ಕಾಂಗ್ರೆಸ್ ಹಿಂದೂಗಳನ್ನು ದಮನ ಮಾಡಿದಷ್ಟು ಬಲಿಷ್ಠವಾಗುತ್ತದೆ: ಡಾ. ಭರತ್ ಶೆಟ್ಟಿ ವೈ

ಕಾಂಗ್ರೆಸ್ ಹಿಂದೂಗಳನ್ನು ದಮನ ಮಾಡಿದಷ್ಟು ಬಲಿಷ್ಠವಾಗುತ್ತದೆ: ಡಾ. ಭರತ್ ಶೆಟ್ಟಿ ವೈ

ಮಂಗಳೂರು: ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್ ಪಕ್ಷಹುಬ್ಬಳ್ಳಿ ಘಟನೆ, ಹಿಜಾಬ್ ಹೋರಾಟ ಸಹಿತ ಮುಸ್ಲಿಂ ವರ್ಗದ ಪೊಲೀಸ್ ಕೇಸುಗಳನ್ನು ವಾಪಾಸ್ ಪಡೆದು ಹಿಂದೂಗಳ ಮೇಲಿನ ಕೇಸ್ ಹಿಂದಕ್ಕೆ ಪಡೆಯದೆ ದಮನಕಾರಿ ನೀತಿ ಅನುಸರಿಸುತ್ತಿದೆ. ಸರಕಾರ ಹಚ್ಚುತ್ತಿರುವ ತಾರತಮ್ಯದ ಬೆಂಕಿ ಭವಿಷ್ಯದಲ್ಲಿ ಕಾಂಗ್ರೆಸ್‌ನ್ನು ಸುಡಲಿದೆ ಎಂದು ಶಾಸಕ ಡಾ. ಭರತ್ ಶೆಟ್ಟಿ ವೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿಮ್ಮ ಸರಕಾರದ ಹಗರಣವನ್ನು ಮರೆ ಮಾಚಲು ವಿಷಯಾಂತರ ಮಾಡುತ್ತಿರುವುದು ತಿಳಿಯದ ವಿಚಾರವಲ್ಲ. ರಾಜ್ಯವನ್ನು ಅಭಿವೃದ್ಧಿಯತ್ತಾ ಕೊಂಡೊಯ್ಯುವ ಬದಲು ಹಿಂದೂಗಳನ್ನು ಬಗ್ಗು ಬಡಿಯುವ ಕೆಲಸಕ್ಕೆ ಕೈ ಹಾಕಿರುವುದು ದುರಂತ. ನಿಮ್ಮ ಸರಕಾರ ಹಿಂದೂಗಳನ್ನು ತುಳಿದಷ್ಟೂ ಬಲಿಷ್ಠವಾಗುತ್ತಾ ಹೋಗುತ್ತದೆ. ಕೇವಲ ಅಲ್ಪ ಸಂಖ್ಯಾತರ ಮತದಿಂದ ಮಾತ್ರ ನಿಮ್ಮಸರಕಾರ ಅಸ್ಥಿತ್ವಕ್ಕೆ ಬಂದಿಲ್ಲ.

ಹಿಂದೂ ಸಮುದಾಯವೂ ನಿಮ್ಮನ್ನು ಬೆಂಬಲಿಸಿ ಅಧಿಕಾರದಲ್ಲಿ ಕೂರಿಸಿದ್ದಾರೆ. ಇದೀಗ ಕೇವಲ ಒಂದು ವರ್ಗಕ್ಕೆ ಮಾತ್ರ ಸವಲತ್ತು, ಕಾನೂನು ವಾಪಾಸ್ ಮತ್ತಿತರ ಸೌಲಭ್ಯ ಕಲ್ಪಿಸುತ್ತುತ್ತಿರುವುದು ಹಿಂದೂ ವಿರೋಧಿ ಎಜೆಂಡಾದ ಒಂದು ಸಂಚು ಎಂದು ಆರೋಪಿಸಿರುವ ಶಾಸಕರು ಕಾಂಗ್ರೆಸ್‌ನ ಹಿಂದೂ ವಿರೋಧಿ ನೀತಿ ವಿರುದ್ಧ ಬಿಜೆಪಿ ಹೋರಾಟ ನಡೆಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article