ಭಾಷೆ ಮೂಲಕ ಮಾನವೀಯ ಸಂಬಂಧ ಬೆಸೆಯಲು ಸಾಧ್ಯ: ಡಾ. ನಾಗಪ್ಪ ಗೌಡ

ಭಾಷೆ ಮೂಲಕ ಮಾನವೀಯ ಸಂಬಂಧ ಬೆಸೆಯಲು ಸಾಧ್ಯ: ಡಾ. ನಾಗಪ್ಪ ಗೌಡ


ಮಂಗಳೂರು: ಭಾಷೆಯು ಮನುಷ್ಯ ಸೃಷ್ಟಿ. ಸಾಹಿತ್ಯದ ಮೂಲಕ ಮಾನವೀಯ ಸಂಬಂಧಗಳನ್ನು ಬೆಸೆಯಲು ಸಾಧ್ಯವಾಗುತ್ತದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಡಾ. ನಾಗಪ್ಪ ಗೌಡ ಹೇಳಿದರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಬ್ಯಾರಿ ಅಧ್ಯಯನ ಪೀಠದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬ್ಯಾರಿ ಭಾಷಾ ದಿನಾಚರಣೆ ಕರ‍್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಮ್ಮ ಭಾಷೆಯನ್ನು ಇತರರಿಗೆ ಕಲಿಸುವ ಪ್ರಯತ್ನ ಮಾಡಬೇಕು. ಭಾಷೆಗೆ ಯಾವುದೇ ಜಾತಿ, ರ‍್ಮ ಬೇಧವಿಲ್ಲ. ಪ್ರಾಚೀನ ಕಾಲದಿಂದಲೂ ಅಸ್ಥಿತ್ವದಲ್ಲಿದ್ದು, ಇಂದಿಗೂ ಪ್ರಚಲಿತವಿರುವ ಭಾಷೆಗಳಲ್ಲಿ ಬ್ಯಾರಿ ಭಾಷೆ ಕೂಡ ಒಂದಾಗಿದೆ. ಅಂದಿನ ಕಾಲದಲ್ಲಿ ಕರಾವಳಿಯನ್ನು ಮಿನಿ ಭಾರತ ಎಂದೇ ಗುರುತಿಸಲಾಗುತ್ತಿತ್ತು ಎಂದು ಬಣ್ಣಿಸಿದರು.
ಬ್ಯಾರಿ ಭಾಷೆಯ ಮಾಸಿಕ ಪತ್ರಿಕೆ ಉಪಸಂಪಾದಕ ಮುಹಮ್ಮದ್ ಅಲಿ ಕಮ್ಮರಡಿ, ಮೊದಲು ನಾವು ಭಾಷೆ ಕಲಿತು ಇತರರಿಗೂ ಕಲಿಸಬೇಕು. ಆ ಮೂಲಕ ಭಾಷೆಯನ್ನು ಜೀವಂತವಾಗಿಟ್ಟುಕೊಳ್ಳಲು ಸಾಧ್ಯ. ಎಲ್ಲಾ ಭಾಷೆಗಳಂತೆ ಬ್ಯಾರಿ ಭಾಷೆ ಕೂಡ ಕಲಿಯಲು ಸುಲಭ ಸಾಧ್ಯ. ಭಾಷೆ ಎಲ್ಲರ ಸ್ಪತ್ತಾಗಿದೆ. ಸಮಾಜದಲ್ಲಿ ಬದುಕ ಬೇಕಾದರೆ ಎಲ್ಲಾ ಭಾಷೆಯ ಜ್ಞಾನ ಇರಬೇಕು ಎಂದು ಹೇಳಿದರು.
ಕರ‍್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ, ಮನುಷ್ಯನ ನಡುವೆ ಬಾಂಧವ್ಯ ಬೆಳೆಸುವ ನಿಟ್ಟಿನಲ್ಲಿ ಬ್ಯಾರಿ ಪೀಠ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು. 
ಪ್ರಾಸ್ಥಾವಿಕವಾಗಿ ಮಾತನಾಡಿದ ಬ್ಯಾರಿ ಅಧ್ಯಯನ ಪೀಠದ ಸಂಯೋಜಕ ಪ್ರೊ. ಅಬೂಬಕ್ಕರ್ ಸಿದ್ಧಿಕ್, ಸಾಂಸ್ಕೃತಿಕ ಶ್ರೀಮಂತಿಕೆಯಿಂದ ಕೂಡಿರುವ ಕರಾವಳಿಯಲ್ಲಿ ಉಗಮವಾಗಿರುವ ಬ್ಯಾರಿ ಭಾಷೆಗೆ 1,400 ಲಕ್ಷಗಳಷ್ಟು ಇತಿಹಾಸವಿದೆ ಎಂದು ಹೇಳಿದರು.
ಕರ‍್ಯಕ್ರಮದಲ್ಲಿ ರ‍್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಉಮ್ಮರ್‌ ಯು. ಎಚ್., ವಕೀಲ ಬಿ. ಎ. ಮಹಮ್ಮದ್‌ ಹನೀಫ್‌, ಬದ್ರಿಯಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಇಸ್ಮಾಯಿಲ್‌ ಎನ್‌., ಎನ್‌ಎಂಪಿಟಿಯ ನಿವೃತ್ತ ಉಪನರ‍್ದೇಶಕ ಖಾಲಿದ್‌ ತಣ್ಣೀರುಬಾವಿ, ಬ್ಯಾರಿ ವರ‍್ತೆ ಪತ್ರಿಕೆ ಸಂಪಾದಕ ಬಶೀರ್‌ ಬೈಕಂಪಾಡಿ ಉಪಸ್ಥಿತರಿದ್ದರು. 

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article