ಕುಡುಂಬೂರು ನಡುಗಿರಿ ಗ್ರಾಮ ದೈವ ಜಾರಂದಾಯ ಸಪರಿವಾರ ದೈವಗಳ ವಿಜ್ಞಾಪನ ಪತ್ರಿಕೆ ಬಿಡುಗಡೆ

ಕುಡುಂಬೂರು ನಡುಗಿರಿ ಗ್ರಾಮ ದೈವ ಜಾರಂದಾಯ ಸಪರಿವಾರ ದೈವಗಳ ವಿಜ್ಞಾಪನ ಪತ್ರಿಕೆ ಬಿಡುಗಡೆ


ಮಂಗಳೂರು: ಕುಡುಂಬೂರು ನಡುಗಿರಿ ಗ್ರಾಮ ದೈವ ಜಾರಂದಾಯ ಸಪರಿವಾರ ದೈವಗಳ ಬಂಡಿ, ಬಂಡಿ ಕೊಟ್ಯ ಹಾಗೂ ದೈವಗಳ ಆಭರಣ ತಯಾರಿಕೆಯ ವಿಜ್ಞಾಪನ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಅ.4 ರಂದು ಸಂಜೆ ಶ್ರೀ ಕುಡುಂಬೂರು ನಡುಗಿರಿ ಗ್ರಾಮ ದೈವ ಜಾರಂದಾಯ ಸಪರಿವಾರ ದೈವಸ್ಥಾನದ ವಠಾರದಲ್ಲಿ ಶ್ರೀ ರಾಜಶೇಖರಾನಂದ ಸ್ವಾಮೀಜಿ ವಜ್ರದೇಹಿ ಮಠ ಗುರುಪುರ ಇವರ ಉಪಸ್ಥಿತಿಯಲ್ಲಿ ವಿಜ್ಞಾಪನ ಪತ್ರಿಕೆ ಬಿಡುಗಡೆ ನಡೆಯಿತು. 

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೈಕಂಪಾಡಿ ಕೆನರಾ ಇಂಡಸ್ಟ್ರೀಯಲ್ ಅಸೋಸಿಯೇಷನ್‌ನ ಅಧ್ಯಕ್ಷ ಅರುಣ್ ಪಡಿಯಾರ್ ಅವರು ವಹಿಸಿದ್ದರು. 

ಗುತ್ತಿನಾರ್ ದಿವಾಕರ್ ಆಳ್ವ ತೋಕೂರು ಗುತ್ತು, ಜತ್ತಿ ಪೂಜಾರಿ ಜಾರ ಮೂಡಶೆಡ್ಡೆ ಜಾರಂದಾಯ ದೈವಸ್ಥಾನ, ಶಾಂತ ಕುಮಾರ್, ಎಚ್.ಆರ್. ಅಧಾನಿ ವಿಲ್ಮಾರ್ ಬೈಕಂಪಾಡಿ ಕೈಗಾರಿಕಾ ಪ್ರದೇಶ, ರೈಸ್ ಸ್ಪೈಸಸ್‌ನ ಮಾಲಕಿ ದಿವ್ಯ ರೈ, ಕೆ.ಸಿ. ಎಂಟರ್ಪ್ರೈಸ್‌ನ ಕೆ. ಚೆನ್ನಯ್ಯ ಸ್ವಾಮಿ, ಕುಡುಂಬೂರು ಶ್ರೀ ಅನ್ನಪೂರ್ಣೇಶ್ವರಿ ಸೇವಾ ಟ್ರಸ್ಟ್ (ರಿ.)ನ ಅಧ್ಯಕ್ಷ ರಾಜೇಶ್ವರ್ ಹೊಳ್ಳ, ಕಾರಿಂಜೆ ಎಂಟರ್ಪ್ರೈಸ್‌ನ ಮಾಲಕ ರಾಜೇಶ್ ಭಂಡಾರಿ, ಕುಬೇರ ಇಂಡಸ್ಟ್ರೀಸ್‌ನ ಮಾಲಕ ರಾಮಚಂದ್ರ, ಶ್ರೀ ಅನ್ನಪೂರ್ಣೇಶ್ವರಿ ಕ್ಷೇತ್ರ ಕುಡುಂಬೂರು ಇಲ್ಲಿನ ಅರ್ಚಕ ಗಣೇಶ್ ಭಟ್, ಬದವಿದೆ ಶಿವ ಶಕ್ತಿ ಕನ್ಸ್ಟ್ರಕ್ಷನ್‌ನ ವಿಶ್ವೇಶ್ವರ ಭಟ್, ಶ್ರೀ ಸತ್ಯ ಧರ್ಮ ದೇವಸ್ಥಾನ ಮುಕ್ಕ ಇಲ್ಲಿನ ಟ್ರಸ್ಟಿ ರಮಾನಾಥ್ ರೈ ಕುತ್ತಿಲಗುತ್ತು, ವಾಸ್ತು ತಜ್ಞ ಪ್ರಭಾಕರ್ ಆಚಾರ್ಯ ಉಪಸ್ಥಿತರಿದ್ದರು. 

ಕ್ಷೇತ್ರದ ಅಧ್ಯಕ್ಷ ಅಶ್ವಿನ್ ಶೇಖ ಪ್ರಸ್ತಾವನೆಗೈದರು, ಅಕ್ಷತ ನವೀನ್ ಶೆಟ್ಟಿ ಎಡ್ಮೆಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು.








Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article