ಪ್ರತಿಯೊಬ್ಬರನ್ನು ಆಕರ್ಶಿಸುವುದು ನಮ್ಮ ಮಂಗಳೂರು ದಸರಾ...!

ಪ್ರತಿಯೊಬ್ಬರನ್ನು ಆಕರ್ಶಿಸುವುದು ನಮ್ಮ ಮಂಗಳೂರು ದಸರಾ...!


ಮಂಗಳೂರು ದಸರಾ ದಕ್ಷಿಣ ಕನ್ನಡ ಜಿಲ್ಲೆಯ ಅತ್ಯಂತ ವಿಶಿಷ್ಟ ಮತ್ತು ಅದ್ದೂರಿ ಹಬ್ಬಗಳಲ್ಲಿ ಒಂದಾಗಿದೆ. ಪ್ರಖ್ಯಾತ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನವು ಈ ದಸರಾ ಹಬ್ಬ ಕೇಂದ್ರವಾಗಿದ್ದು, ಇದರ ವೈಭವವು ಮೈಸೂರಿನ ದಸರಾದೊಂದಿಗೆ ನಡೆಯುತ್ತದೆ. ಈ ಹಬ್ಬವು ಭಕ್ತಿಯಿಂದ ಕೂಡಿದ ನವರಾತ್ರಿಯ ಉತ್ಸವವಾಗಿದ್ದು, ನಗರವಾಸಿಗಳು ಮಾತ್ರವಲ್ಲದೆ ಹತ್ತಿರದ ಹಳ್ಳಿಗಳ ಜನರು ಸಹ ಅಷ್ಟೇ ಉತ್ಸಾಹ. 

ಹಬ್ಬದಲ್ಲಿ ಪಾಲ್ಗೊಳ್ಳುತ್ತಾರೆ. ಮಂಗಳೂರು ಕರಾವಳಿ ಪ್ರದೇಶದಲ್ಲಿ ಪ್ರಸಿದ್ಧವಾದ ದಸರಾ ಉತ್ಸವವನ್ನು ಧಾರ್ಮಿಕತೆ, ಸಂಸ್ಕೃತಿ ಹಾಗೂ ಮೈವಿದ್ಯಮಯ ಹಬ್ಬದ ಭಾಗವನ್ನಾಗಿ ಆಚರಿಸಲಾಗುತ್ತದೆ. ಈ ಹಬ್ಬದ ವೇಳೆಯಲ್ಲಿ ಹಲವಾರು ಧಾರ್ಮಿಕ ಆಚರಣೆಗಳು ಪೂಜೆ ಮತ್ತೆ ಹೋಮ-ಹವನಗಳು ನವರಾತ್ರಿ ಸಂದರ್ಭಗಳಲ್ಲಿ ನಿರ್ವಹಿಸುತ್ತಾರೆ. ಈ ಹಬ್ಬವನ್ನು ೯ ದಿನಗಳ ಕಾಆಲ ಅದ್ದೂರಿಯಾಆಗಿ ಆಚರಣೆ ಮಾಡುತ್ತಾರೆ.

ದಸರಾ ಹಬ್ಬದ ಮೊದಲ ದಿನವೇ ದೇವಸ್ಥಾನದಲ್ಲಿ ಕಲಶ ಸ್ಥಾಪನೆ ಮಾಡಲಾಗುತ್ತದೆ. ಇದರಲ್ಲಿ ದೇವಿ ದುರ್ಗೆಯ ಸಂಕೇತವಾಗಿ ಕಲಶವನ್ನು ಪ್ರತಿಷ್ಠಾಪಿಸಿ, ನವರಾತ್ರಿಯ ಎಲ್ಲಾ ದಿನಗಳಲ್ಲಿ ಆರಾಧಿಸಲಾಗುತ್ತದೆ. ಇದರಲ್ಲಿ ದುರ್ಗಾ, ಲಕ್ಷ್ಮೀ ಮತ್ತು ಸರಸ್ವತಿ ದೇವಿಯ ಪೂಜೆಯು ಮುಖ್ಯವಾಗಿದೆ. ಏಕೆಂದರೆ ಈ ದೇವತೆಗಳ ಶಕ್ತಿ, ಸಂಪತ್ತು ಮತ್ತು ಜ್ಞಾನವನ್ನು ಪ್ರತಿನಿಧಿಸುತ್ತವೆ.

ನವರಾತ್ರಿಯ ಎಲ್ಲಾ ದಿನಗಳಲ್ಲಿಯೂ ದೇವಿಯ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗುತ್ತದೆ. ಹೂವು, ಹಣ್ಣು ಹಾಗೂ ಅಡುಗೆ ಸಾಮಾಗ್ರಿಗಳನ್ನು ದೇವಿಗೆ ಸಮರ್ಪಿಸಿ ಭಕ್ತಿಯಿಂದ ಆರತಿ ಮಾಡುವ ಪರಂಪರೆಯಿದೆ. ಈ ಸಮಯದಲ್ಲಿ ದೀಪಾಲಂಕಾರ, ತೋರಣಗಳು ಮತ್ತು ಇತರ ಅಲಂಕಾರಗಳನ್ನು ದೇವಸ್ಥಾನದ ಉದ್ದಕ್ಕೂ ಮಾಡಿರುತ್ತಾರೆ.

ದಸರಾದ ಸಂದರ್ಭದಲ್ಲಿ ಪ್ರತಿ 9 ದಿನವು ವಾಹನಗಳಿಗೆ ಆಯುಧಪೂಜೆಯನ್ನು ಮಾಡುತ್ತಾರೆ. ಈ ಆಯುಧಪೂಜೆಯನ್ನು ಶಕ್ತಿ ಮತ್ತು ಯಾವುದೇ ತೊಂದರೆಯಾಗುವುದು ಬೇಡ ಎಂಬ ಕಾರಣದಿಂದ ಆಯುಧಗಳಿಗೆ ಪೂಜೆಗಳನ್ನು ಮಾಡುತ್ತಾರೆ.

ಮಂಗಳೂರಿನ ದಸರಾ ಹಬ್ಬವು ಹತ್ತಿರದ ಪ್ರದೇಶಗಳಲ್ಲಿ ಅತ್ಯಂತ ಪ್ರಾಖ್ಯಾತವಾಗಿದ್ದು, ಇದರ ಮುಖ್ಯ ಆಕರ್ಷಣೆ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಅಲಂಕಾರವಾಗಿದೆ. ಹಬ್ಬದ ಸಂದರ್ಬ ದೇವಳವು ಬೆಳಕು ಹೂವು ಹಗೂ ವೈವಿಧ್ಯಮಯ ಅಲಂಕಾರಗಳಿಂದ ಅಂಕೇಶ್ವರನಂತಾಗಿ ಬದಲಾಗುತ್ತದೆ. ಮಂಗಳೂರು ದಸರಾ ‘ನವರಾತ್ರಿ’ ಎಂದೇ ಜನಪ್ರಿಯವಾಗಿದೆ. ಏಕೆಂದರೆ ಹಬ್ಬದ ಎಲ್ಲ ದಿನಗಳಲ್ಲಿಯೂ ನಾಡ ದೇವತೆಯರ ಆರಾಧನೆ ವಿಶೇಷ ಪೂಜೆ ಮತ್ತು ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತದೆ.

ದಸರಾ ಹಬ್ಬದಲ್ಲಿ ಜನರು ತಮ್ಮ ಮನೆಗಳ ಮತ್ತು ಅಂಗಡಿಗಳು, ಹೋಟೆಲ್‌ಗಳು ಇತ್ಯಾದಿಗಳನ್ನು ಅಲಂಕರಿಸುತ್ತಾರೆ. ಮಂಗಳೂರಿನ ಬಹುತೇಕ ರಸ್ತೆಗಳಲ್ಲಿ ದಸರಾ ಮೆರವಣಿಗೆಗಾಗಿ ದ್ವೀಪಗಳು ಮತ್ತು ವಿದ್ಯುತ್ ದ್ವೀಪಗಳಿಂದ ಆಕೃತಗೊಂಡಿರುವುದನ್ನು ನಾವು ಕಾಣಲು ಸಾಧ್ಯವಾಗುತ್ತದೆ. ನವರಾತ್ರಿ ಮತ್ತು ಶಿವರಾತ್ರಿ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ಆಚರಿಸಲಾಗುವ ಎರಡು ದೊಡ್ಡ ಹಬ್ಬಗಳು.

ದಸರಾದ ಸಂದರ್ಭದಲ್ಲಿ ಹುಲಿವೇಷವನ್ನು ನಾವು ಕಾಣಲು ಸಾಧ್ಯವಾಗುತ್ತದೆ. ನಾವು ಎಲ್ಲಿ ನೋಡಿದರು ಕೂಡ ದಸರಾದ ಸಮಯದಲ್ಲಿ ಹುಲಿವೇಷವನ್ನು ಮಾಡುವುದನ್ನು ಕಾಣಬಹುದು. ವಿಶಿಷ್ಟವಾಗಿ ಯುವ ಪುರುಷರು ಒಂದು ಗುಂಪನ್ನು ರಚಿಸಿಕೊಂಡು ಹುಲಿಗಳಂತೆ ಬಣ್ಣ ಹಚ್ಚಿ ವೇಷವನ್ನು ಧರಿಸುವುದನ್ನು ಕಾಣಬಹುದಾಗಿದೆ. ಶಾರದಾ ದೇವಿಯೊಂದಿಗೆ ವಿವಿಧ ಮೂರ್ತಿಗಳನ್ನು ಪುರೋಹಿತರು ಸ್ವರ್ಣ ಕಲಾ ಮಂಟಪದಲ್ಲಿ ಸೂತ್ರಗಳ ಪಠಣ ಮತ್ತು ವೈದಿಕ ಆಚರಣೆಗಳಲ್ಲಿ ಮಹಾಗಣಪತಿ ಮತ್ತು ನವದುರ್ಗೆಯರ ಜೊತೆಗೆ ಶಾರದಾ ದೇವಿಯ ಅಲಂಕೃತ 9 ದಿನಗಳ ಕಾಆಲ ‘ಗಂಗಾವತರಣ’ವನ್ನು ಕಾರ್ಯರೂಪದಲ್ಲಿ ಇರಿಸುತ್ತಾರೆ.

ಮಂಗಳೂರು ದಸರಾದ ಪ್ರಾಥಮಿಕ ಸ್ಥಳವು ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನವಾಗಿದ್ದರೂ, ಮಂಗಳೂರು ದಸರಾವನ್ನು ಮಂಗಳಾದೇವಿ ದೇವಸ್ಥಾನ ಶ್ರೀ ವೆಂಕಟರಮಣ ದೇವಸ್ಥಾನ ಮುಂತಾದ ಕಡೆಗಳಲ್ಲಿಯೂ ಆಚರಿಸಲಾಗುತ್ತದೆ. ವಿಜಯದಶಮಿ ದಿನ ಸಂಜೆ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಿಂದ ಮೆರವಣಿಗೆ ಪ್ರಾರಂಭವಾಗಿ ಮರುದಿನ ಮುಂಜಾನೆ ದೇವಸ್ಥಾನದ ಸಂಕೀರ್ಣದಲ್ಲಿರುವ ಪುಷ್ಕರಿಣಿಯಲ್ಲಿ ವಿಗ್ರಹಗಳ ನಿಮಜ್ಜನದೊಂದಿಗೆ ಅದೇ ಸ್ಥಳದಲ್ಲಿ ಕೊನೆಗೊಳ್ಳುತ್ತದೆ. 

ಮಹಾಗಣಪತಿ ಮತ್ತು ಶಾರದೆಯ ಜೊತೆಗೆನವದುರ್ಗೆಯರ ವಿಗ್ರಹಗಳನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತದೆ. ಈ ಮೆರವಣಿಗೆಯಲ್ಲಿ ಪುಷ್ಪಗಳು, ಅಲಂಕಾರಿಕ ಛತ್ರಿಗಳು, ಬ್ಯಾಂಡ್‌ಗಳು, ಚೆಂಡೆ ಮತ್ತು ಸಾಂಪ್ರದಾಯಿಕ ನೃತೃಗಳು, ಜಾನಪದ, ನೃತ್ಯಗಳು, ಡೊಳ್ಳುಕುಣಿತ, ಪಿಲಿನಲಿಕೆ ಮತ್ತು ಇತರ ಸಾಂಪ್ರದಾಯಿಕ ಕಲಾ ಪ್ರಕಾಆರಗಳು ಇರುತ್ತದೆ. ಕುದ್ರೋಲಿ, ಮಣ್ಣಗುಡ್ಡ, ಲೇಡಿಹಿಲ್, ಲಾಲ್‌ಬಾಗ್, ಕೆ.ಎಸ್. ರವ್ ರಸ್ತೆ, ಹಂಪನಕಟ್ಟೆ, ಕಾರ್‌ಸ್ಟ್ರೀಟ್ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಈ ಮೆರವಣಿಗೆ ಸಾಗುತ್ತದೆ.


-ಶೃತಿ ಬಿ.ಕೆ.

ಪತ್ರಿಕೋದ್ಯಮ ವಿದ್ಯಾರ್ಥಿನಿ,

ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಥಬೀದಿ, ಮಂಗಳೂರು.



Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article