ಹಲ್ಲೆಗೈದ ಮರಳು ದಂಧೆಕೋರರ ಬಂಧಿಸದಿದ್ದರೆ ಪ್ರತಿಭಟನೆ: ಪೌಲ್ ರಾಲಿ ಡಿಕೋಸ್ಟ ಎಚ್ಚರಿಕೆ

ಹಲ್ಲೆಗೈದ ಮರಳು ದಂಧೆಕೋರರ ಬಂಧಿಸದಿದ್ದರೆ ಪ್ರತಿಭಟನೆ: ಪೌಲ್ ರಾಲಿ ಡಿಕೋಸ್ಟ ಎಚ್ಚರಿಕೆ


ಮಂಗಳೂರು: ಅಕ್ರಮ ಮರಳುಗಾರಿಕೆ ವಿರುದ್ಧ ಹೋರಾಟ ನಡೆಸುತ್ತಿರುವ ಕ್ಯಾಥೋಲಿಕ್ ಸಭಾ ಮಂಗಳೂರು ಪ್ರದೇಶ ಅಧ್ಯಕ್ಷ ಆಲ್ವಿನ್ ಜೆರೋಮ್ ಡಿಸೋಜ ಅವರ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳನ್ನು ಬಂಸದಿದ್ದರೆ ವಾಮಂಜೂರು ಗ್ರಾಮಾಂತರ ಪೊಲೀಸ್ ಠಾಣೆ, ಪೊಲೀಸ್ ಕಮೀಷನರ್ ಕಚೇರಿ, ಜಿಲ್ಲಾಕಾರಿ ಕಚೇರಿ ಮುಂಭಾಗ ತೀವ್ರ ರೂಪದಲ್ಲಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ಮಾಜಿ ಅಧ್ಯಕ್ಷ ಪೌಲ್ ರಾಲಿ ಡಿಕೋಸ್ಟ ಎಚ್ಚರಿಸಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ರಮ ಮರಳು ಮಾಫಿಯಾದಿಂದ ಉಳಿಯ ಪಾವೂರು, ರಾಣಿಪುರ, ಉಳ್ಳಾಲ ಹೊಯ್ಗೆ, 62ನೇ ತೋಕೂರು ಕೆಂಜಾರು ಪ್ರದೇಶಗಳ ದ್ವೀಪಗಳನ್ನು ಉಳಿಸುವಂತೆ ಕಳೆದ ಸೆಪ್ಟಂಬರ್ 27ರಂದು ಪ್ರತಿಭಟನೆ ನಡೆಸಿದ್ದೆವು. ಅಕ್ಟೋಬರ್ 5ರಂದು ಪತ್ರಕರ್ತೆಯೊಬ್ಬರ ಜತೆ ಆಲ್ವಿನ್ ಜೆರೋಮ್ ಸ್ಥಳಕ್ಕೆ ತೆರಳಿದ್ದಾಗ ದುಷ್ಕರ್ಮಿಗಳು ಬೆದರಿಕೆಯೊಡ್ಡಿ ಹಲ್ಲೆ ನಡೆಸಿದ್ದಾರೆ ಎಂದು ಅವರು ಆರೋಪಿಸಿದರು.

ಕೇವಲ ಒಬ್ಬರ ವಿರುದ್ಧ ದೂರು ದಾಖಲಿಸಲಾಗಿದೆ. ಆರೋಪಿಯನ್ನು ಬಂಸಿಲ್ಲ. ಬೈದು, ಬೆದರಿಕೆ ಹಾಕಿದ ಇತರ ಐದು ಮಂದಿ ವಿರುದ್ಧವೂ ಕೇಸು ದಾಖಲಿಸಬೇಕು. ಶಾಶ್ವತವಾಗಿ ಮರಳುಗಾರಿಕೆ ಸ್ಥಗಿತಗೊಳಿಸಿ, ದ್ವೀಪಗಳನ್ನು ಉಳಿಸಬೇಕು ಎಂದು ಅವರು ಆಗ್ರಹಿಸಿದರು.

ಹೋರಾಟಗಾರ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ರಾತ್ರಿ- ಹಗಲು ರಾಜಾರೋಷವಾಗಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದರೂ, ಸರಕಾರ, ಶಾಸಕರು ಮತ್ತು ಅಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಇದರ ವಿರುದ್ಧ ಹೋರಾಟ ತೀವ್ರಗೊಳಿಸುತ್ತೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕ್ಯಾಥೋಲಿಕ್ ಸಭಾ ಮಂಗಳೂರು ಪ್ರದೇಶ ಉಪಾಧ್ಯಕ್ಷ ಸ್ಟೀವನ್ ರೋಡ್ರಿಗಸ್, ಪ್ರಧಾನ ಕಾರ್ಯದರ್ಶಿ ಆಲ್ವಿನ್ ಮೊಂತೇರೊ, ಆಧ್ಯಾತ್ಮಕ ನಿರ್ದೇಶಕ ಫಾದರ್ ಜೆ.ಬಿ. ಕ್ರಾಸ್ತ, ಸ್ಥಳೀಯ ನಿವಾಸಿ ಗಿಲ್ಬರ್ಟ್ ಡಿಸೋಜ, ಮಾಜಿ ಅಧ್ಯಕ್ಷ ಸ್ಟ್ಯಾನಿ ಪಿಂಟೊ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article