ಶಂಕರಪುರ ಶ್ರೀ ದ್ವಾರಕಾಮಾಯಿ ಸಾಯಿಬಾಬ ಮಂದಿರದಲ್ಲಿ ಸಾಯಿ ಈಶ್ವರ್ ಗುರೂಜಿಯವರಿಂದ ನವರಾತ್ರಿಯ ದುರ್ಗಾಷ್ಟಮಿಯಂದು ಉಚಿತ 108 ಹೆಣ್ಣು ಮಕ್ಕಳಿಗೆ ಚಿನ್ನದ ಮೂಗುತಿ ಧಾರಣೆ
Sunday, October 13, 2024
ಉಡುಪಿ: ಇಲ್ಲಿನ ಶಂಕರಪುರದ ಶ್ರೀ ದ್ವಾರಕಾಮಾಯಿ ಸಾಯಿಬಾಬ ಮಂದಿರದಲ್ಲಿ ಅ.11 ರಂದು ದುರ್ಗಾಷ್ಟಮಿ ಪ್ರಯುಕ್ತ ಶ್ರೀ ಸಾಯಿ ಈಶ್ವರ್ ಗುರೂಜಿ ಅವರ ದಿವ್ಯ ಸಂಕಲ್ಪದಂತೆ ಶ್ರೀ ಸೌಭಾಗ್ಯ ಕಾರ್ಯಕ್ರಮದಡಿ ಸುಮಾರು 3 ಲಕ್ಷ ರೂ. ವೆಚ್ಚದಲ್ಲಿ 8 ರಿಂದ 19 ವರ್ಷದೊಳಗಿನ 108 ಹೆಣ್ಣು ಮಕ್ಕಳಿಗೆ ಉಚಿತವಾಗಿ ಚಿನ್ನದ ಮೂಗುತಿ ಚುಚ್ಚುವ ಕಾರ್ಯಕ್ರಮ ಶಂಕರಪುರ ಸಾಯಿ ಬಾಬ ಮಂದಿರದಲ್ಲಿ ನಡೆಯಿತು.
ಶಂಕರಪುರದ ಶ್ರೀ ದ್ವಾರಕಾಮಾಯಿ ಸಾಯಿಬಾಬ ಮಂದಿರದ ಟ್ರಸ್ಟಿ ಮಾಜಿ ಜಿ.ಪಂ. ಸದಸ್ಯೆ ಗೀತಾಂಜಲಿ ಎಂ. ಸುವರ್ಣ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಬಿಜೆಪಿ ಮಹಿಳಾ ಮೋರ್ಚಾ ಮಾಜಿ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ, ಮಂಗಳೂರು ನಗರ ಪಾಲಿಕೆ ಕಾರ್ಪೋರೇಟರ್ ನಯನಾ, ಮಂದಿರದ ಟ್ರಸ್ಟಿ ವಿಶ್ವನಾಥ ಸುವರ್ಣ, ಅಧ್ಯಕ್ಷ ಸುಧಾಕರ್ ಶೆಟ್ಟಿ, ಟ್ರಸ್ಟಿ ಸ್ಮಿತಾ ಪ್ರವೀಣ್, ಮೂಗುತಿ ಧಾರಣೆಯ ಸಂಚಾಲಕ ಪ್ರಕಾಶ್ ಆಚಾರ್ಯ, ಶ್ರೀ ಸಾಯಿಮುಖ್ಯಪ್ರಾಣ ದೇವಸ್ಥಾನದ ಪ್ರಧಾನ ಅರ್ಚಕ ಉಮೇಶ್ ಉಡುಪ, ಗುರೂಜಿ ಆಪ್ತ ಸಹಾಯಕ ಸತೀಶ್ ದೇವಾಡಿಗ ಉಪಸ್ಥಿತರಿದ್ದರು.
ರಾಜೇಶ್ ಆಚಾರ್ಯ ಬಿಳಿಯಾರು ಸ್ವಾಗತಿಸಿ, ನಿರೂಪಿಸಿ, ವಂದಿಸಿದರು. ಬಳಿಕ ಮೌನವ್ರತಧಾರಿಯಾಗಿದ್ದ ಶ್ರೀ ಸಾಯಿ ಈಶ್ವರ್ ಗುರೂಜಿ ಅವರ ದಿವ್ಯ ಉಪಸ್ಥಿತಿಯಲ್ಲಿ 108 ಹೆಣ್ಮಕ್ಕಳಿಗೆ ಉಚಿತವಾಗಿ ಚಿನ್ನದ ಮೂಗುತಿಯನ್ನು ಚುಚ್ಚಲಾಯಿತು.


