಯಾ, ನೀತಾ ಡಿಸೋಜಾ, ಪ್ರೇಮ್ ಬಲ್ಲಾಳ್ ಭಾಗ್, ವಿಕ್ಟೋರಿಯಾ, ನಾನ್ಸಿ ಡಿ’ಸೋಜಾ, ಸುನಿಲ್ ಬಜಿಲಕೇರಿ, ಟಿ.ಸಿ. ಗಣೇಶ್, ಉದಯ್ ಕುಂದರ್, ಜಾರ್ಜ್ ಮತ್ತಿತರರು ಉಪಸ್ಥಿತರಿದ್ದರು.