ಯತ್ನಾಳ್ ಹೇಳಿಕೆಯಿಂದ ಮುಜುಗರ ಆಗಿರುವುದು ಸತ್ಯ: ದೊಡ್ಡನಗೌಡ

ಯತ್ನಾಳ್ ಹೇಳಿಕೆಯಿಂದ ಮುಜುಗರ ಆಗಿರುವುದು ಸತ್ಯ: ದೊಡ್ಡನಗೌಡ


ಮಂಗಳೂರು: ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿಕೆಯಿಂದ ಬಿಜೆಪಿ ಪಕ್ಷಕ್ಕೆ ಮುಜುಗರ ಆಗಿರುವುದು ಸತ್ಯ ಎಂದು ವಿಧಾನಸಭೆಯ ವಿರೋಧ ಪಕ್ಷದ ಮುಖ್ಯಸಚೇತಕ ದೊಡ್ಡನಗೌಡ ಪಾಟೀಲ್‌ ಹೇಳಿದರು.

ನಮ್ಮ ಹೈಕಮಾಂಡ್ ನಾಯಕರು ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ. ಯತ್ನಾಳರ ವಿರುದ್ಧ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳುತ್ತಾರೆ. ಈ ಬಗ್ಗೆ ಚರ್ಚೆಗಳು ನಡೆಯುತ್ತವೆ. ಯತ್ನಾಳ ವಿರುದ್ಧ ಕ್ರಮ ವಹಿಸುವಾಗ ಸಂತೋಷಜೀ ಮಧ್ಯ ಬರುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ಬಿಎಸ್.ವೈ ವಿರುದ್ಧದ ಹೇಳಿಕೆ ನೀಡುವ ಯತ್ನಾಳರ ನಡೆಯ ವಿರುದ್ಧ ಕಿಡಿಕಾರಿದರು.

ಯತ್ನಾಳ್ ಮತ್ತು ರಮೇಶ ಜಾರಕಿಹೊಳಿಯವರು ಕೂಡಾ ಪಕ್ಷದ ಬಲವರ್ಧನೆಗಾಗಿಯೇ ಅವರು ಪಾದಯಾತ್ರೆ ಮಾಡುತ್ತಿದ್ದಾರೆ. ಪಾದಯಾತ್ರೆಗೆ ಹೈಕಮಾಂಡ್ ಅನುಮತಿ ಕೊಟ್ಟಿಲ್ಲ. ಹೈಕಮಾಂಡ್ ಒಪ್ಪಿದರೆ ಪಾದಯಾತ್ರೆ ಮಾಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕೂಡಾ ಸ್ಪಷ್ಟಪಡಿಸಿದ್ದಾರೆ ಎಂದರು‌.

ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಡಾ. ಬಸವರಾಜ ಕ್ಯಾವಟರ್, ಜಿಲ್ಲಾ ವಕ್ತಾರ ಸೋಮಶೇಖರ್, ಮಾಧ್ಯಮ ಪ್ರತಿನಿಧಿ ಮಹೇಶ ಹಾದಿಮನಿ ಇದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article