ಜೆ.ಎಫ್. ಅಸೋಸಿಯೇಷನ್ ಬಜಾಲ್ ವತಿಯಿಂದ ಸ್ವಚ್ಛತಾ ಆಂದೋಲನ

ಜೆ.ಎಫ್. ಅಸೋಸಿಯೇಷನ್ ಬಜಾಲ್ ವತಿಯಿಂದ ಸ್ವಚ್ಛತಾ ಆಂದೋಲನ


ಮಂಗಳೂರು: ಜೆ.ಎಫ್. ಅಸೋಸಿಯೇಷನ್ ಬಜಾಲ್ ನಂತೂರು ಮಂಗಳೂರು ವತಿಯಿಂದ ಸ್ವಚ್ಛತಾ ಆಂದೋಲನ ಕಾರ್ಯಕ್ರಮವು ಜೆ.ಎಫ್. ಅಸೋಸಿಯೇಷನ್ ಅಧ್ಯಕ್ಷ ಅಹಮದ್ ಕುರೈಶ್ ಅವರ ಮಾರ್ಗದರ್ಶನದಲ್ಲಿ ಇಂದು ಬೆಳಿಗ್ಗೆ ನಡೆಯಿತು.

ರಸ್ತೆ ಗುಡಿಸುವ ಮೂಲಕ ಉದ್ಘಾಟಿಸಿದ ಮನಪಾ ಸದಸ್ಯ ಹಾಗೂ ಬದ್ರಿಯಾ ಜುಮ್ಮಾ ಮಸೀದಿ, ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ಅಬ್ದುಲ್ ರವೂಫ್ ಮಾತನಾಡಿ, ಆರೋಗ್ಯ ಮತ್ತು ಪರಿಸರ ಸ್ವಚ್ಚತೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಪರಿಸರ ಸ್ವಚ್ಚತೆ ಇರುವಲ್ಲಿ ಆರೋಗ್ಯ ಇರುತ್ತದೆ. ಶುಚಿತ್ವದ ಕೊರತೆ ಇದ್ದಲ್ಲಿ ಆರೋಗ್ಯದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಜನಸಾಮಾನ್ಯರು ಆರೋಗ್ಯವಾಗಿದ್ದಲ್ಲಿ ಮಾತ್ರ ಅವರ ಜೀವನ ಮಟ್ಟ ಉತ್ತಮವಾಗಲು ಸಾಧ್ಯ. ಸಾಮಾನ್ಯವಾಗಿ ನಮ್ಮ ದೇಶದಲ್ಲಿ ಶೇ. 80ರಷ್ಟು ಆರೋಗ್ಯದ ಸಮಸ್ಯೆಗಳು ನೈರ್ಮಲ್ಯದ ಕೊರತೆಯಿಂದ ಉಂಟಾಗುತ್ತವೆ. ಜನಸಾಮಾನ್ಯರಲ್ಲಿ ಅರಿವಿನ ಕೊರತೆಯಿಂದಾಗಿ ನೈರ್ಮಲ್ಯ ಕೊರತೆ ಉಂಟಾಗಿ ಅನೇಕ ರೋಗಗಳಿಗೆ ತುತ್ತಾಗಲು ಕಾರಣವಾಗುತ್ತಿದೆ ಎಂದು ಹೇಳಿದರು.

ನಮ್ಮ ಉತ್ತಮ ಆರೋಗ್ಯ ಸಮಾಜಕ್ಕಾಗಿ ಸ್ವಚ್ಛತೆ ಎಂಬುದು ನಮ್ಮೆಲ್ಲರ ಜವಾಬ್ದಾರಿ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಪರಿಸರದ ಸ್ವತ್ಛತೆಯ ಬಗ್ಗೆ ಹೆಚ್ಚಿನ ಗಮನಹರಿಸಬೇಕು ಎಂದ ಅವರು ಜೆಎಫ್‌ಎ ಸಮಿತಿಯ ಅಧ್ಯಕ್ಷರಿಗೆ ಹಾಗೂ ಸದಸ್ಯರ ಈ ಕೆಲಸ ಸ್ಲಾಘನೀಯ ಎಂದು ಶುಭ ಹಾರೈಸಿದರು 

ಸ್ವಚ್ಛತೆಯ ಅರಿವಿಗಾಗಿ ಬಿತ್ತಿ ಪತ್ರ ಬಿಡುಗಡೆಗೊಳಿಸಲಾಹಿತು. ಸ್ವಚ್ಛತಾ ಆಂದೋಲನ ಕಾರ್ಯದಲ್ಲಿ ಭಾಗವಹಿಸಿದ ಯುವಕರಿಗೆ ತಲೆಗೆ ಟೋಪಿ, ಟಿ ಶರ್ಟ್, ಕೈಗೆ ಗ್ಲೋಸ್, ಮುಖಕ್ಕೆ ಮಾಸ್ಕ್ ವಿತರಿಸಲಾಯಿತು.

ಬದ್ರಿಯಾ ಜುಮ್ಮಾ ಮಸೀದಿಯ ಉಪಾಧ್ಯಕ್ಷ ಎಚ್.ಎಸ್. ಹನೀಫ್, ಸಂಚಾಲಕರಾದ ಬಿ. ಪಕ್ರುದ್ದೀನ್, ನಝೀರ್ ಬಜಾಲ್, ಎಸ್‌ಕೆಎಸ್‌ಎಸ್‌ಎಫ್ ಅಧ್ಯಕ್ಷ ಹಮ್ಮಬ್ಬ ಮೋನಕ, ಮೊಯಿದಿನ್ ಕುಂಜಿ, ಎನ್‌ಎಸ್‌ಆರ್ ನಾಸೀರ್, ಕಲಂದರ್, ಜೆಎಫ್‌ಎ ಉಪಾಧ್ಯಕ್ಷ ಸೌಕತ್ ಇಬ್ರಾಹಿಂ, ಹನೀಫ್ ಕೆಳಗಿನ ಮನೆ, ಅನ್ವರ್ ಕಜಕಾಂಡ, ಅಬೂಬಕ್ಕರ್, ಎಂ. ಮುಸ್ತಫಾ ಕಟ್ಟ, ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಜೆಎಫ್‌ಎ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಕೀಝೆ ಸ್ವಾಗತಿಸಿದರು ಸಜ್ಜದ್ ಕಾರ್ಯಕ್ರಮ ನಿರೂಪಿಸಿ, ಉನೈಸ್ ವಂದಿಸಿದರು.



Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article