
ದುರ್ಗಾ ಮೆನನ್ ಆರ್. ಅವರಿಗೆ ಪಿ.ಎಚ್.ಡಿ ಪದವಿ
Saturday, October 19, 2024
ಉಡುಪಿ: ಮಂಗಳೂರು ವಿಶ್ವವಿದ್ಯಾನಿಲಯದ ಸಂಧ್ಯಾ ಕಾಲೇಜಿನ ಕನ್ನಡ ಉಪನ್ಯಾಸಕಿ ದುರ್ಗಾ ಮೆನನ್ ಆರ್. ಮಂಡಿಸಿರುವ ’ಸ್ಥಿತ್ಯಂತರಗೊಳ್ಳುತ್ತಿರುವ ತುಳುನಾಡಿನ ವಾರ್ಷಿಕ ಆವರ್ತನದ ಆಚರಣೆಗಳು’ ಮಹಾಪ್ರಬಂಧಕ್ಕೆ ಮಾಹೆ (ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್) ವಿಶ್ವವಿದ್ಯಾನಿಲಯ ಪಿ.ಎಚ್.ಡಿ ನೀಡಿದೆ.
ಅಜ್ಜರಕಾಡು ಡಾ. ಜಿ. ಶಂಕರ್ ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ನಿಕೇತನ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ್ದರು. ಅವರು ಶಕ್ತಿನಗರದ ದಿ| ರಮೇಶ್ ಹಾಗೂ ಅಮ್ಮಣಿ ದಂಪತಿ ಪುತ್ರಿ ಹಾಗೂ ಯೆಯ್ಯಾಡಿ ನಿವಾಸಿ ರವಿಕುಮಾರ್ ಪತ್ನಿ.