ಬಿಜೆಪಿ ವತಿಯಿಂದ ಭಗಿನಿ ಸಮಾಜದಲ್ಲಿನ ಮಕ್ಕಳಿಗೆ ಸಿಹಿ ತಿಂಡಿ, ಪಾದರಕ್ಷೆ ವಿತರಣೆ

ಬಿಜೆಪಿ ವತಿಯಿಂದ ಭಗಿನಿ ಸಮಾಜದಲ್ಲಿನ ಮಕ್ಕಳಿಗೆ ಸಿಹಿ ತಿಂಡಿ, ಪಾದರಕ್ಷೆ ವಿತರಣೆ


ಮಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನ್ಮದಿನದ ಪ್ರಯುಕ್ತ ನಡೆಯುತ್ತಿರುವ ಸೇವಾ ಪಾಕ್ಷಿಕದ ಪ್ರಯುಕ್ತ ಭಾರತೀಯ ಜನತಾ ಪಾರ್ಟಿ ಮಂಗಳೂರು ನಗರದ ದಕ್ಷಿಣ ಪಶ್ಚಿಮ ಮಹಾ ಶಕ್ತಿ ಕೇಂದ್ರದ ವತಿಯಿಂದ ಜೆಪ್ಪು ಮಾರ್ಕೆಟ್ ಬಳಿ ಇರುವ ಭಗಿನಿ ಸಮಾಜದಲ್ಲಿನ ಮಕ್ಕಳಿಗೆ ಸಿಹಿ ತಿಂಡಿ ನೀಡಿ ನಂತರ ಪಾದರಕ್ಷೆಗಳನ್ನು ವಿತರಿಸಲಾಯಿತು. 

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ಅವರು, ರಾಷ್ಟ್ರ ಸೇವೆಯಲ್ಲಿ ನಿರತರಾಗಿರುವ ಮಾನ್ಯ ಪ್ರಧಾನಿಗಳು ಜನ ಸೇವೆಯಲ್ಲೇ ಈಶ ಸೇವೆಯನ್ನು ಕಾಣುತ್ತಿರುವವರು. ಅವರ ಹೆಸರಿನಲ್ಲಿ ಇಂತಹ ಅರ್ಥಪೂರ್ಣ ಕಾರ್ಯಗಳ ಜೊತೆಗೆ ಇನ್ನೂ ಅನೇಕ ರೀತಿಯ ಸೇವಾ ಚಟುವಟಿಕೆಗಳು ನಿಮ್ಮೆಲ್ಲರ ಸಾಮೂಹಿಕ ಮುಂದಾಳುತ್ವದಲ್ಲಿ ನಡೆಯಲಿ ಎಂದು ಶಾಸಕರು ಹಾರೈಸಿದರು.

ಈ ಸಂದರ್ಭದಲ್ಲಿ ಉಪ ಮೇಯರ್ ಭಾನುಮತಿ, ರಮೇಶ್ ಕಂಡೆಟ್ಟು, ಲಲ್ಲೇಶ್ ಕುಮಾರ್, ಮೋಹನ್ ಪೂಜಾರಿ, ರೇವತಿ ಶಾಮ ಸುಂದರ್, ದಿವಾಕರ್ ಪಾಂಡೇಶ್ವರ್, ಶೈಲೇಶ್ ಶೆಟ್ಟಿ ಅತ್ತಾವರ, ಕಿಶೋರ್ ಕೊಟ್ಟಾರಿ, ಅಶ್ವಿತ್  ಕೊಟ್ಟಾರಿ, ದೀಪಕ್ ಪೈ, ಕಿರಣ್ ರೈ, ವಿನೋದ್ ಮೆಂಡನ್, ಅಜಯ್ ಕುಲಶೇಖರ, ರವಿಶಂಕರ್ ಮಿಜಾರ್, ರಘುವೀರ್ ಬಾಬುಗುಡ್ಡ, ಜಯಕುಮಾರ್, ಅಮಿತ್ ರಾಜ್, ಶಬರಿ ಶೆಟ್ಟಿ, ಸುರೇಶ್ ಪಾಂಡೇಶ್ವರ, ನಿತಿನ್ ಕಾಮತ್, ರಾಜೇಂದ್ರ ಕೆ, ಸೇರಿದಂತೆ ಹಲವು ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.





Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article