ಮಂಗಳೂರು-ಪೊಳಲಿಗೆ ಕೆಎಸ್‌ಆರ್‌ಟಿಸಿ ಬಸ್ ಚಾಲನೆ
Saturday, October 5, 2024
ಮಂಗಳೂರು: ಮಂಗಳೂರಿನಿಂದ ಪೊಳಲಿಯ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಕೆಎಸ್‌ಆರ್‌ಟಿಸಿ ಬಸ್ ಸಂಚಾರಕ್ಕೆ ಶುಕ್ರವಾರ ಚಾಲನೆ ನೀಡಲಾಗಿದೆ.ಪೊಳಲಿ ಕ್ಷೇತ್ರದ ವಠಾರದಲ್ಲಿ ಕೆಎಸ್‌ಆರ್‌ಟಿಸಿಗೆ ಪೂಜೆ ನೆರವೇರಿಸಿದ ಬಳಿಕ ಚಾಲನೆಗೊಂಡಿದೆ.
ಶ್ರೀ ಪೊಳಲಿ ಕ್ಷೇತ್ರದಿಂದ ಬೆಂಜನಪದವು, ಕಲ್ಪನೆ, ಕಡೇಗೋಳಿ, ಫರಂಗಿಪೇಟೆ, ಪಡೀಲಿನ ಮೂಲಕ ಮಂಗಳೂರಿಗೆ ಈ ಸರಕಾರಿ ಬಸ್‌ನ ವ್ಯವಸ್ಥೆಯು ಇರಲಿದೆ.
ಇದರಿಂದಾಗಿ ಈ ಭಾಗದ ಜನರ ಬಹುಕಾಲದ ಕನಸು ನನಸಾಗಿದೆ. ಹಲವು ವರ್ಷದಿಂದ ಈ ರೂಟಿನಲ್ಲಿ ಮಂಗಳೂರಿನಿಂದ ಪೊಳಲಿಗೆ ಸರಕಾರಿ ಬಸ್‌ನ ವ್ಯವಸ್ಥೆ ಕಲ್ಪಿಸುವಂತೆ ಇಲ್ಲಿನ ನಾಗರಿಕರು ಕೆಎಸ್‌ಆರ್‌ಟಿಸಿ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿತ್ತು. ಬ್ರಹ್ಮರಕೊಟ್ಲು ಯಕ್ಷಮಿತ್ರ ಸದಸ್ಯರು ಹಾಗೂ ಸ್ಥಳೀಯ ಮುಖಂಡರ ಮುತುವರ್ಜಿಯಿಂದ ನವರಾತ್ರಿಯ ಶುಭ ಸಂದರ್ಭದಲ್ಲಿಯೇ ಕೆಎಸ್‌ಆರ್‌ಟಿಸಿಬಸ್ ಬಸ್ ಆರಂಭಗೊಂಡಿದೆ. ನವರಾತ್ರಿಯ ಬಳಿಕವು ಈ ಬಸ್‌ನ ವ್ಯವಸ್ಥೆ ಮುಂದುವರಿಯಲಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.