ಎನ್‌ಎಸ್‌ಎಸ್ ನಮಗೆ ಸಮಾಜ ಸೇವೆಯನ್ನು ಕಲಿಸುತ್ತದೆ: ಡಾ. ಉದಯ್ ಕುಮಾರ್

ಎನ್‌ಎಸ್‌ಎಸ್ ನಮಗೆ ಸಮಾಜ ಸೇವೆಯನ್ನು ಕಲಿಸುತ್ತದೆ: ಡಾ. ಉದಯ್ ಕುಮಾರ್


ಮಂಗಳೂರು: ಶಾಂತಿ, ತ್ಯಾಗ ಮತ್ತು ಸಂಮೃದ್ಧಿಯನ್ನು ಕಾಣುವುದು ಎನ್‌ಎಸ್‌ಎಸ್‌ನ ಮುಖ್ಯ ಧೇಯ. ಎನ್‌ಎಸ್‌ಎಸ್‌ನಲ್ಲಿ ನಾವು ಶಿಸ್ತನ್ನು ಮೊದಲು ಕಲಿಯಬೇಕು. ಸಮಾಜಕ್ಕೆ ನಾವು ಸೇವೆ ಮಾಡುವ ಮೊದಲು ನಾವು ಮನೆಯಿಂದ ನಮ್ಮ ಸೇವೆ ಪ್ರಾರಂಭವಾಗಬೇಕು. ನಾನು ಮಾಡುತ್ತಿರುವ ಸೇವೆ ನನಗಲ್ಲ ಸಮಾಜಕ್ಕೆ ಎಂಬುವುದನ್ನು ಎನ್‌ಎಸ್‌ಎಸ್ ಸ್ವಯಂ ಸೇವಕರು ಅರಿಯಬೇಕು ಎಂದು ಸೆಂಟ್ ಆಗ್ನೆಸ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಉದಯ್ ಕುಮಾರ್ ಹೇಳಿದರು.

ಅವರು ಇಂದು ಮಂಗಳೂರಿನ ರಥಬೀದಿಯ ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಅಭಿವಿನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಎನ್‌ಎಸ್‌ಎಸ್ ಸಾರ್ವಜನಿಕರಲ್ಲಿ ಅಗತ್ಯವಿರುವ ವಿಚಾರಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬೀದಿ ನಾಟಕದೊಂದಿಗೆ ಸುಲಭವಾಗಿ ಮಾಹಿತಿಯನ್ನು ನೀಡಲು ಸಹಕಾರಿಯಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಜಯಕರ ಭಂಡಾರಿ ಎಂ. ಅವರು ಮಾತನಾಡಿ, ಕಾಲೇಜು ಜೀವನದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೂ ಎನ್‌ಎಸ್‌ಎಸ್‌ನಲ್ಲಿ ಅವಕಾಶ ಸಿಗುವುದಿಲ್ಲ. ಕೆಲವರಿಗೆ ಮಾತ್ರ ಈ ಅವಕಾಶ ಸಿಗುತ್ತದೆ. ಇದನ್ನು ಉಪಯೋಗಿಸಿಕೊಂಡು ಮುಂದಿನ ಭವಿಷ್ಯದಲ್ಲಿ ಶಿಸ್ತು, ಉತ್ತಮ ಜೀವನದೊಂದಿಗೆ ಪರಿಪೂರ್ಣ ಜೀವನ ರೂಪಿಸಲು ಎನ್‌ಎಸ್‌ಎಸ್ ತರಬೇತಿ ಸಹಕಾರಿಯಾಗಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ರಾಜ್ಯ ಮಟ್ಟದ ನಾಯಕತ್ವ ತರಬೇತಿ ಪಡೆದ ಸ್ವಯಂ ಸೇವಕರಾದ ರಿತೇಶ್ ಮತ್ತು ಭರತ್ ಅವರಿಗೆ ಮುಖ್ಯ ಅತಿಥಿಗಳು ಪ್ರಮಾಣ ಪತ್ರವನ್ನು ವಿತರಿಸಿದರು.

ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿಗಳಾದ ಡಾ. ಲೋಕೇಶ್‌ನಾಥ್, ಡಾ. ಮೋಹನ್ ದಾಸ್, ಶ್ರೀಮತಿ ಶಾಂತಿ ಉಪಸ್ಥಿತರಿದ್ದರು.

ಸ್ವಯಂ ಸೇವಕಿ ಕಾವ್ಯ ಸ್ವಾಗಸಿದರು. ಸುಬ್ರಹ್ಮಣ್ಯ ನಿರೂಪಿಸಿದ ಕಾರ್ಯಕ್ರಮದಲ್ಲಿ ಶರಣ್ಯ ವಂದಿಸಿದರು.












Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article